ದೊಡ್ಡಗುಣಿ ಅರೇಬೆಂದ ಸ್ಥಿತಿಯಲ್ಲಿ ಸಿಕ್ಕ ಶವದ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು.!

0
116

 

ಗುಬ್ಬಿ :

ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ದೊಡ್ಡಗುಣಿ ವ್ಯಾಪ್ತಿಯಲ್ಲಿ ಕೊಲೆ ಮಾಡಿ ಬೆಂಕಿ ಹಚ್ಚಿ ಅರೇ ಬೆಂದ ಸ್ಥಿತಿಯಲ್ಲಿ ಸುಟ್ಟು ಹಾಕಿದ್ದ ಶವದ ಪ್ರಕರಣವನ್ನು ಕೆಲವೇ ದಿನದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಅಪರಾಧಿಯನ್ನ ಹೆಡೆ ಮುರಿಕಟ್ಟಿದ ತುಮಕೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳು.

   ಪ್ರಕರಣಕ್ಕೆ ಸಂಬಂಧಿಸಿದಂತೆ S P ಅಶೋಕ ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅದೀಕ್ಷಾರುಗಳಾದ ಮರಿಯಪ್ಪ ಹಾಗೂ ಅಬ್ದುಲ್ ಖಾದರ್ ಮತ್ತು ಸಿರಾ DYSP ಶೇಖರ್ ರವರ ನೇತೃತ್ವದಲ್ಲಿ ಒಂದು ತಂಡವನ್ನು ನೇಮಿಸಲಾಗಿತ್ತು,

ಪ್ರಕರಣದ ಪ್ರಮುಖ ಅಧಿಕಾರಿಯ ನೇತೃತ್ವವನ್ನು  ತಂಡವನ್ನು ವಹಿಸಲಾಗಿತ್ತು

 ಅಧಿಕಾರಿಗಳು ಸುಟ್ಟ ಮೃತ ದೇಹದ ಪತ್ತೆ ಹಚ್ಚಲು ಮೃತ ದೇಹದಲ್ಲಿ ದೊರಕಿದ ಕೆಲವು ವಿವರಗಳನ್ನ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನು ಕಳುಹಿಸಿದಾಗ ಮೈಸೂರ್ ಜಿಲ್ಲೆಯ ಮೆಟಗವಲ್ಲಿ ಠಾಣೆ ಯಲ್ಲಿ ಮೃತ ಮಹಿಳೆಯ ಹೋಲಿಕೆಯಾಗುವ ಒಬ್ಬ ಮಹಿಳೆ ಕಾಣೆಯಾಗಿದ್ದು ಮೆಟಗವಲ್ಲಿ ಠಾಣೆ ಯಲ್ಲಿ ದೂರು ದಾಖಲಾಗಿದ್ದು ಆ ಮಹಿಳೆಯು ಮೈಸೂರಿನ ನೂರ್ ರವರ ಮಗಳು ರೂಕ್ಸನಾ ಎಂದು ಖಚಿತವಾಗಿ ತಿಳಿದು ಬರುತ್ತೆದೆ.

ತಕ್ಷಣಕ್ಕೆ  ಎಚ್ಚೆತ್ತ ಪೊಲೀಸರು ರುಕ್ಸಾನ ತಂದೆಯ ಮನೆಗೆ ಭೇಟಿ ನೀಡಿ

ರುಕ್ಸನಾ ಪೋಷಕರು ನೀಡಿರುವ ಸುಳಿವಿನ ಆದರದ ಮೇರೆಗೆ ರುಕ್ಸನಳಿಗೆ ಕಡೂರು ಮೂಲದ ಪ್ರದೀಪನಾಯ್ಕ್ ಎಂಬ ವ್ಯಕ್ತಿ ಪರಿಚಯವಾಗಿ ಪರಿಚಯಾ ಪ್ರೀತಿಗೆ ತಿರುಗಿದ್ದು ಧೈಹಿಕ ಸಂಪರ್ಕ ಬೆಳೆಸಿ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿದಿರುತ್ತದೆ.

 

 

ವಿಷಯ ತಿಳಿದ ಕೂಡಲೇ ಪ್ರದೀಪ್ ನಾಯ್ಕ ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಪ್ರದೀಪ್ ನಾಯ್ಕ ಈಗಾಗಲೇ  ಮದುವೆಯಾಗಿದ್ದು ರೂಕ್ಸನಳನ್ನು 2ನೇ ಹೆಂಡತಿ ಯಾಗಿ ಸ್ವೀಕರಿಸಲು ನಿರಾಕರಿಸಿದ ಸಂದರ್ಭದಲ್ಲಿ ತತ್ತ್ಕಾಲೀಕವಾಗಿ ಕಡೂರಿನಲ್ಲಿ

ಚಿಕ್ಕ ಮನೆ ಮಾಡಿ ಇರಿಸಿದ್ದಾನು . ಆದರೂ ರುಕ್ಸನಲು ಪದೇ ಪದೇ ತನನ್ನು ಮದುವೆಯಾಗಲು ಜಗಳವಡುತಿದ್ದಳು ಇದರಿಂದ ಸಿಟ್ಟಿಗೆದ್ದು ಪ್ರದೀಪ್ ನಾಯ್ಕ್ ರುಕ್ಸನಾ ಳನ್ನು ಕೊಲೆ ಮಾಡಲು ನಿರ್ಧಾರಿಸಿ ಕಡೂರಿನಿಂದ ಬೆಂಗಳೂರಿಗೆ ಬೈಕ್ ನಲ್ಲಿ ತೆರಳುವುದಾಗಿ ಹೇಳಿ ದಾರಿಯ ಮದ್ಯದಲ್ಲಿ  ರುಕ್ಸನಳನ್ನು ಅವಳ ವೇಲಿನಿಂದ ಕತ್ತು ಇಸುಕಿ ಕೊಲೆ ಮಾಡಿರುವುದಾಗಿ ಆರೋಪಿಯು ಒಪ್ಪಿಕೊಂಡಿರುತ್ತಾನೆ.