“ಶಿವಮೊಗ್ಗ ದ” ರೌಡಿ ಇತಿಹಾಸ .!?

0
290

“ಶಿವಮೊಗ್ಗ ದ” ರೌಡಿ ಇತಿಹಾಸ .!?
ಕೋತ್ವಲ ರಾಮಚಂದ್ರ ಶಿವಮೊಗ್ಗ ನಾಗಾ ವೆಂಕಟೇಶ
ಶಿವರಾಂ ಲವ ಕುಶ ಲೋಕಿ ನಸ್ರು ದಾಡಿ ಬಷಿರ್ ವಚ್ಚಿ 
ಆನಂದ  ಅಲ್ಬರ್ಟಾ ಹೀಗೆ ,,,,,,,,,,,,,,,,, 

2022ರ ಜುಲೈ 14 ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಬಳಿ ಕೂದಲಳತೆ ದೂರದಲ್ಲಿ  ನಡೆದಿದ್ದ ರೌಡಿ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾದ ಕಾಡಾ ಕಾರ್ತಿಕ್ ಮತ್ತು ಸಹಚರರನ್ನು ಕೋರ್ಟ್ ಆರೋಪ ಮುಕ್ತ ಗೊಳಿಸಿ ಆದೇಶಿಸಿದೆ.

ಹಂದಿ ಅಣ್ಣ ತನ್ನ ಸ್ನೇಹಿತನೊಂದಿಗೆ ಲಕ್ಷ್ಮೀ ಚಿತ್ರಮಂದಿರದ ಕಡೆಯಿಂದ ವಿನೋಬನಗರ ಪೊಲೀಸ್ ಚೌಕಿ ಕಡೆಗೆ ಬೈಕ್ನಲ್ಲಿ ಬರುತ್ತಿರುವಾಗ ಇನ್ನೋವಾದಲ್ಲಿ ಬಂದ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿದ್ದಾರೆ. ಆಗ ತನ್ನ ಮೇಲೆ ಅಟ್ಯಾಕ್ ನಡೆಯುತ್ತದೆ ಎಂಬುದನ್ನು ತಿಳಿದ ಹಂದಿ ಅಣ್ಣಿ ಪೊಲೀಸ್ ಚೌಕಿ ಬಳಿ ಇರುವ ಪೊಲೀಸ್ ಠಾಣೆಯತ್ತ
ಓಡಲಾರಂಭಿಸಿದ್ದಾನೆ. ಆದರೆ ಇನ್ನೋವಾದಿಂದ ಇಳಿದು ಶರವೇಗದಲ್ಲಿ ಓಡಿದ ದುಷ್ಕರ್ಮಿಗಳು ಲಾಂಗು ಮಚ್ಚುಗಳನ್ನು ಹಿಡಿದು ಜನರ ಮಧ್ಯೆಯೇ ಓಡುತ್ತಿದ್ದ ಹಂದಿ ಅಣ್ಣಿಯನ್ನು ಬೆನ್ನಟ್ಟಿದ್ದಾರೆ  ಇನ್ನೇನು ನೂರು ಮೀಟ‌ರ್ ದೂರದಲ್ಲಿ ಪೊಲೀಸ್ ಠಾಣೆ ಇದೆ ಎನ್ನುವಷ್ಟರಲ್ಲಿ ಹಂದಿ ಅಣ್ಣಿ ತಲೆ ಮೇಲೆ ದುಷ್ಕರ್ಮಿಗಳು ಹಿಂದಿನಿಂದ ಮಚ್ಚಿನಲ್ಲಿ ಹೊಡೆದಿದ್ದಾರೆ ಆಗ ಹಂದಿ ಅಣ್ಣಿ ನೆಲಕ್ಕೆ ಬೀಳುತ್ತಿದ್ದಂತೆ ದುಷ್ಕರ್ಮಿಗಳು ತಲೆಯ ಮೇಲೆ ಲಾಂಗು ಮತ್ತು ಮಚ್ಚುಗಳಿಂದ ಮನಸೋಇಚ್ಛೆ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಹಂದಿ ಅಣ್ಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನ್ನು ಖಚಿತ ಪಡಿಸಿಕೋಂಡು ತಾವು ಬಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದರು.

ಅವಳಿ  ಸೋದರ  ಲವ ಹಾಗೂ ಕುಶನ ಹತ್ಯೆ ಪ್ರಕರಣದಲ್ಲಿ ಕಿಂಗ್‌ಪಿನ್ ಆಗಿದ್ದ ಹಂದಿ ಅಣ್ಣಿಯನ್ನು ವಿನೋಬನಗರ ಪೊಲೀಸ್ ಚೌಕಿ ಬಳಿ ಬೆಳಗಿನ ಸಮಯದಲ್ಲೇ ಮರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ  ಭೂಗತ ಲೋಕಕ್ಕೆ ಬಿಗ್ಎಂಟ್ರಿ ಕೋಟಿದ್ದ ಗ್ಯಾಂಗ್,  

ಇದೆ ಹಂದಿ ಅಣ್ಣಿ ಅವಳಿ ಪತಾಕಿ ಸೋದರರಾದ ಲವ ಹಾಗೂ ಕುಶನ ಹತ್ಯೆಯ ನಂತರ ಹೆಸರಾಂತ ಪತ್ರಕರ್ತ ರವಿಬೇಳಗೆರೆ ಕಚೇರಿ ಹೋಗಿ ಮಾತು ಕಥೆ ಮೂಗಿಸಿ.!? ಬೆಂಗಳೂರು ಪೊಲೀಸ್ ಗೆ ಸೇರಂಡರ ಮಾಡಿಸಿದ್ದರು ವಿಪಾರ್ಯಸ ವೇಂದರೆ
ಹಂದಿ ಅಣ್ಣಿಯ ಕೊಲೆ ಬಳಿಕ ಆರೋಪಿಗಳು ಚಿಕ್ಕಮಗಳೂರಿನ ಪೊಲೀಸರ ಮುಂದೆ ಶರಣಾಗಿದ್ದ ಕಾರ್ತಿಕ್, ಚಂದನ್, ನಿತಿನ್, ಮಧುಸೂದನ್,ಮಧು, ಆಂಜನೇಯ, ಫಾರೂಖ್ ಮತ್ತು ಮದನ್ ರಾಯ್ ಶರಣಾಗಿದ್ದರು.

ನಂತರದ ದಿನಗಳಲ್ಲಿ ಹಂದಿ ಅಣ್ಣಿ ಕೊಲೆ ಆರೋಪದ ಬಂಧಿತರಾಗಿದ್ದ  ಇಬ್ಬರು  ಜಾಮೀನಿನ ಮೇಲೆ ಬಿಡುಗಡೆಯಾಗಿ ಕೊಲೆ ಪ್ರಕರಣದ ವಿಚಾರಣೆಗಾಗಿ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ಬೈಕ್‌ನಲ್ಲಿ ಸ್ವಂತ ಊರಾದ ಭಾನುವಳ್ಳಿಗೆ ವಾಪಸಾಗುತ್ತಿದ್ದ ಹಂದಿ ಅಣ್ಣಿಯ ಕೊಲೆ ರಿವೆಂಜ್  ಸಲುವಾಗಿ  ಇಬ್ಬರನ್ನು ಸ್ಕಾರ್ಪಿಯೊ ವಾಹನದಲ್ಲಿ ಹಿಂಬಾಲಿಸಿದ ಗುಂಪು, ಗೋವಿನಕೋವಿ- ಚೀಲೂರು ಗ್ರಾಮಗಳ ನಡುವೆ ಬೈಕ್‌ಗೆ ಡಿಕ್ಕಿ ಹೊಡೆಸಿ ಕೆಳಗೆ ಬೀಳಿಸಿ  ನಂತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಆಂಜನೇಯ ಹಾಗೂ ಮಧು ಮೇಲೆ ದಾವಣಗೆರೆ ಜಿಲ್ಲೆಯ ನ್ಯಾಮತಿ ಬಳಿ ಗುಂಪೊಂದು ದಾಳಿ ನಡೆಸಿ ಹಲ್ಲೆ ಮಾಡಿತ್ತು ಘಟನೆಯಲ್ಲಿ ಆಂಜನೇಯ (30) ಸ್ಥಳದಲ್ಲಿಯೇ ಸಾವಿಗೀಡಾಗಿದ್ದ ಘಟನೆಯಲ್ಲಿ ಇನ್ನೊಬ್ಬ ಆರೋಪಿ ಮಧು (28) ತೀವ್ರವಾಗಿ ಗಾಯಗೊಂಡಿ ಮಲಗಿದ್ದ ಅವನು ಸಾವಿಗೀಡಾಗಿದ್ದನೆ ಎಂದು ಬಾವಿಸಿ
ನಂತರ ವಾಹನ  ಬಿಟ್ಟು ಪರಾರಿಯಾಗಿತ್ತು.
ಪೋಲಿಸ್ ಸ್ಥಳದಲ್ಲಿ ಪರಿಶೀಲಿಸಿದಗ ಮಧು ಇನ್ನೂ ಉಸಿರಾಡುತಿದ್ದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಜೀವ ಅಪಾಯ ದಿಂದ ಪಾರಗಿದ್ದ.

ಯಾರೂ ಈ ಹಂದಿ ಅಣ್ಣಿ.!?

ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ, ತನಗೆ 18 ವರ್ಷವಿರುವಾಗಲೇ ಅಂದಿನ ಕುಖ್ಯಾತ ರೌಡಿಗಳಾಗಿದ್ದ ಲವ ಹಾಗೂ ಕುಶ ಎಂಬ ಅವಳಿ ಸಹೋದರರನ್ನು ಬರ್ಬರವಾಗಿ ಹತ್ಯೆ ಮಾಡಿ ಪಾತಕ ಜಗತ್ತಿಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ. ಅಂದಿನಿಂದ ಶಿವಮೊಗ್ಗದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದ ಹಂದಿ ಅಣ್ಣಿ ಬಳಿಕ  ಹೆಬ್ಬೆಟ್ಟು ಮಂಜನ ಶಿಷ್ಯನಾಗಿ ಸೇರ್ಪಡೆಗೊಂಡಿದ್ದ. ಅಲ್ಲಿಂದ ಹಂದಿ ಅಣ್ಣಿಯ ಅಸಲಿ ಆಟ ಶುರುವಾಗಿತ್ತು. ಕೊಲೆಗಳನ್ನು ನೀರು ಕುಡಿದಷ್ಟೇ ಸರಾಗವಾಗಿ ಮಾಡುತ್ತಿದ್ದ ಈತ ಕೇಸುಗಳಿಂದ ಸುಲಭವಾಗಿ ಬಚಾವಾಗುತ್ತಿದ್ದ. ಮೂರು ನಾಲ್ಕು ಮರ್ಡ‌ರ್ ಕೇಸ್‌ಗಳು ಈತನ ಮೇಲಿದ್ದರೂ ಈತ ಜೈಲಿಗೆ ಹೋಗಿದ್ದು ಕೆಲವೇ ವರ್ಷಗಳು ಮಾತ್ರ.

ಲವ ಕುಶ ಮರ್ಡರ್ ಮೂಲಕ ಕ್ರೈಂ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಹಂದಿ ಅಣ್ಣಿ ಬಳಿಕ ನವುಲೆ ಮೋಹನ ಕೊಲೆ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದ. ಬಳಿಕ 2018ರಲ್ಲಿ ನಡೆದ ಕೊರಂಗು ಕೃಷ್ಣನ ಬಲಗೈ ಬಂಟ ಬಂಕ್ ಬಾಲು ಮರ್ಡರ್ ಕೇಸ್ ನಲ್ಲೂ ಹಂದಿ ಅಣ್ಣಿಯ ಹೆಸರು ಕೇಳಿ ಬಂದಿತ್ತು. ಆದರೆ ಈ ಕೇಸ್ ನಲ್ಲಿ ಬೇರೆ ಆರೋಪಿಗಳು ಅರೆಸ್ಟ್ ಆಗಿದ್ದರು. ಕೇವಲ ಮರ್ಡ‌ರ  ಮಾತ್ರವಲ್ಲ  ಜಮಿನೀನ ವಿಚಾರದಲ್ಲಿ ಪಕ್ಕದ ಊರಿನ ಶಾಸಕನ ಮಗನಿಗೆ ಕೋಲೆ ಬೇದರಿಕೆ ಹಾಕಿದ್ದನಂತೆ  ಲೇ ಔಟ್  ಮಾಲೀಕರಿಗೆ  ಧಮ್ಮಿಕಿ ಹಾಕುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ಹಂದಿ ಅಣ್ಣಿ ವಿರುದ್ಧ ಈ ಸಂಬಂಧ ಶಿವಮೊಗ್ಗದ ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು.

ಹಂದಿ ಅಣ್ಣಿ ಹಲವರೊಂದಿಗೆ ವೈರತ್ವ ಕಟ್ಟಿಕೊಂಡಿದ್ದ. ಹೆಬ್ಬೆಟ್ಟು ಮಂಜನ ಸಹಚರನಾಗಿದ್ದರಿಂದ ಈತನ ಲಿಂಕ್‌ಗಳು ವಿದೇಶದವರೆಗೂ ವ್ಯಾಪಿಸಿದ್ದವು. ಲವ ಕುಶ ಕೊಲೆಯಾದಾಗಿನಿಂದ ಅವರ ಸಹಚರ ತುಮಕೂರಿನ ರಜನಿ ಕೊಲೆ ಮಾಡಲು ವಿಪುಲವಾಗಿ ತುರೆ ಆಟೋ ಮಂಜನ ಕೊಲೆ ಮಾಡಿ ಜೈಲು ಸೇರಿ ಬಿಡುಗಡೆ ಯಾಗಿ ಬೇರೆ ಕೆಸ್ನಲ್ಲಿ ಪೋಲಿಸರಿಂದ ಕಾಲಿಗೆ ಗುಂಡು ಹೋಡೆಸಿಕೊಂಡಿದ್ದಾ.

ಭೂಗತ ಪಾತಕಿ ಹೆಬ್ಬೆಟ್ಟು ಮಂಜನ ಸಹವರ್ತಿ ಆಗಿದ್ದ ಹಂದಿ ಅಣ್ಣಿಯನ್ನು 2022ರ ಜುಲೈ 14ರಂದು ಆತನ ವಿರೋಧಿಗಳಾದ ಕಾಡಾ ಕಾರ್ತಿಕ್ ತಂಡದವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರೆಂದು ಆರೋಪಿಸಲಾಗಿತ್ತು. ನಂತರದ ದಿನಗಳಲ್ಲಿ ಆರೋಪಿಗಳು ಹಂದಿ ಅಣ್ಣಿ ಸಹಚರ ಅನಿಲ್ ಅಲಿಯಾಸ್ ಅಂಬುವಿನ ಕೊಲೆಗೂ ಯೋಜನೆ ರೂಪಿಸಿದ್ದರು ಎಂಬ ವಿಚಾರ ವಿಚಾರಣೆ ವೇಳೆ ಬಯಲಾಗಿತ್ತು

ಹಂದಿ ಅಣ್ಣಿಯ ಮೇಲೆ ಕಿಡಿಕಾರುತ್ತಲೇ ಇದ್ದವು ಹಲವು ಎದುರಾಳಿ ಟಿಮ್, ಇನ್ನು ನವುಲೆ ಮೋಹನನ ಕೊಲೆ ಬಳಿಕ ಆತನ ಸಹಚರರೂ ಹಂದಿ ಅಣ್ಣಿ ಮೇಲೆ ರಿವೇಂಜ್‌ ತೀರಿಸಿಕೊಳ್ಳಲು ಕಾಯುತ್ತಿದ್ದರು. ಇದರ ಮಧ್ಯೆ ಶಿವಮೊಗ್ಗಕ್ಕೆ ಆಗಮಿಸಿದ್ದ ಬಂಕ್ ಬಾಲು ಕೊಲೆಯಾದಾಗ ಇದಕ್ಕೆ ಕುಮ್ಮಕ್ಕು ನೀಡಿ ಟೂಲ್ಸ್ ನೀಡಿದ್ದು  ಇದೇ ಹಂದಿ ಅಣ್ಣಿ ಎಂಬ ಕಾರಣಕ್ಕೆ ಕೊರಂಗು ಕೃಷ್ಣನ ಟೀಂ ಸಹ ಈತನ ಬಲಿ ಪಡೆಯಲು ಕಾಯುತ್ತಲೇ ಇತ್ತು. ಇದರ ಮಧ್ಯೆ ಶಿವಮೊಗ್ಗದ ಅನುಪಿನ ಕಟ್ಟೆ ಸಮೀಪ 2020ರಲ್ಲಿ ಹಂದಿ ಅಣ್ಣಿಯ ತಮ್ಮ ಗಿರೀಶ್ ತೂರಬಿಲ್ಲೆ ಆಟ ಆಡುವಾಗ ಅಜ‌ರ್ ಅಲಿಯಾಸ್‌ ಅಜ್ರು ಟಿಮ್ನೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಇದರಿಂದ ಕೆರಳಿದ ಅಜ್ರು ಟಿಮ್ ಗಿರೀಶನನ್ನು ಹಿಂಬಾಲಿಸಿಕೊಂಡು ಬಂದು ಗೋಪಾಳದ ಸಿದ್ದೇಶ್ವರ ಸರ್ಕಲ್ ನಲ್ಲಿ ಕೊಲೆ ಮಾಡಿತ್ತು.
ಆಗ ಹಂದಿ ಅಣ್ಣಿ ತನ್ನ ತಮ್ಮನನ್ನು ಕೊಲೆ ಮಾಡಿದವರನ್ನು ಉಳಿಸುವುದಿಲ್ಲ ಎಂದು ಶಪಥ ಮಾಡಿದ್ದ. ಇದರಿಂದ ಹೆದರಿದ ಅಜ‌ರ್ ಹಾಗೂ ಗ್ಯಾಂಗ್ ನಾವು ಹಂದಿ ಅಣ್ಣಿಯನ್ನು ಕೊಲೆ ಮಾಡದೇ ಇದ್ದರೆ ನಾವು ಬದುಕಲು ಸಾಧ್ಯವಿಲ್ಲ ಎಂದು ಇವರೂ ಹಂದಿ ಅಣ್ಣಿಗೆ ಸ್ಕೆಚ್ ಹಾಕಿದ್ದರು.

ಹೀಗಾಗಿ ಈ ಗ್ಯಾಂಗ್‌ಗಳಲಿ ಯಾರು ಕೋಲೆ  ಮಾಡಿರಬಹುದು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು.

ಹಂದಿ ಅಣ್ಣಿ ಕೇವಲ ರೌಡಿಸಂಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಕಲ್ಲುಗಣಿಗಾರಿಕೆ, ರಿಯಲ್ ಎಸ್ಟೇಟ್‌ನಲ್ಲಿಯೂ ಸಕ್ರಿಯನಾಗಿದ್ದ.

ಹಂದಿ ಅಣ್ಣಿ ಬಹಿರಂಗವಾಗಿ ಕೊಲೆಯಾಗಿದ್ದರೂ ಈತನನ್ನು ನಿಜವಾಗಲೂ ಕೊಂದವರು ಯಾರು? ಪ್ರಶ್ನೆಗೆ ನ್ಯಾಯಾಲಕ್ಕೆ ಸಾಕ್ಷಿ ಹೇಳಿಸವಲ್ಲಿ ವಿಪುಲವಾಯಿತೆ ಪೋಲಿಸ್ ಇಲಾಖೆ ಎಂದು ಸಾರ್ವಜನಿಕರ ಅಭಿಪ್ರಾಯ ವಾಗಿದೆ.