ನಿನ್ನೆ ಸುರಿದ ಭಾರಿ ಮಳೆಗೆ ಇಂದು ಮಧ್ಯಾಹ್ನ 1:00 ಸಮಯದಲ್ಲಿ ಶಿವಮೊಗ್ಗ ತಾಲೂಕಿನ ಚಿನ್ನಿಕಟ್ಟೆಯ ಇಕ್ಬಾಲ್ ಯಾನೆ ಸುನೀಲ್ 26 ವರ್ಷ ಬೈಕ್‌ನಲ್ಲಿ ಹಳ್ಳ ದಾಟುತ್ತಿದ್ದಾಗ ದ್ವಿಚಕ್ರ ಸಮೆತ ನೀರಿನ ರಬಸಕ್ಕೆ ಕೋಚ್ಚಿ ಹೊದ ಸವಾರ.?

0
1035

 

ತಾಲೂಕು ಮುದುವಾಲದ ಕೊಂಡಜ್ಜಿ ಹಳ್ಳದಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಕಳೆದ ರಾತ್ರಿ ಸುರಿದ ಮಳೆಗೆ ಹಳ್ಳ ತುಂಬಿ ಹರಿಯುತ್ತಿತ್ತು. ಈ ಸಂದರ್ಭ ಚಿನ್ನಿಕಟ್ಟೆಯ ಎಕ್ಬಾಲ್‌ ಎಂಬುವವರು ಬೈಕ್‌ನಲ್ಲಿ ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ಶಿವಮೊಗ್ಗ ತಾಲ್ಲೂಕು ಯಡವಾಲ, ಹಿಟ್ಟುರು ಕ್ರಾಸಿನಲ್ಲಿ ಸಂಭವಿಸಿದ ಭಾರೀ ಮಳೆಯಿಂದ ಹಳ್ಳದಲ್ಲಿ ನೀರಿನ ಪ್ರವಾಹ ಉಂಟಾಗಿ, ಚಿನ್ನಿಕಟ್ಟೆಯ ಇಕ್ಬಾಲ್  ಯಾನೆ ಸುನೀಲ್  ಬಿನ್ ಅಬ್ದುಲ್ ಕಲಿಲ್ ಅವರು ಇಂದು ಮಧ್ಯಾನ 1ಘಂಟೆ ಸುಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಹಾದು ಹೋಗುವಾಗ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಹುಡುಕಾಟ ಆರಂಭಿಸಿದ್ದಾರೆ. ಮಳೆಯಿಂದಾಗಿ ಹಳ್ಳದಲ್ಲಿ ನೀರಿನ ಮಟ್ಟ ಹೆಚ್ಚಾಗಿ, ಇಕ್ಬಾಲ್ ಹಾಗೂ ಅವರ ವಾಹನ ಇನ್ನೂ ಪತ್ತೆಯಾಗಿಲ್ಲ. ಹತ್ತಿರದ ಹಳ್ಳಿಗಳು ಕೂಡ ಭಾರೀ ಮಳೆಗೆ ತತ್ತರಗೊಂಡಿದ್ದು, ಹುಡುಕಾಟ ಮುಂದುವರಿಯುತ್ತಿದೆ.