ಕಾರ್ಮಿಕ ಇಲಾಖೆ ರಾತ್ರಿ ದಾಖಲೆ ಸುಟ್ಟು ಹಾಕಿದ ಆರೋಪ – ಸಾರ್ವಜನಿಕರಿಂದ ಉಗ್ರ ಪ್ರತಿಬಟನೆ!?

0
43
Oplus_0

ಶಿವಮೊಗ್ಗದ ಕಾರ್ಮಿಕ ಇಲಾಖೆಯಲ್ಲಿ ಭಾನುವಾರದ ರಜಾದಿನಕ್ಕೂ ಲೆಕ್ಕವಿಲ್ಲದ ರೀತಿ ನಡೆಯುತ್ತಿರುವ ಅಪರಾಧಕಾರ್ಯಕಲಾಪಗಳು ಈಗ ಬಿರುಗಾಳಿ ಎಬ್ಬಿಸಿವೆ. ಭಾನುವಾರ ರಾತ್ರಿ, ಕಾರ್ಮಿಕ ಇಲಾಖೆಯ ಕಚೇರಿಯಲ್ಲಿರುವ ಹಲವು ದಾಖಲೆಗಳನ್ನು ಅಧಿಕಾರಿಗಳು ಸುಟ್ಟು ಹಾಕಿದ್ದಾರೆ ಎಂಬ ಗಂಭೀರ ಆರೋಪ ಇದೀಗ ,ಸಾಕ್ಷಿ ಸಮೇತ ಬಹಿರಂಗವಾಗಿದೆ.

ಈ ಘಟನೆ ನಡೆದ ಸ್ಥಳಕ್ಕೆ ವಿನೋಬನಗರ ನಿವಾಸಿಗಳು ಕಚೇರಿಗೆ ದೌಡಾಯಿಸಿ ಅಧಿಕಾರಿಗಳನ್ನು ಗೆರವ ಹಾಕಿ ಪ್ರತಿಭಟಿಸಿದರು.

ಯಾರ ಬಯವಿಲ್ಲದೆ ಸಂಪೂರ್ಣವಾಗಿ ನ್ಯಾಯ  ಮುಲೆ ಗುಂಪಾಗಿದಂತಿರುವ ಈ ಘಟನೆ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ರಜಾದಿನದಲ್ಲಿ ಯಾರ ಅನುಮತಿ ಮೇಲೆ ದಾಖಲೆಗಳನ್ನು ಸುಟ್ಟು ಹಾಕುತ್ತಿದ್ದೀರಾ?” ಎಂದು ಪ್ರಶ್ನಿಸಿದಾಗ, ಕಾರ್ಮಿಕ ಇಲಾಖೆ ಅಧಿಕಾರಿಗಳು ಮುಜುಗರದಲ್ಲಿ ಬಿದ್ದು, ಸ್ಪಷ್ಟ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿದರೆ, ಅದು ಸಾರ್ವಜನಿಕರ ಕೋಪಕ್ಕೆ ಕಾರಣವಾಯಿತು.

ವಿನೋಬನಗರದ ಪ್ರಮುಖ ರಸ್ತೆಯಲ್ಲೇ ಜನರು ಜಮಾಯಿಸಿ “ದಾಖಲೆ ಸುಟ್ಟ ಹೀನಕೃತ್ಯ ಯಾರ ಆಶೀರ್ವಾದದಿಂದ?”, “ಮಸುಕಿನ ಸಮಯದಲ್ಲಿ ಸುಟ್ಟು ಹಾಕಿದ್ದು  ನಿಜಕ್ಕೂ ದಾಖಲೆಗಳೇನಾ ಅಥವಾ ಕುತಂತ್ರದ ಭಾಗವೇ?”, ಎಂಬಂತಹ ಕೂಗುಗಳೊಂದಿಗೆ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡಿದ ವಿನೋಬನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಂತೋಷ ಅವರು, ಅಧಿಕಾರಿ ಮತ್ತು ಸಾರ್ವಜನಿಕರ ನಡುವೆ ಮಧ್ಯವರ್ತಿ ಆಗಿ, ಚರ್ಚೆ ನಡೆಸಿದರು. ಆದರೆ, ಪೊಲೀಸರ ವಿಚಾರಣೆಗೆ ಕೂಡ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡದೆ, “ನಮಗೆ ಮೇಲಧಿಕಾರಿಗಳ ಪರವಾನಗಿ ಇದೆ” ಎಂಬ ಉತ್ತರ ಮಾತ್ರ ನೀಡಿದರು. ಆದರೆ ಪರವಾನಗಿ ಸಂಬಂಧಿತ ದಾಖಲೆಗಳನ್ನು ತೋರಿಸಲು ನಿರಾಕರಿಸಿದ್ದು, ಮತ್ತಷ್ಟು ಸಂಶಯ ಹುಟ್ಟುಹಾಕಿದೆ.

ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ರಾಜಶೇಖರ  “ಇದು ಸರಳ ದಾಖಲೆ ನಾಶವಲ್ಲ. ಇದರಲ್ಲಿ ಭ್ರಷ್ಟಾಚಾರದ ಸುಳಿವು ಇದೆ. ಹಳೆಯ ಕಾರ್ಮಿಕ ಅಪಘಾತದ ಪರಿಹಾರ, ನಿವೃತ್ತಿ, ಸೇವಾನಿಯಮ ದಾಖಲೆಗಳೆಂದು ನಾವು ಅನುಮಾನಿಸುತ್ತಿದ್ದೇವೆ. ಎಲ್ಲವನ್ನೂ ಸುಟ್ಟು ಹಾಕಿ ನಂತರ ‘ಪರಮಿಷನ್’ ಇದೆ ಎಂದು ಹೇಳುವುದು ಅಸಹ್ಯ.”

ಇನ್ನು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳು, ಇಲಾಖೆಯ ಸಿಬ್ಬಂದಿಯ ಯಾರು ಯಾರು ಕಚೇರಿಗೆ ಬಂದು ದಾಖಲೆಗಳನ್ನು ತೆಗೆದುಕೋಂಡು ಹೋಗಿ ಸುಟ್ಪ ಹಾಕಿದ್ದಾರೆ ಎಂಬುದನ್ನು ನಾಳೆ ಪರಿಶಿಲಿಸುತ್ತೆವೆ ಎನ್ನುತ್ತಾರೆ.

ಈ ನಡುವೆ, ಸಾರ್ವಜನಿಕರು ಮಾಧ್ಯಮಗಳ ಮುಖಾಂತರ ಜಿಲ್ಲಾಧಿಕಾರಿ ಹಾಗೂ ಕಾರ್ಮಿಕ ಆಯುಕ್ತರ ಗಮನ ಸೆಳೆಯುವ ಯತ್ನದಲ್ಲಿದ್ದಾರೆ.

 

ಇದು ಕೇವಲ ದಾಖಲೆ ಸುಡುವ ಘಟನೆ ಅಲ್ಲ. ಇದು ಸಾರ್ವಜನಿಕ ನಂಬಿಕೆಗೆ ಬೆಂಕಿ ಹಚ್ಚುವ ಪ್ರಯತ್ನ. ನ್ಯಾಯಸಮ್ಮತ ತನಿಖೆ ನಡೆಯಬೇಕು, ತಪ್ಪಿತಸ್ಥರಿಗೆ ಕಾನೂನುಬದ್ಧ ಶಿಕ್ಷೆ ಆಗಬೇಕು ಎಂಬುದು ಜನರ  ಆಗ್ರಹವಾಗಿದೆ.

ಕಾನೂನುಗೂ ಮಿಕ್ಕವರಂತೆ ವರ್ತಿಸುತ್ತಿರುವ ಇಂತಹ ಅಧಿಕಾರಿಗಳಿಗೆ ಪಾಠ ಕಲಿಸಲು ಕಾಲವೇ ಉತ್ತರ ನೀಡಬೇಕು!