ಲಾಭದ ಆಸೆಗೆ ಬಿದ್ದ ಭದ್ರಾವತಿ ಕೃಷಿಕ, ಕಳೆದುಕೊಂಡಿದ್ದು 21 ಲಕ್ಷ, ಆಗಿದ್ದೇನು?

0
136
Oplus_131072

ಟೆಲಿಗ್ರಾಂ ಆಪ್‌ನಲ್ಲಿ ಮೆಸೇಜ್‌ ಮಾಡಿ ಟ್ರಾವೆಲ್ಸ್‌ ಗ್ರೂಪ್‌ಗೆ ಹಣ ಹೂಡಿಕೆ (Investment) ಮಾಡಿದರೆ, ಶೇ.30ರಷ್ಟು ಕಮಿಷನ್‌ ಮತ್ತು ಪಾರ್ಟ್‌ ಟೈಮ್‌ ಉದ್ಯೋಗ ಕೊಡುವ ಭರವಸೆ ನೀಡಿ 21.90 ಲಕ್ಷ ರೂ. ವಂಚಿಸಲಾಗಿದೆ. ಭದ್ರಾವತಿ ತಾಲೂಕಿನ ಕೃಷಿಕರೊಬ್ಬರು (ಹೆಸರು ಗೌಪ್ಯ) ವಂಚನೆಗೊಳಗಾಗಿದ್ದಾರೆ.

ಟ್ರಾವೆಲ್ಸ್‌ ಪಾರ್ಟ್‌ನರ್‌ ಇಂಡಿಯಾ, 91 ಕ್ಲಬ್‌ ಸರ್ವಿಸ್‌ ಎಂಬ ಹೆಸರು ಬಳಸಿ ಕೃಷಿಕರೊಬ್ಬರಿಗೆ ಮೆಸೇಜ್‌ ಕಳುಹಿಸಲಾಗಿತ್ತು. ಅಧಿಕ ಲಾಭದ ಆಸೆಗೆ ಬಿದ್ದ ಕೃಷಿಕ ತನ್ನ ಬ್ಯಾಂಕ್‌ ಖಾತೆ, ಫೋನ್‌ ಪೇ ಮತ್ತು ಚಕ್‌ ಮೂಲಕವು ಹಣ ಪಾವತಿಸಿದ್ದಾರೆ. ಸತತ ಒಂದು ತಿಂಗಳು ಹಂತ ಹಂತವಾಗಿ 21.90 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಲಾಭಾಂಶ ದೊರೆಯದಿದ್ದಾಗ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆ, ಅಮ್ರಿತ್‌ ಪಾಟೇಲ್‌, ದಿವ್ಯ ದರ್ಶಿನಿ, ಸಾರಿಕಾ ಎಂಬುವವರ ಹೆಸರುಗಳನ್ನು ಉಲ್ಲೇಖಿಸಿ ಕೃಷಿಕ ದೂರು ನೀಡಿದ್ದಾರೆ. ಭದ್ರಾವತಿ ಓಲ್ಡ್‌ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.