C. S. ಷಡಾಕ್ಷರಿ – ಒಂದು ನಿರ್ಧಾರಾತ್ಮಕ ನಾಯಕತ್ವದ ಎನಿದು ಅಧ್ಯಾಯ.!?

0
316

ಕಳೆದ ವಾರ ಮಹಾನಗರ ಪಾಲಿಕೆಯ ನೌಕರರು, ಇತ್ತೀಚೆಗೆ ರಾಜ್ಯದ ಮಹಾನಗರ ಪಾಲಿಕೆ  ಹಾಗೂ ನಗರ ಪಾಲಿಕೆ ನೌಕರರು ಅನಿರ್ದಿಷ್ಟ ಅವಧಿ ಮುಷ್ಕರವನ್ನು ಕೈಗೊಂಡಿದ್ದರು ನೌಕರರು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ರಾಜ್ಯದ ನಗರ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಂತೆ ಪರಿಣಮಿಸಿತು. ದಿನದ ಬಾಳಿಗೆ ದಿಕ್ಕು ತೋರಿಸುವರು ನೌಕರರು ಎಂಬುದನ್ನು ಈ ಸಂದರ್ಭದಲ್ಲಿ ನಾವು ನಿಜವಾಗಿ ಅರಿತೆವು.

ಇದೊಂದು ಕಠಿಣ ಸಮಯವಾಗಿತ್ತು. ಮುಷ್ಕರಕ್ಕೆ ಇಳಿದ ನೌಕರರನ್ನು ಹಿಂಪಡೆಯುವ ಕೆಲಸ ಕೇವಲ ಮಾತಿನಲ್ಲಾಗಲಿಲ್ಲ – ಅದು ವಿಶ್ವಾಸ ನಿರ್ಮಾಣದ ಪ್ರಕ್ರಿಯೆಯಾಗಿದೆ.

ಈ ಕಾರ್ಯದಲ್ಲಿ ಷಡಾಕ್ಷರಿ ಅವರು ಮಹತ್ವದ ಪಾತ್ರವಹಿಸಿದ್ದು, ಅವರ ನಡೆ ಇನ್ನು ಹಲವು ಸಂಘಟನೆಯ ಮುಖಂಡರಿಗೆ ಮಾರ್ಗದರ್ಶನ

ಇದನ್ನು ಅವಲೋಕಿಸಿದಾಗ,  ರಾಜ್ಯ ಸರ್ಕಾರಿ ನೌಕರ ಪರವಾಗಿ “ಬದಲಾಗ್ತಾ ಇದೆ ರಾಜಕಾರಣ… ಆದರೆ ಒಬ್ಬ ಷಡಾಕ್ಷರಿ ಬದಲಾಗಲ್ಲ!” ಎಂಬ ಮಾತು ಸತ್ಯವಾಗಿದೆ  ಈ ಗೊಂದಲದ ಸಂದರ್ಭದಲ್ಲಿ ಶಾಂತಿ ಹಾಗೂ ಸಮಾಧಾನದ ದಾರಿ ತೋರಿಸಿದವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀ C. S. ಷಡಾಕ್ಷರಿ ಅವರು ತೋರಿಸಿದ ಶ್ರದ್ಧೆಯು, ಧೈರ್ಯವು ಮತ್ತು ಸರ್ಕಾರದೊಂದಿಗೆ ನಡೆಸಿದ ನಿಖರ ಮಾತುಕತೆಯು ಈ ನೌಕರರ ಸಮುದಾಯಕ್ಕೆ ಆಶ್ವಾಸನೆಯ ಬೆಳಕು ಮುಖ್ಯಮಂತ್ರಿ ಅವರ ಜೊತೆಗಿನ ನೇರ ಸಂವಾದ, ಮಾನ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಸುರೇಶ್ ರವರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಇವರ ಸಮ್ಮುಖದಲ್ಲಿ  ನೌಕರರ ಬೇಡಿಕೆಗಳನ್ನು ಸ್ಪಷ್ಟವಾಗಿ ಮಂಡಿಸಿರುವ ಷಡಾಕ್ಷರಿ ಅವರ ಶೈಲಿ, ಇದು ಕೇವಲ ಒಂದು ಸಂಘದ ನಾಯಕತ್ವವಲ್ಲ – ಇದು ಜನಸೇವಾ ಯತ್ನದ ಒಂದು ಪ್ರತೀಕವಾಗಿದೆ,  ಸರ್ಕಾರ-ಸಂಘದ ನಡುವಿನ ನೈಜ ಸಮಾಲೋಚನೆ, ಬದ್ಧತೆ ಮತ್ತು ಶಿಸ್ತು ಕೂಡ ವ್ಯವಸ್ಥಿತ ವ್ಯವಸ್ಥೆ ನಿರ್ಮಾಣಕ್ಕೆ ಅಗತ್ಯವೆಂಬುದು. ಇಂತಹ ಹೊಣೆಗಾರ ನಾಯಕರ ನಿರಂತರ ಸಾನಿಧ್ಯವೇ ನೌಕರರ ಸಮುದಾಯಕ್ಕೂ, ಸಾರ್ವಜನಿಕರ ಭದ್ರತೆಗೂ ನಂಬಿಕೆಯ ಮೂಲವಾಗಿದೆ.

ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯೊಂದಿಗೆ ನಡೆಸಿದ ಸಭೆಯಲ್ಲಿ ಕೂಡ, ಅವರ ಸ್ಥಿರತೆ, ನಾಯಕತ್ವ ಮತ್ತು ನೇರ ನುಡಿ ಗಮನಾರ್ಹವಾಗಿತ್ತು.

ಶಾಸನ-ನಿಯಮಗಳ ಎದೆಗಟ್ಟಿದ ಪ್ರಕ್ರಿಯೆಗಳ ನಡುವೆಯೂ, ನೌಕರರ ಪರ ಧ್ವನಿ ಎತ್ತುವಲ್ಲಿ ಅವರು ತೋರಿದ ನಿಷ್ಠೆ ಖಂಡಿತವಾಗಿ ಶ್ಲಾಘನೀಯ ಹೀಗಾಗಿ ಬೆಂಗಳೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ಶ್ರೀ ಅಮೃತ್ ರಾಜ್ ರವರ ನಿಯೋಗವು ಸಭೆ ನಡೆಸಿದ್ದು ಸಭೆಯಲ್ಲಿ ಮಾನ್ಯ ಸಚಿವರು ಮತ್ತು ಮಹಾನಗರ ಪಾಲಿಕೆಯ ನೌಕರರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವುದು ಸಮಾದನಕರ ಸಂಗತಿ.