22 ಬ್ಯಾಂಕ್​ನಲ್ಲಿ ಹತ್ತು ಕೋಟಿ ಲೋನ್ ಪಡೆದ ಪ್ರಕರಣ; ಒಂದೇ ಕುಟುಂಬದ ಐವರು ಸೇರಿ ಆರು ಜನ ಅರೆಸ್ಟ್..!?

0
43

ವಂಚನೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಎಷ್ಟೇ ಮುತುವರ್ಜಿವಹಿಸಿದರೂ ಒಮ್ಮೊಮ್ಮೆ ಮೋಸ ಹೋಗಬೇಕಾಗುತ್ತದೆ. ಅದರಂತೆ ಇದೀಗ 22 ಬ್ಯಾಂಕ್​​ನಲ್ಲಿ ಹತ್ತು ಕೋಟಿ ಲೋನ್(loan) ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಜನರನ್ನು ಅರೆಸ್ಟ್ ಮಾಡಲಾಗಿದೆ.

 

ಬೆಂಗಳೂರು :

 ಏ.19: ಕಟ್ಟಡವಿದೆ ಎಂದು ನಂಬಿಸಿ 22 ಬ್ಯಾಂಕ್​​ನಲ್ಲಿ ಹತ್ತು ಕೋಟಿ ಲೋನ್(loan) ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಜನರನ್ನು ಅರೆಸ್ಟ್ ಮಾಡಲಾಗಿದೆ. ನಾಗೇಶ್ ಭಾರದ್ವಾಜ್ ,ಬಿ ಎಸ್ ಸುಮಾ, ಸತೀಶ್, ವೇದಾ, ಆರ್ ವಿ ಶೇಷಗಿರಿ, ಆರ್​ಎಸ್ ಶೋಭಾ ಬಂಧಿತ ಆರೋಪಿಗಳು. ಬೇಗೂರಿನಲ್ಲಿ ನಿವಾಸವಿದೆ ಎಂದು ನಂಬಿಸಿ ಅದರ ಮೇಲೆ ಲೋನ್ ಪಡೆಯಲಾಗಿತ್ತು, ಈ ಕುರಿತು ಜಯನಗರ ಪೊಲೀಸ್ ಠಾಣೆ(Jayanagar Police Station)ಯಲ್ಲಿ 2022 ರಲ್ಲಿ ಕೇಸ್ ಕೂಡ ದಾಖಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಆರೋಪಿಗಳು ನಾಪತ್ತೆಯಾಗಿದ್ದರು.

 

ಕಟ್ಟಡವಿದೆ ಎಂದು ನಂಬಿಸಿ ಹಲವು ಬ್ಯಾಂಕ್​ಗಳಲ್ಲಿ ಲೋನ್​

ಸಹಕಾರಿ ಬ್ಯಾಂಕ್, ರಾಷ್ಟೀಕೃತ ಬ್ಯಾಂಕ್, ಕೋ ಅಪರೇಟಿವ್ ಬ್ಯಾಂಕ್ ಸೇರಿ ಹಲವಾರು ಕಡೆಗಳಲ್ಲಿ ಬೇಗೂರಿನಲ್ಲಿ 2100 ಅಡಿ ವಿಸ್ತೀರ್ಣದಲ್ಲಿ ನಮ್ಮ ಕಟ್ಟಡ ಇದೆ ಎಂದು ನಂಬಿಸಿದ್ದರು. ಜೊತೆಗೆ ಅದಕ್ಕೆ ಬೇಕಾದ ದಾಖಲಾತಿಗಳನ್ನು ಕೂಡ ಸೃಷ್ಟಿಸಿ, ಅದನ್ನು ಕುಟುಂಬದ ಬೇರೆ ಬೇರೆ ವ್ಯಕ್ತಿಗಳ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದರು. ನಂತರ ಅದಕ್ಕೆ ಬೇಕಾದ ದಾಖಲಾತಿಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು 2014 ರಿಂದ 2015ರ ಅವಧಿಯಲ್ಲಿ ವಂಚನೆ ಮಾಡಿದ್ದರು. ಅಷ್ಟೇ ಅಲ್ಲ, ಪಡೆದ ಲೋನ್ ಹಣದಲ್ಲಿ ಒಂದು ಸೈಟ್ ಕೂಡ ಪಡೆದುಕೊಂಡಿದ್ದರು. ಸದ್ಯ ಅದನ್ನು ಕೇಸ್​ನಲ್ಲಿ ಅಟ್ಯಾಚ್ ಮಾಡಲಾಗಿದೆ.