ಕೆನರಾ ಬ್ಯಾಂಕ್ ಗೋಪಾಳ ಶಾಖೆಯ ವ್ಯವಸ್ಥಾಪಕ ತಿಪ್ಪೇಶ್ ನಾಯಕ್ ಅವರ ಬೆಂಬಲದಿಂದ ಶಿವಮೊಗ್ಗ ಹೊಸಮನೆಯ ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿನಿಂದ ಸುಮಾರು ೧ ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ.
ಶಿವಮೊಗ್ಗ ನಗರದಲ್ಲಿ ನಿವೇಶನಗಳ ಬೆಲೆ ಗಗನ ಏರಿದಂತೆ, ಮೋಸಗಾರರು ತಂಡಗಳು ಹೆಚ್ಚಾಗ ತೊಡಗಿದೆ ಅಂತಹದೇ ಒಂದು ಘಟನೆ ಈಗ ಶಿವಮೊಗ್ಗ ನಗರದಲ್ಲಿ ನಡೆದಿದೆ
ನಗರದ ಗೋಪಾಳ ಬಡಾವಣೆ ಹಾಗೂ ಭದ್ರಾವತಿಯ ಕೆನರ್ ಬ್ಯಾಂಕ್‌ನಲ್ಲಿ ನಿವೇಶನದ ನಕಲಿ ದಾಖಲೆ, ನಕಲಿ ಆದಾರ ಕಾರ್ಡ್, ನಕಲಿ ಪತ್ರ, ನಕಲಿ ವ್ಯಕ್ತಿ ಹೀಗೆ ಎಲ್ಲಾವನ್ನು ನಕಲಿ ಸೃಷ್ಟಿ ಮಾಡಿಕೊಂಡು ಬ್ಯಾಂಕ್ ಮ್ಯಾನೆಜರ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಲೂಟಿ ಮಾಡಿದ ಘಟನೆ ನಡೆದಿದೆ.
ಇಂತಹ ನಕಲಿ ವ್ಯಕ್ತಿಗೆ ಕೋಟ್ಯಾಂತರ ರೂಪಾಯಿ ಸಾಲಕೊಟ್ಟ ಬ್ಯಾಂಕ್‌ನ ಸಿಬ್ಬಂದಿಗಳು ದಾಖಲಾತಿ ಪರಿಶೀಲಿಸುವ ಯಾವುದೇ ಕಾರ್ಯಕ್ಕೆ ಮುಂದಾಗದೆ ಈತನು ಕೊಡುವ ಕಮಿಷನ್ ಆಸೆಗೆ ಸಾರ್ವಜನಿಕರ ಹಣವನ್ನು ವರ್ಗೀಸ್ ಎಂಬ ನಯವಂಚಕನ ಕೊಟ್ಟ ನಕಲಿ ದಾಖಲೆ ಇಟ್ಟುಕೊಂಡು ಸಾರ್ವಜನಿಕರಿಗೆ ಕೊಟ್ಯಾಂತರ ರೂಪಾಯಿ ನಷ್ಟ ಮಾಡಿರುವುದು ದಾಖಲೆ ಸಮೇತ ಪತ್ರಿಕೆಯಲ್ಲಿ ವರದಿ ಮಾಡಲಾಗುವುದು.