ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಗ್ರಾಮಸ್ಥರ ಪತ್ರಿಕಾಗೋಷ್ಠಿ

0
126

ಮೀಡಿಯಾ ಹೌಸ್ ಪತ್ರಿಕಾಗೋಷ್ಠಿಯಲ್ಲಿ ದೀಪಕ್ ರವರು  ಮಾತನಾಡುತ್ತಾ  ಶಿವಮೊಗ್ಗ  ತಾಲೂಕಿನ ಸಿದ್ಲಿಪುರ ಗ್ರಾಮವು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಒಳಪಟ್ಟಿದ್ದು ಶಿವಮೊಗ್ಗ ನಗರದಿಂದ ಸುಮಾರು 10-12 ಕಿಮೀ.ಗಳಾಗುತ್ತದೆ. ಸಿದ್ದೀಪುರ ಗ್ರಾಮದ ವಿಷಯಕ್ಕೆ ಸಂಬಂಧಿಸಿದಂತೆ, ಸಿದ್ದೀಪುರ ಗ್ರಾಮವು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಸ.ನಂ.28 ರಲ್ಲಿ 16 ಎಕರೆ 15 ಗುಂಟೆ ಜಾಗವಿದ್ದು, ಅದರಲ್ಲಿ 14 ಎಕರೆ 03 ಗುಂಟೆ ಜಾಗದಲ್ಲಿ ಆಶ್ರಯ ಯೋಜನೆಗಾಗಿ ಹಿಂದಿನ ಸರ್ಕಾರ ಮಹಾನಗರಪಾಲಿಕೆಗೆ ಮಂಜೂರು ಮಾಡಿರುತ್ತದೆ.

ಸಿದ್ಧಿಪುರ ಗ್ರಾಮವು ತುಂಬಾ ಹಿಂದುಳಿದ ಗ್ರಾಮವಾಗಿದ್ದು, ಗ್ರಾಮಸ್ಥರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುತ್ತಾರೆ.
ನಮ್ಮ ಗ್ರಾಮದ ಹತ್ತಿರವಿರುವ ಎಲ್ಲಾ ಸರ್ಕಾರಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದ್ದು, ಗ್ರಾಮದ ಉಪಯೋಗಕ್ಕಾಗಿ ನಿವೇಶನ ರಹಿತರಿಗೆ ನಿವೇಶನ ಕೊಡಲು ಬೇರೆ ಯಾವುದೇ ಉದ್ದೇಶಕ್ಕೆ ಸ್ವಲ್ಪವೂ ಭೂಮಿಯುಇಲ್ಲದಂತೆ ವಶಪಡಿಸಿಕೊಂಡಿರುತ್ತದೆ.
ಯಡಿಯೂರಪ್ಪನವರು ಮುಖ್ಯಮಂತ್ರಿ ಸಂದರ್ಭದಲ್ಲಿ ದೇವಕಾತಿಕೊಪ್ಪದಲ್ಲಿದ್ದ ಕೈಗಾರಿಕಾ ಪ್ರದೇಶಕ್ಕೆ ಸೇರಿದ ಜಾಗವನ್ನು ಗ್ರಾಮಸ್ಥರ ಹಿತಾಸಕ್ತಿ ಪ್ರಯುಕ್ತವಾಗಿ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್‌ ತಿಳಿಸಿ ಸಚಿವರೇ ಖುದ್ದು ಸ್ಥಳ ಪರಿಶೀಲನೆ ಮಾಡಿಸಿ ಸ್ಥಳದಲ್ಲಿ ಕೆ.ಐ.ಎ.ಡಿ.ಬಿ.ಯಿಂದ ಕ್ಯಾನ್ಸಲ್ ಮಾಡಿಸಿ ಗ್ರಾಮಸ್ಥರಿಗೆ
ಉಳಿಸಿಕೊಟ್ಟಿರುತ್ತಾರೆ ಜನ ಈಗಲೂ ಸ್ಮರಿಸುತ್ತಾರೆ

ಹಾಗೆಯೇ ನಮ್ಮ ಸಿದ್ಲಿಪುರ ಗ್ರಾಮಕ್ಕೆ ಜಾನುವಾರುಗಳು ಮೆಯ್ಯಲು ಈ ಹಿಂದೆ ಇದೆ ಗೋಮಾಳವಾಗಿದ್ದು ಕನಿಷ್ಠ ನಾಲ್ಕುಎಕರೆಯಾದರು ಗೋಮಾಳಕ್ಕೆ ಮೀಸಲಿಟ್ಟ ಗೋವುಗಳ ಸಂರಕ್ಷಣೆಗೆ ಸರ್ಕಾರ ಸಹಾಕರ ನೀಡಬೇಕು

ಹಾಗೆಯೇ ಊರಿನಲ್ಲಿ ಬಹಳಷ್ಟು ಜನ ನಿವೇಶನ ರಹಿತರಿದ್ದು ಒಂದೊಂದು ಕುಟುಂಬದಲ್ಲಿ 15-20 ಜನ ವಾಸ ಮಾಡುತ್ತಿದ್ದಾರೆ. ಈ ಜಾಗವು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಅಂಗನವಾಡಿ, ಶಾಲೆ ನಿರ್ಮಾಣ ಮತ್ತು ನಿವೇಶನ ರಹಿತ ಗ್ರಾಮಸ್ಥರಿಗೆ ನಿವೇಶನ ಹಂಚಿಕೆ ಮಾಡಲು ಅನುಕೂಲ ವಾಗಿರುತ್ತದೆ.

ಆದ್ದರಿಂದ ಇದನ್ನು ಸಮಗ್ರವಾಗಿ ಶಿವಮೊಗ್ಗ ತಾಲ್ಲೂಕು ಸಿದ್ದೀಪುರ ಗ್ರಾಮದ ಸರ್ವೆ ನಂ.28 ರಲ್ಲಿರುವ 16 ಎಕರೆ 15 ಗುಂಟೆ ಪ್ರದೇಶದಲ್ಲಿ 14 ಎಕರೆ 3 ಗುಂಟೆ ಜಾಗವನ್ನು ಮಹಾನಗರಪಾಲಿಕೆ,
ಶಿವಮೊಗ್ಗ ಇವರಿಂದ ವಜಾ ಮಾಡಿ ಆಶ್ರಯ ಯೋಜನೆ ಸಿದ್ದೀಪುರ ಗ್ರಾಮ ಎಂದು ಬದಲಾವಣೆ ಮಾಡಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಗ್ರಾಮಸ್ಥರು ಪ್ರಾರ್ಥಿಸಿಕೊಳ್ಳುತ್ತೇವೇ.ಸದ್ಲಿಪುರ ಗ್ರಾಮಕ್ಕೆ ಸಂಬಂಧಿಸಿದಂತೆ ಸಿದ್ದಲಿಪುರ ಕೈಗಾರಿಕಾ ಪ್ರದೇಶ ಸೈಟ್ ಗಳು ನಿರ್ಮಾಣವಾಗಿದ್ದುಈ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಸಿಟಿಯ ಕೆಲವು ಹುಡುಗರು ಇಲ್ಲಿ ಗಾಂಜಾ ಸೇವಿಸುತ್ತಿದ್ದು ವಿಚಾರಿಸಲು ಹೋದ ಗ್ರಾಮಸ್ಥರನ್ನೇ ಭಯಭೀತಿ ಗೊಳಿಸುತ್ತಿದ್ದಾರೆ ಆದ್ದರಿಂದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಪತ್ರಿಕೆ ಮೂಲಕ ಕೇಳಿಕೊಳ್ಳುತ್ತಿದ್ದೇವೆ ಇನ್ನಾದರೂ ದಿನಕ್ಕೆ ಒಂದು ಬಾರಿಯಾದರೂ ಬಿಟ್ ವ್ಯವಸ್ಥೆ ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ದೀಪಕ್ ಹರೀಶ್ ಧರಣಿ ಹಾಗೂ ಗ್ರಾಮಸ್ಥರು ಉಪಸಿತರಿದ್ದರು.