ಶಿಕಾರಿಪುರ, ಜೂನ್ 14 ಶಿಕಾರಿಪುರ ತಾಲೂಕಿನ ಗಾಮ ಗ್ರಾಮದ ನಿವಾಸಿಯಾಗಿರುವ ಶಿವಯೋಗಿ ಎಂಬುವವರು ಆರ್ಗನಿಕ್ ಫುಡ್ ಉತ್ಪನ್ನಗಳ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಜೂನ್ 12, 2025 ರಂದು ಮಧ್ಯಾಹ್ನ ತಮ್ಮ ಶಿಫ್ಟ್ ಕಾರಿನಲ್ಲಿ ಶಿವಮೊಗ್ಗಕ್ಕೆ ತೆರಳಿ ವ್ಯಾಪಾರ ಮುಗಿಸಿಕೊಂಡು ಊರಿಗೆ ವಾಪಸಾಗುತ್ತಿದ್ದರು. ರಾತ್ರಿ ಸುಮಾರು 9:40ರಿಂದ 10 ಗಂಟೆಯ ಸಮಯದಲ್ಲಿ, ಅವರು ಸುತ್ಕೋಟೆ ಟೋಲ್ ಗೇಟ್ ಬಳಿ ಕಾರು ನಿಧಾನಗತಿಯಲ್ಲಿ ಚಲಾಯಿಸುತ್ತಿದ್ದಾಗ, ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಕಾರನ್ನು ಬಡಿದನು.
ಕಾರನ್ನು ನಿಲ್ಲಿಸಿದ ಶಿವಯೋಗಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆತ, ಕಾರಿನ ಒಳಗೆ ಕೈ ಹಾಕಿ ಅವರ ಮುಖ ಮತ್ತು ಎದೆಗೆ ಗುದ್ದಿದ್ದಾನೆ.
ಈ ಸಂದರ್ಭದಲ್ಲಿ ಆತನೊಂದಿಗೆ ಇದ್ದ ಇತರ ವ್ಯಕ್ತಿಗಳು “ನಾಯಿಗೆ ಅಪಘಾತ ಮಾಡಿದ್ದೀಯ” ಎಂಬ ನಾಟಕ ಮಾಡುತ್ತಾ, ಭಯಪಡಿಸಿ ಹಣ ಕಿತ್ತುಕೊಂಡಿದ್ದಾರೆ.
ಶಿವಯೋಗಿಯವರು ತಕ್ಷಣ ಶಿಕಾರಿಪುರಕ್ಕೆ ಮರಳಿ ಚಿಕಿತ್ಸೆಗೆ ಒಳಗಾದ ನಂತರ, ಜೂನ್ 14 ರಂದು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿ್ಸ್ ಇನ್ಸ್‌ಪೆಕ್ಟರ್ ದೀಪಕ್ ನೇತೃತ್ವದ ತಂಡ ತನಿಖೆ ಕೈಗೊಂಡು ಸ್ಥಳೀಯ ಮಾಹಿತಿಗಳು ಹಾಗೂ ಪತ್ತೆದಾರಿ ಕ್ರಮದ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಬಂಧಿತ
ಆರೋಪಿಗಳು:1. ಕಾರ್ತಿಕ್
2. ಗಂಗಾಧರನಾಯ್ಕ್ – ಇಬ್ಬರೂ ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿ ತಾಂಡಾ ನಿವಾಸಿಗಳಾಗಿದ್ದಾರೆ.
ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಇತರರೂ ಒಳಗೊಂಡಿರುವ ಸಾಧ್ಯತೆಗಳತ್ತ ಪೊಲೀಸರು ಗಮನಹರಿಸಿದ್ದಾರೆ.
ಸಾರ್ವಜನಿಕ ಸ್ಥಳವಾದ ಟೋಲ್ ಗೇಟ್ ಬಳಿ ಈ ರೀತಿಯ ದಾಳಿ ನಡೆಯುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. “ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವವರ ಭದ್ರತೆ ಕುರಿತು ಅಧಿಕಾರಿಗಳು ಗಂಭೀರವಾಗಿ ಯೋಚಿಸಬೇಕು,”ಶಿವಯೋಗಿಯವರು ಈ ದಾಳಿಯಿಂದ ಚೇತರಿಸಿಕೊಂಡಿದ್ದು, “ಹಣಕ್ಕಾಗಿ ಇಂಥ ನಾಟಕ ಮಾಡುವುದು ದುಃಖಕರ. ಪೋಲಿಸರು ಶೀಘ್ರ ಕ್ರಮ ಕೈಗೊಂಡು ಆರೋಪಿಗಳನ್ನು ಹಿಡಿದಿರುವುದು ಶ್ಲಾಘನೀಯ,” ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.