ಹಾರನಹಳ್ಳಿ ನಾಡಕಛೇರಿಯಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆ – ಆಡಳಿತದ ನಿರ್ಲಕ್ಷ್ಯಕ್ಕೆ ಜನ ಆಕ್ರೋಶಹಾರನಹಳ್ಳಿ, ಶಿವಮೊಗ್ಗ ಜಿಲ್ಲೆ– ವಿಶೇಷ ವರದಿ
ಹಾರನಹಳ್ಳಿ ಹೋಬಳಿಯ ನಾಡಕಛೇರಿಯಲ್ಲಿ ಸಾರ್ವಜನಿಕ ಸೇವೆಗಳ ಕೊರತೆಯಿಂದ ಗ್ರಾಮಸ್ಥರು ತೀವ್ರ ಬೇಸತ್ತಿ ವ್ಯಕ್ತಪಡಿಸುತ್ತಿದ್ದಾರೆ. ಅಟಲ್ ಜನಸ್ನೇಹಿ ಕೇಂದ್ರದ ಮೂಲಕ ನೀಡಬೇಕಾದ ಜಾತಿ, ಆದಾಯ, ವಾಸದೃಢೀಕರಣ, ಪಹಣಿ, ಮರಣ ಪ್ರಮಾಣ ಪತ್ರ ಸೇರಿದಂತೆ ಇತರ ಮಹತ್ವದ ದಾಖಲೆಗಳನ್ನು ಪಡೆಯಲು ಜನತೆ ದಿನದಿಂದ ದಿನಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಪ್ರತಿ ದಿನ ಬೆಳಿಗ್ಗೆಯಿಂದಲೇ ಜನತೆ ಕಛೇರಿಗೆ ಆಗಮಿಸುತ್ತಿದ್ದರೂ, ಕಂಪ್ಯೂಟರ್ ಅಪರೇಟರ್ ಕೀರ್ತನ ಕೇವಲ ಬೆಳಿಗ್ಗೆ 10 ರಿಂದ 1 ಗಂಟೆ ತನಕ ಮಾತ್ರ ಲಭ್ಯವಿರುತ್ತಾರೆ. ಮಧ್ಯಾಹ್ನ ನಂತರ ತಾಲ್ಲೂಕು ಕಛೇರಿಗೆ ತೆರಳುತ್ತಾರೆ ಎಂಬುದು ನಾಡಕಛೇರಿಯ ಉತ್ತರ. ಅದರೆ ಇದು ಎಷ್ಟು ಸತ್ಯವೋ ಸಂಬಂಧ ಪಟ್ಟ ಅಧಿಕಾರಿಗಳೆ ವಿವರಣೆ ನೀಡಬೇಕು.!?
ಈ ಸಮಯ ಮಿತಿ ಸಾರ್ವಜನಿಕರಿಗೆ ಸಾಕಾಗದ ಕಾರಣ, ಬಹುಪಾಲು ಜನರಿಗೆ ಸೇವೆಗಳು ದೊರೆಯುತ್ತಿಲ್ಲ.
ಮೇಲಾಗಿ, ವಿದ್ಯುತ್ ಸಮಸ್ಯೆಯೂ ತೀವ್ರವಾಗಿದೆ. ಕಡಿಮೆ ಅವಧಿಗೆ ವಿದ್ಯುತ್ ವ್ಯತ್ಯಯವಾದರೂ ಕೆಲಸ ಸಂಪೂರ್ಣ ನಿಂತುಹೋಗುತ್ತದೆ. ಯುಪಿಎಸ್ ಅಥವಾ ಬ್ಯಾಟರಿ ವ್ಯವಸ್ಥೆಯಿಲ್ಲದ ಕಾರಣ, ಅರ್ಜಿ ಸಲ್ಲಿಕೆ, ದೃಢೀಕರಣ ಮತ್ತು ದಾಖಲೆ ಮುದ್ರಣ ಎಲ್ಲವೂ ಸ್ಥಗಿತಗೊಳ್ಳುತ್ತಿದೆ.
“ನಾವು ಕೂಲಿ ಕೆಲಸ ಬಿಟ್ಟು ಪಹಣಿ ಅಥವಾ ಜಾತಿ ಪತ್ರಕ್ಕಾಗಿ ಬಂದರೂ, ‘ಇವತ್ತು ಸಿಬಂದಿ ಇಲ್ಲ’, ‘ಕರೆಂಟ್ ಇಲ್ಲ’, ‘ಕಂಪ್ಯೂಟರ್ ಕೆಲಸ ಮಾಡುತ್ತಿಲ್ಲ’ ಎಂಬ ಉತ್ತರ ನೀಡುತ್ತಾರೆ. ಒಂದು ಪತ್ರಕ್ಕಾಗಿ ಮೂರು ನಾಲ್ಕು ಸಲ ಬರಬೇಕಾಗಿದೆ” ಎಂದು ಹಾರನಹಳ್ಳಿ ಹೋಬಳಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸೈಬರ್ ಕೇಂದ್ರದಲ್ಲಿ ಸಿಗುವ ಪಹಣಿಗಳಲ್ಲಿ ಏಕ ವ್ಯಕ್ತಿಯ ಪಹಣಿ ಮಾತ್ರ ನಾಡಕಛೇರಿಯಲ್ಲಿ ಲಭ್ಯವಿರುವುದರಿಂದ, ಜನತೆ ಜಿಲ್ಲಾ ಆಡಳಿತಕ್ಕೆ ಚಿಮಾರಿ ಹಾಕುತ್ತಿದ್ದಾರೆ ಮರಣ ಪ್ರಮಾಣ ಪತ್ರ ಅಥವಾ ಹಲವು ದಾಖಲೆಗಳಿಗೂ ಮೂರು ನಾಲ್ಕು ದಿನ ಕಚೇರಿಗೆ ಅಲೆದಾಡಬೇಕಾಗಿದೆ.
ಈ ಕುರಿತು ಹೋಬಳಿಯ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ನಾಡಕಛೇರಿಯಲ್ಲಿ ದಿನಪೂರ್ತಿ ಕಂಪ್ಯೂಟರ್ ಅಪರೇಟರ್ ನಿಯೋಜನೆ, ಯುಪಿಎಸ್ ವ್ಯವಸ್ಥೆ, ಸಂಪೂರ್ಣ ಸಮಯ ಕಾರ್ಯನಿರ್ವಹಣೆ ಹಾಗೂ ಸೇವೆಗಳ ಸುಗಮತೆಯ ಮೇಲ್ವಿಚಾರಣೆ ಕುರಿತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮುದ್ದಿನಕೊಪ್ಪ ರೈತ ಶಾಂತಕುಮಾರ ಅವರ ಹೇಳಿಕೆ
ಕಡ್ಡಾಯವಾಗಿ ಕಂಪ್ಯೂಟರ್ ಅಪರೇಟರ್ ದಿನಪೂರ್ತಿ ಕಛೇರಿಯಲ್ಲಿರಬೇಕು. ಇಲ್ಲವಾದರೆ ಈ ಕೇಂದ್ರದ ಅಸ್ತಿತ್ವಕ್ಕೆ ಅರ್ಥವಿಲ್ಲ” –
ನಾಗಮ್ಮ, ಬಡ ಕೂಲಿ ಕೆಲಸದ ಮಹಿಳೆ.
ಸರ್ಕಾರಿ ಕಛೇರಿಗಳಲ್ಲಿ ಜನಸಾಮಾನ್ಯರಿಗೆ ಸೂಕ್ತ ಸೇವೆ ಒದಗಿಸುವ ನಿಟ್ಟಿನಲ್ಲಿ ನಾಡಕಛೇರಿಗಳು ಸ್ಥಾಪಿಸಲ್ಪಟ್ಟಿದ್ದರೂ, ಹಾರನಹಳ್ಳಿ ನಾಡಕಛೇರಿಯ ಸ್ಥಿತಿ ಇದು ಕೇವಲ ಹೆಸರುಗಷ್ಟೆ ಎಂಬಂತೆ ಬಿಂಬಿಸುತ್ತದೆ. ಈ ಹಿನ್ನೆಲೆ, ಜಿಲ್ಲಾಧಿಕಾರಿಗಳಿಂದ ತ್ವರಿತ ಕ್ರಮ ನಿರೀಕ್ಷಿಸಲಾಗುತ್ತಿದೆ.