ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಚೌಕಿ ಗೆಳೆಯರ ಬಳಗ, ಭಗತ್ ಸಿಂಗ್ ವೃತ್ತ ವಿನೋಬನಗರ ಶಿವಮೊಗ್ಗ ಇವರು ರೈತರ ಕಲ್ಯಾಣ ಹಾಗೂ ಜಗತ್ತಿನ ಶಾಂತಿಯ ಸಲುವಾಗಿ ಪ್ರತಿವರ್ಷ ಧಾರ್ಮಿಕ ಕ್ಷೇತ್ರಗಳಿಗೆ ಪಾದಯಾತ್ರೆ ಹಮ್ಮಿಕೊಳ್ಳುವುದು ಸಂಪ್ರದಾಯವಾಗಿ ಮುಂದುವರೆದಿದೆ. ಇತ್ತೀಚೆಗೆ ಇವರಿಂದ ನಡೆದ ಧರ್ಮಸ್ಥಳ ಪಾದಯಾತ್ರೆ ಯಶಸ್ವಿಯಾಗಿ ನೆರವೇರಿದ್ದು, ಭಾಗವಹಿಸಿದ್ದ ಭಕ್ತರಲ್ಲಿ ಧಾರ್ಮಿಕ ಭಾವನೆ ಹಾಗೂ ಸಮಾಜ ಸೇವೆಯ ಪ್ರಜ್ಞೆ ಬೆಳೆಯುವಂತೆ ಮಾಡಿದೆ.
ಈ ಸಾಲಿನ ವಿಶೇಷತೆ ಎಂದರೆ, ರೈತರು ಉತ್ತಮ ಬೆಳೆ ಪಡೆದು ಬಾಳಲ್ಲಿ ಸಮೃದ್ಧಿಯನ್ನು ಅನುಭವಿಸಬೇಕು ಎಂಬ ಉದ್ದೇಶದಿಂದ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನಕ್ಕಾಗಿ ಪಾದಯಾತ್ರೆ ನಡೆಸಲಾಗಿದೆ. ಮಳೆಗಾಲ ಹತ್ತಿರವಾಗುತ್ತಿರುವಾಗ ರೈತರ ಕಣ್ಣು ಆಕಾಶದತ್ತ ಇರುವುದು ಸಾಮಾನ್ಯ. ಈ ಹಿನ್ನಲೆಯಲ್ಲಿ ಸಮೃದ್ಧ ಮಳೆ ಬಂದು, ಭೂಮಿ ಹಸಿರಾಗಲೆಂದು ದೇವಿಯ ಆಶೀರ್ವಾದ ಕೋರಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಮೇ 16 ರಂದು ಬೆಳಗ್ಗೆ ವಿನೋಬನಗರ ಚೌಕಿ ಯಿಂದ ಪಾದಯಾತ್ರೆ ಆರಂಭವಾಗಿದ್ದು, ಭಕ್ತಿಯಿಂದ ತುಂಬಿದ ಈ ಪಾದಯಾತ್ರೆ ಹೆಜ್ಜೆಹೆಜ್ಜೆಗೆ ಧಾರ್ಮಿಕ ಘೋಷಣೆಯೊಂದಿಗೆ ಸಾಗುತ್ತಿದ್ದು, ಹಲವು ನಗರದಲ್ಲಿ ಯಾತ್ರಿಕರಿಗೆ ನೀರು, ಆಹಾರ ಸೇರಿದಂತೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.
ಈ ಯಾತ್ರೆಯು ಧರ್ಮ, ಸಂಸ್ಕೃತಿ, ಸಹನಶೀಲತೆ, ಸಹಕಾರ ಇತ್ಯಾದಿ ಮೌಲ್ಯಗಳನ್ನು ಬೆಳಗಿಸುವ ಮಹತ್ತರ ಉದ್ದೇಶವನ್ನು ಹೊಂದಿದೆ. ಎಲ್ಲರಿಗೂ ಸಹಜವಾಗಿ ಸಮೃದ್ಧ ಮಳೆ ಬೇಕೆಂಬ ಆಶಯದೊಂದಿಗೆ ನಡೆಯುತ್ತಿರುವ ಈ ಪಾದಯಾತ್ರೆ, ಧರ್ಮ ಮತ್ತು ರೈತನ ನಡುವೆ ಇರುವ ಆಧ್ಯಾತ್ಮಿಕ ಸಂಪರ್ಕವನ್ನು ಮತ್ತೆ ಸೂಸುತ್ತಿದೆ.
ಶ್ರದ್ಧಾ, ಭಕ್ತಿ ಹಾಗೂ ಸೇವಾ ಮನೋಭಾವದಿಂದ ನಡೆಯುತ್ತಿರುವ ಈ ಪಾದಯಾತ್ರೆಗೆ ಚೌಕಿ ಗೇಳಯರ ಬಳಗ ಆಶೀರ್ವಾದಗಳ ಸುರಿಮಳೆಯೇ ಸುಲ್ಲುಸುತಿದ್ದಾರೆ ಇಂತಹ ಪವಿತ್ರ ಯಾತ್ರೆಗಳು ಸಮಾಜದಲ್ಲಿ ಧಾರ್ಮಿಕ ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸಿ ಚೌಕಿ ಹೆಸರು ಶಿವಮೊಗ್ಗ ಜನತೆಯಲ್ಲಿ ಮತ್ತೆ ಮರುಕಳಿಸಿದೆ.