ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಡೆದ ಗಣಪತಿ ಮತ್ತು ನಾಗರ ವಿಗ್ರಹ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಶಿವಮೊಗ್ಗ ನಗರ ಶಾಸಕರಾದ ಶ್ರೀ ಚನ್ನಬಸಪ್ಪನವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಾನೂನು ಬದ್ಧವಾಗಿ ಇದಿಯೋ ಬಿಟ್ಟಿದ್ಯೋ ಗೊತ್ತಿಲ್ಲ ನನಗೆ ಇದಲ್ಲದೆ ಯಾರು ಮನೆ ಗೊತ್ತಿದೆ ನನಗೆ ಯಾರ್ ಜಾಗ ಗೊತ್ತಿದೆ ನನಗೆ, ಅಕ್ರಮವಾಗಿ ಕಟ್ಟುತ್ತಿರುವ ಮನೆ.
ದೇವಸ್ಥಾನ ಇರೋದು ಸಹಿಸಿಕೊಳ್ಳಲಿಕ್ಕೆ ಆಗದಿದ್ದರೆ ಆ ನನ್ನ ಮಗ ಇಲ್ಲಿ ಇರಬಾರದು ಸಾರ್ ನೀವು ಕ್ರಮ ತೆಗೆದುಕೊಳ್ಳದೆ ಹೋದರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ನಾವು ಕ್ರಮ ತೆಗೆದುಕೊಳ್ಳಲು ಬರಲ್ಲ್ವಾ ಜೆಸಿಬಿ ತಂದು ಓಡಿಸಲಿಕ್ಕೆ ಬರಲ್ವಾ ನಾವೇನು ಬಳೆ ಥ್ಕೊಂಡಿಲ್ಲ ಬಡವರು ವಾಸ ಮಾಡುತ್ತಿದ್ದಾರೆ ತಡ್ಕೊಳ್ಳಿಕ್ಕೆ ಆಗಲ್ಲ ಅಂದ್ರೆ ಹೋಗೋ ಮಗನೇ ಎಂದು ನಾವು ಹೇಳಬೇಕಲ್ವಾ ಅವರ ಮನೆಯಲ್ಲಿ ಗಣಪತಿಯನ್ನು ಇಟ್ಟಿದ್ದಾರ ನಮಗೆ ಶಾಂತಿಯಿಂದ ಇರಬೇಕು ನಮಗೆ ಶಾಂತಿಯಿಂದ ಇರಲಿಕ್ಕೂ ಬರುತ್ತೆ ಇಲ್ಲ ಅಂದ್ರೆ ಚಡ್ಡಿ ಹರಿಲಿಕ್ಕು ಬರುತ್ತೆ ನೀವೆಲ್ಲ ಇದ್ದೀರಾ ಅಂತ ಸುಮ್ಮನಿದ್ದೀವಿ ಅಷ್ಟೇ ನಾಳೆಯಿಂದ ಟೆನಿಕಾಸ್ಟ್ ಅವರೆಲ್ಲ ಅರೆಸ್ಟ್ ಆಗಬೇಕು ಮುಂಚೆಯಿಂದ ಇಲ್ಲಿ ವಾಸ ಮಾಡುವ ಜನರಿವರು ಆ ನನ್ನ ಮಗನಿಗೆ ಬೇಡ ಎಂದರೆ ಕಿತ್ತು ಬಿಸಾಕ್ಕಡು ಹೋಗಲಿ ಇವರು ಕೋರ್ಟ್ ನಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿರುವರೂ ಇವರು ಶಾಂತಿನಗರದಲ್ಲಿ ಶಾಂತಿ ಕದಡುವಂತವರನ್ನು ಇಲ್ಲಿ ಬದುಕಲು ಬಿಡಬೇಡಿ ರಾಗಿ ಗುಡ್ಡದಲ್ಲಿ ಬೂಗಿಲೆದ್ದಿರುವ ಘಟನೆ ಹಿನ್ನೆಲೆಯಲ್ಲಿ ಶಾಸಕ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಪೊಲೀಸರಿಗೆ ಸೂಕ್ತಕ್ರಮ ಕೈಗೊಳ್ಳುವಂತೆ ಚೆನ್ನಿ ಗುಡುಗಿದ್ದಾರೆ.
ಈ ಸಂದರ್ಭದಲ್ಲಿ, ಬಿಜೆಪಿ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ದೀನದಯಾಳು, ಮಂಜುನಾಥ್ ಕೆ ನವಲೆ, ಮಾಧ್ಯಮ ಸಂಚಾಲಕ ಶ್ರೀನಾಗ, ಸ್ಥಳೀಯ ಪ್ರಮುಖರು, ಮತ್ತು ಬಂಗಾರಪ್ಪ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ಈ ಘಟನೆ ಸ್ಥಳೀಯ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.