ಶಿವಮೊಗ್ಗ ಸ್ಮಾರ್ಟ್ ಸಿಟಿ ಸಿಗ್ನಲ್ ಸಿಸ್ಟಂ ವಿಫಲ: ಸಾರ್ವಜನಿಕರಲ್ಲಿ ಆಕ್ರೋಶ.!

0
125

ಶಿವಮೊಗ್ಗ, ಜುಲೈ 24: ಇಂದು ಬೆಳಗ್ಗಿನಿಂದ ಶಿವಮೊಗ್ಗದಲ್ಲಿ ಬಾರಿ ಮಳೆ ಸುರಿಯುತ್ತಿರುವಾಗಲೂ, ನಗರದ ಪ್ರಮುಖ ಸರ್ಕಿಟ್ ಹೌಸ್ ವೃತ್ತದಲ್ಲಿ ಸ್ಮಾರ್ಟ್ ಸಿಟಿಯ ಸಿಗ್ನಲ್ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾದುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ಜಿಲ್ಲಾಡಳಿತದ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಿದ ಆಧುನಿಕ ಸಿಗ್ನಲ್ ಕಂಟ್ರೋಲ್ ವ್ಯವಸ್ಥೆ ನಿರಂತರ ಮಳೆಯಿದ್ದರು ಹಾಪ್ ಅಗದ ಪರಿಣಾಮವಾಗಿ, ಟ್ರಾಫಿಕ್ ಸಿಗ್ನಲ್‌ಗಳು ನಿಯಮ ಪಾಲನೆ ಮಾಡಿ ವಾಹನಗಳು ನಿಂತು ಹೋಗುವಂತಾಯಿತು.

ಜನರು ಮಳೆಯಲ್ಲಿ ನೆನೆದು ದಿಕ್ಕು ತಪ್ಪಿದಂತೆ ನಿಂತು ತೊಂದರೆ ಅನುಭವಿಸುತ್ತಿದ್ದರು. ಕೆಲವರು ಕೈ ಉಬ್ಬಿಸಿ ಕೋಪದಲ್ಲಿ ಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು.

ಇಂತಹ ಸಂದರ್ಭದಲ್ಲಿ, ವಾಹನಗಳ ಸಂಚಾರವನ್ನು ನಿಯಂತ್ರಿಸಬೇಕಾದ ಟ್ರಾಫಿಕ್ ಪೊಲೀಸರ ಸಹ ನಿರ್ಲಕ್ಷ್ಯ ಜನರ ಕೋಪಕ್ಕೆ ಕಾರಣವಾಯಿತು. ಕೆಲವರು, “ಇದಕ್ಕೆ ಸ್ಮಾರ್ಟ್ ಸಿಟಿ ಹೆಸರೇನು? ಎಂಬ ಪ್ರಶ್ನೆ ಎತ್ತಿದ್ದಾರೆ. ನಗರದಲ್ಲಿ ಮೊದಲು ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಪೊಲೀಸ್ ಇಲಾಖೆಯ ನಿಯಂತ್ರಣದಲ್ಲಿತ್ತು. ಆಗ ವ್ಯವಸ್ಥೆ ಸರಿಯಿತ್ತು  ಈಗ ಸ್ಮಾರ್ಟ್ ಸಿಸ್ಟಂ ಹೆಸರಿನಲ್ಲಿ ಅನ್ಲೈನ್ ಮೂಲಕ ನಿರ್ವಹಣೆ ಮಾಡಲಾಗುತ್ತಿದ್ದು, ಯಾವಾಗಲೂ ತಾಂತ್ರಿಕ ತೊಂದರೆಗಳು ಎದುರಾಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ನಗ್ನವಾಗಿದೆ ಸ್ಮಾರ್ಟ್ ಸಿಟಿ ಸಿಗ್ನಲ್ ವ್ಯವಸ್ಥೆಯ ಯಥಾರ್ಥತೆ. ಟ್ರಾಫಿಕ್ ನಿಯಮ ಪಾಲನೆಗೆ ಒತ್ತಾಯಿಸುತ್ತಿರುವ ಜಿಲ್ಲಾಡಳಿತ ಹಾಗೂ ಪೊಲೀಸರು ಈ ರೀತಿಯ ಲೋಪ ಸರಿಪಡಿಸಬೇಕು  ಮಳೆಗಾಲದ ಸಮಯವಿದು. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಸ್ಥಳೀಯ ಮಟ್ಟದಲ್ಲಿ ಮಾನವೀಯ ಹಸ್ತಚಾಲಿತ ನಿಯಂತ್ರಣ ವ್ಯವಸ್ಥೆ ಮರುಸ್ಥಾಪಿಸುವಂತೆ ಬೇಡಿಕೆಗಳು ಕೇಳಿಬರುತ್ತಿವೆ.

“ಹೆಸರಿನಷ್ಟು ಕೆಲಸ ಮಾಡದ ಸ್ಮಾರ್ಟ್ ವ್ಯವಸ್ಥೆಗಳಿಗೆ ಜನರ ಸಹನೆಕಟ್ಟೆ ಒಡೆಯುವ ಮೋದಲು ಗಮನ ಹರಿಸಿ.!