ಇವತ್ತಿನ ದಿನ ಒಬ್ಬ ಸಾಧನೆಯ ನಕ್ಷತ್ರರ ಹುಟ್ಟಿದ ದಿನ.
ರಾಜ್ಯದ 6 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಧ್ವನಿಯಾಗಿರುವ, ಸಂಘಟನೆಯ backbone ಎನಿಸಿಕೊಂಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯಗಳು!
ನೌಕರರಿಗಾಗಿ ರಾಜ್ಯವ್ಯಾಪ್ತಿಯಲ್ಲಿ ಧ್ವನಿಯಾಗಿರುವ ಈ ನಾಯಕ ಹೆಸರನ್ನು ಕೇಳಿದರೆ – ಅವರು ಹೋರಾಡುತ್ತಾರೆ… ಅವರು ಸಾಧಿಸುತ್ತಾರೆ ಅವರು ವಿಶ್ವಾಸಾರ್ಹನಾಗಿರುತ್ತಾರೆ…” ಎನ್ನುವ ಮಾತು ಸಹಜವಾಗಿ ಬರುತ್ತದೆ.
ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ನೌಕರರ ಅನಿರ್ಧಿಷ್ಟ ಮುಷ್ಕರದ ಸಂದರ್ಭದಲ್ಲಿ, ನೌಕರರ ಬೇಡಿಕೆಗಳು, ಸರ್ಕಾರದ ಮನಸ್ಥಿತಿ ಇವೆಲ್ಲರ ಮಧ್ಯೆ ಶಾಂತಿ, ವಿವೇಕ, ಮತ್ತು ಸಮ್ಮತಿ ಸಾಧನೆ – ಈ ತ್ರೈಮೂರ್ತಿಯಂತೆ ನಡದು ಎಲ್ಲರ ಮೆಚ್ಚುಗೆಗೆ ಪಾತ್ರರಾದ ಷಡಾಕ್ಷರಿ ಅವರು ಸರ್ಕಾರದ ಮಟ್ಟದಲ್ಲೂ ಹೊಸ ಶೈಲಿಯ ನೀತಿ ಸಂವಹನದ ಮಾದರಿಯೇ ಸ್ಥಾಪಿಸಿದರು.
ಇವರ ನೇತೃತ್ವದಲ್ಲಿ “ಕರ್ನಾಟಕ ನೌಕರರ ಸಂಘಟನೆ” ಎಂಬ ಪದಕ್ಕೂ ಹೊಸ ಅರ್ಥ ಬಂದಿದೆ.ಇವತ್ತು ಈ ಸಂಘಟನೆಯ ಕಾರ್ಯಪದ್ಧತಿಯನ್ನು ದೇಶದ ಇತರ ರಾಜ್ಯಗಳ ಸಂಘಟನೆಗಳು ಅಧ್ಯಯನ ಮಾಡುತ್ತಿದೆ ಎಂದರೆ,ಇದಕ್ಕೆ ಕಾರಣ ಒಂದೇ – ಸಿ.ಎಸ್. ಷಡಾಕ್ಷರಿ.ನೌಕರರ ಜತೆಗಿನ ಅವರ ನೇರ ಸಂಪರ್ಕ, ಹೃದಯಸ್ಪರ್ಶಿ ಸಂವಾದ, ಮರುಳಗೊಳಿಸುವ ವಿಶ್ವಾಸ
ಇವುಗಳೆಲ್ಲ ಇವರಿಗೋಂದು ವ್ಯಕ್ತಿತ್ವವನ್ನಲ್ಲ, ಇವರ ನೇತೃತ್ವವನ್ನೇ ಒಂದು ಬೃಹತ್ ಶಕ್ತಿಯನ್ನಾಗಿ ಮಾಡಿದ್ದಾರೆ.
“ವಾಮನ ಮೂರ್ತಿ ಕರ್ಮ ವೀರ” –ಎಂಬಂತೆ ಶಾಂತವಾಗಿ ನಡೆದರು, ಶಕ್ತಿಯಾಗಿ ಹೋರಾಡಿದರು.ಇಂತಹ ನಾಯಕನಿಗೆ ಇಂದಿನ ಜನ್ಮದಿನದ ಸಂದರ್ಭದಲ್ಲಿ ನೌಕರ ಸಮುದಾಯದಿಂದಲೂ, ಸಾರ್ವಜನಿಕ ವಲಯದಿಂದಲೂ ಎಷ್ಟೇ ಅಭಿನಂದನೆಗಳು ಸಲ್ಲಿಸಿದರು ಕಡಿಮೆಯೇ ಆಗುತ್ತದೆ.
ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯಗಳನ್ನ ನ್ಯಾಯಾಂಗ ಇಲಾಖೆ ಯ ನೌಕರರು, ಆರೋಗ್ಯ ಇಲಾಖೆಯ ನೌಕರರು, ಪೋಲಿಸ್ ಇಲಾಖೆಯ ನೌಕರರು, ಕಂದಾಯ ಇಲಾಖೆಯ ನೌಕರರು, ಖಜಾನೆ ಇಲಾಖೆಯ ನೌಕರರು, ಶಿಕ್ಷಣ ಇಲಾಖೆಯ ನೌಕರರು ಹಾಗು ಅಖಿಲಭಾರತ ಮಹಾಸಭೆ, ಬಸವೇಶ್ವರ ಸಾಮಾಜ , ವೀರಶೈವ ಸಮಾಜ ಮುಖಂಡರು ಸಾತ್ವಿಕ ನುಡಿ ಪತ್ರಿಕೆಯ ಮೂಲಕ ಶುಭಾಶಯ ಕೋರಿದ್ದಾರೆ.