ಶಿವಮೊಗ್ಗದಲ್ಲಿಂದು ಜಾಗ್ರತೆಯ ಜಾಗರಣೆ…!ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ಶಿವಮೊಗ್ಗ ತಾಲ್ಲೂಕು ಯುವ ಘಟಕ ತನ್ನ ಪ್ರಥಮ ಉತ್ಸಾಹಪೂರ್ಣ ಸಭೆಯನ್ನ ನೂತನ ತಾಲ್ಲೂಕು ಅಧ್ಯಕ್ಷ ನವೀನ್ ವಾರದ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಯಶಸ್ವಿ ಯಾಗಿ ನೇರವೇರಿದೆ.
ಸಭೆಯ ತಾಪಮಾನ ಎತ್ತಿದವರು – ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೇಕೆರೆ ಸಂತೋಷ್ ಮತ್ತು ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ. ಇಬ್ಬರಿಗೂ ‘ಸಖತ್ ಅಭಿನಂದನೆ ಮ್ಯಾಚ್’ ನಡೆಯಿತು. ಗರ್ಲ್ಯಾಂಡ್ ಹೊತ್ತು, ಹೂಮಾಲೆ ಹಾಕಿ, ಕ್ಯಾಮೆರಾ ಕ್ಲಿಕ್ಕು… ಎಲ್ಲವೂ ಫುಲ್ ಫ್ಲೆಷ್!
ಬಳ್ಳೇಕೆರೆ ಸಂತೋಷ್ ರವರು ಅವರ ಸ್ಟ್ಯಾಂಡರ್ಡ್ ಸ್ಟೈಲ್ನಲ್ಲಿ ಮಹಾಸಭಾದ ಕಾರ್ಯಾಚಟುವಟಿಕೆಗಳ ಹೇಗೆ ಇರಬೇಕು ಎಂದು ಯುವ ಸಮಿತಿಯ ಸದಸ್ಯರಿಗೆ ಶಕ್ತಿ ಶಕ್ತಿಯಾಗಿ ಷಟ್ಚಕ್ರ ಚಕ್ರವ್ಯೂಹದಲ್ಲಿ ಹಾದಿ ತೋರಿಸಿದರು.
“ಇದು ಕೇವಲ ಸಭೆ ಅಲ್ಲ, ಇದು ಸಂಚಲನ. ಸಮಾಜ ಬದಲಾವಣೆಯ ಮೊಬೈಲ್ ಟವರ್ ಇದು!” ಎಂದರು.ಇತ್ತ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತು ಆರಂಭ ಮಾಡಿದ್ರೆ – “ಸದ್ಯದ ಟಾರ್ಗೆಟ್ – ಸದಸ್ಯತ್ವ. ಇವತ್ತಿನಿಂದಲೇ ಡೋರ್ ಟು ಡೋರ್ ಮುವ್ಮೆಂಟ್ ಶುರು. ಸಮಾಜದ ಚಟುವಟಿಕೆ ಎಂಬುದು ಫೇಸ್‌ಬುಕ್ ಪೋಸ್ಟ್ ಅಲ್ಲ, ಇದು ಫೀಲ್ಡ್ ವರ್ಕ್!” ಎನ್ನುತ್ತಾ “ಈ ಮಹಾಸಭಾ ಸಭೆ ನೋಡಿದ್ರೆ – ಯುವ ಸಮಾಜವನ್ನ ತಿದ್ದುಪಡಿಗೆ ತರೋ ಒಂದು ಹೈಪರ್ ಲಿಂಕ್ ಸುದ್ಧಿಯಂತೆ! ಯುವ ಶಕ್ತಿ ಸಕ್ರಿಯವಾಗಿ ಮೈದಾನಕ್ಕಿಳಿದಿದ್ರೆ, ಸಮಾಜದಲ್ಲಿ ಬದಲಾವಣೆ ಪೆಟ್ರೋಲ್ ಮಿಶ್ರಣದೊಂದಿಗೆ ಸ್ಪಾರ್ಕ್ ಆಗಲೇಬೇಕು. ಜೊತೆಗೆ ಸದಸ್ಯತ್ವ ಅಭಿಯಾನವೆಂದರೆ – ‘ಆಯುಧ ಪೂಜೆ’ ಅಲ್ಲ, ನೇರವಾಗಿ ‘ಬ್ರಹ್ಮಾಸ್ತ್ರ’ ಪ್ರಯೋಗ!” ಭನ್ನಿ ಉಟ್ಟಾಗಿ ಕಾಯಕಮಾಡಿ ನಮ್ಮ ಸಮಾಜಕ್ಕೆ ಒಂದಿಷ್ಟು ಸಮಯ ನೀಡೋಣ ಎಂದರು.