ಬೆಂಗಳೂರು, ಮಾ.22: ತುಮಕೂರಿನ ಕುಚ್ಚಂಗಿ ಕೆರೆಯ ಬಳಿ ಬೆಳಕಿಗೆ ಬಂದ ಬೆಳ್ತಂಗಡಿ ತಾಲೂಕಿನ ಮೂವರು ವ್ಯಕ್ತಿಗಳ ಕೊಲೆ ಕೃತ್ಯಕ್ಕೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

0
58

ಬೆಂಗಳೂರು, ಮಾ.22: ತುಮಕೂರಿನ ಕುಚ್ಚಂಗಿ ಕೆರೆಯ ಬಳಿ ಬೆಳಕಿಗೆ ಬಂದ ಬೆಳ್ತಂಗಡಿ ತಾಲೂಕಿನ ಮೂವರು ವ್ಯಕ್ತಿಗಳ ಕೊಲೆ ಕೃತ್ಯಕ್ಕೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಸುಟ್ಟ ಕಾರಿನಲ್ಲಿ ಮೂವರ ಮೃತದೇಹ ಪತ್ತೆಯಾದ ಮಾಹಿತಿ ತಿಳಿದೊಡನೆ‌ ತಾನು ಐಜಿಪಿ ರವಿಕಾಂತೇಗೌಡ ಹಾಗೂ ತುಮಕೂರು ಎಸ್ಪಿ  ಅಶೋಕ್ ರೊಂದಿಗೆ ಚರ್ಚೆ ಮಾಡಿ . ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಸೂಚಿಸಿರುವೆ. ಈಗಾಗಲೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ಯು.ಟಿ. ಖಾದರ್ ರವರು ವ್ಯಕ್ತಪಡಿಸಿದ್ದಾರೆ.