ನೆನ್ನೆಯ ಪತ್ರಿಕಾ ಘೋಷ್ಠಿಗೆ ಖಡಕ್ ಉತ್ತರ ಕೊಟ್ಟ ರುದ್ರಮುನಿ ಸಜ್ಜನ್..!?

0
188

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಶಿವಮೊಗ್ಗ ಜಿಲ್ಲಾ ಘಟಕದ ಮಹಾ ಚುನಾವಣೆ 2024ರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ರುದ್ರಮುನಿ ಎನ್ ಸಜ್ಜನ್ ಅವರು ಮಾತನಾಡುತ್ತಾ
ಕೆಳದಿ ಶಿವಪ್ಪ ನಾಯಕ ಪ್ರಶಸ್ತಿಯನ್ನು ನಮ್ಮ ಕರ್ನಾಟಕ ರಾಜ್ಯದಲ್ಲೇ ವಿಶೇಷವಾಗಿ
ಶಿಸ್ತಿನ ಶಿವಪ್ಪನಾಯಕರ ಹೆಸರಿನಲ್ಲಿ “ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ” ಎಂದು ನಾಮಕರಣ ಮಾಡಿ 2014-15 ರಿಂದ ಸಮಾಜದ ಗಣ್ಯವ್ಯಕ್ತಿಗಳು, ದೇಶ, ನಾಡುನುಡಿಗೆ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇದುವರೆಗೆ ದೇಶ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಿದ ಸಮಾಜದ ಈ ಅನುಪಮ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

2014-15 ಡಾ. ಕಿರಣ್‌ ಕುಮಾರ್, ಅಧ್ಯಕ್ಷರು, ಇಸ್ರೋ

2015-16 ಡಾ. ನೀರಜ್ ಪಾಟೀಲ್, ಮಾಜಿ ಮೇಯರ್ ಲ್ಯಾಂಬೆತ್ (ಲಂಡನ್)

2016-17 ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ಮಕ್ಕಳ ಹಾಗೂ ಹೃದಯರೋಗ ತಜ್ಞರು, ಬೆಂಗಳೂರು.

2017-18 ಡಾ. ಚಿದಾನಂದಮೂರ್ತಿ, ಖ್ಯಾತ ಸಂಶೋಧಕರು ಹಾಗೂ ಲೇಖಕರು.

2018-19 ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ, ಭಾರತೀಯ ಭೂಸೇನೆ

2019-20 ಶರಣ ಬಿ.ಎಸ್. ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

2020-21 ನಾಡೋಜ ಡಾ. ಗೊ.ರು. ಚನ್ನಬಸಪ್ಪ, ಸಾಹಿತಿಗಳು, ಬೆಂಗಳೂರು.

2021-22 ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು, ಕಮಾಂಡಿಂಗ್ ಇನ್ ಚೀಫ್, ನೈರುತ್ಯ ಕಮಾಂಡ್

ಈ ಪಶಸಿಯು ಇಂದು ನಾಡಿನ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಜನಮಾನಸದಲ್ಲಿ ಸ್ಥಿರಸ್ಥಾಯಿಯಾಗಿದೆ.

ನೆನ್ನೆ ನಮ್ಮ ಸಮಾಜದವರೇ ಪತ್ರಿಕಾಗೋಷ್ಠಿ ಮಾಡಿ ಸತ್ಯಕ್ಕೆ ದೂರವಾದ ಮಾಹಿತಿಯನ್ನು ನೀಡಿದ್ದಾರೆ,

ಇಡಿ ಕರ್ನಾಟಕ ಜಿಲ್ಲೆಯವರು ಹಾಗೂ ರಾಜ್ಯ ಕಮಿಟಿಯವರು ಸರ್ವ ಸದಸ್ಯರ ಸಭೆ ಮಾಡಲು ಬೈಲಾ ಪ್ರಕಾರ ನಮ್ಮಗಳಿಗೆ ಹಕ್ಕಿಲ್ಲ ಸೆಂಟ್ರಲ್ ಕಮಿಟಿ ಅವರಿಗೆ ಮಾತ್ರ ಹಕ್ಕು ಇರುವುದು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಕಟ್ಟಡಕ್ಕೆ ಸರ್ಕಾರದಿಂದ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಟ್ಟಿದ್ದು ನಿರ್ಮಿತಿ ಕೇಂದ್ರದವರು ಲೆಕ್ಕ ಕೊಡುತ್ತಾರೆ ಅದು ನಾನ್ ಹೇಗೆ ಲೆಕ್ಕ ಕೊಡಲಿ,

ವರ್ಷ ವರ್ಷ ಸದಸ್ಯತ್ವದ ಹಣ ಏನು ಬಂದಿರುತ್ತದೆ ಚೆಕ್‌ ಮೂಲಕ ಎಸ್‌ಬಿಐ ಬ್ಯಾಂಕ್ ಮುಖಾಂತರ ಕೇಂದ್ರ ಖಾತೆಗೆ ಹಣವನ್ನು ಜಮಾ ಮಾಡಿರುತ್ತೇವೆ ಏನು ಸದಸ್ಯಸ್ವತ ಮಾಡಿಸಿರೋ ಹಣಕ್ಕೆ ರಶೀದಿಯನ್ನು ನೀಡಿಯೆ ಹಣ ಪಡೆದಿರುತ್ತವೆ ವರ್ಷದ ವ್ಯವಹಾರದ ಅಕೌಂಟನ್ನು ಚಾರಟೆಡ್ ಅಕೌಂಟ್ ( CA)ಮುಖಾಂತರ ಆಡಿಟ್ ಮಾಡಿಸಿ ಕೇಂದ್ರಕ್ಕೆ ಕಳಿಸಿಕೊಟ್ಟಿರುತ್ತೇವೆ  ನಿನ್ನೆ ಪ್ರೆಸ್ ಮೀಟ್ ಮಾಡಿದವರಿಗೆ ಮಾಹಿತಿ ಎಷ್ಟಿದೆ ಇಲ್ಲವೇನೋ ನನಗೆ ಗೊತ್ತಿಲ್ಲ ಅದರ ಬಗ್ಗೆ ನಾನು ಮಾತನಾಡುವುದಿಲ್ಲ.

ಹಾಗೆಯೇ ತಾಲೂಕು ಘಟಕಕ್ಕೆ ಹಲವು ಕ್ಷೇತ್ರಗಳಲ್ಲಿ ಸಂಘಟನೆ ಮಾಡಿ ಸಂಘಟನೆಯ ನಿಪುಣತೆ ಹೊಂದಿರುವ ಮಲ್ಲಿಕಾರ್ಜುನ ಸ್ವಾಮಿ ಅವರು ತಾಲೂಕು ಘಟಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದು ಸಮಾಜ ಬಾಂಧವರು ನಮ್ಮಿಬ್ಬರನ್ನು ಗೆಲ್ಲಿಸಿ ಸಮಾಜಕ್ಕೆ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿಸಿದರು. ಇಂದಿನ ಪತ್ರಿಕಾಗೋಷ್ಠಿಯಲ್ಲಿ  ಆನಂದ್ ಮೂರ್ತಿ ಸೋಮನಾಥ್ ಇನ್ನು ಮುಂತಾದವರು ಉಪಸ್ಥಿತರಿದ್ದರು