ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಕ್ಷುಲ್ಲಕ ಹೇಳಿಕೆ ನೀಡುವ ಮೂಲಕ ನಾಯಕರ ಮನವೊಲಿಸಿ ಬೆಳೆಯಬಹುದು ಎಂದು ಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಹಿಗೆ ಹೇಳಿದವರು ಯಾರು.!?

On: October 23, 2024 3:15 PM
Follow Us:
---Advertisement---

ಸಚಿವ ಭೈರತಿ ಸುರೇಶ್ ಹೇಳಿಕೆ ಅಕ್ಷಮ್ಯ
ಅಮಾನವೀಯತೆಯ ಅತಿರೇಕ ,

ಶಿವಮೊಗ್ಗ : ರಾಜ್ಯ ಕಂಡ ಅಪರೂಪದ ರಾಜಕಾರಣಿ ಹೋರಾಟಗಳ ಮೂಲಕವೇ ನಾಡಿನ ಅಧಿಕಾರದ ಚುಕ್ಕಾಣಿ ಹಿಡಿದು ಅಭಿವೃದ್ದಿ ಎಂದರೆ ಏನು ಎಂದು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ತೋರಿಸಿಕೊಟ್ಟ ಹಾಗೂ ಎಲ್ಲಾ ಸಮುದಾಯಗಳಿಗೂ ಒಂದಲ್ಲ ಒಂದು ಯೋಜನೆಯನ್ನು ದೊರಕಿಸಿಕೊಟ್ಟ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪನವರ ಕುಟುಂಬದ ಬಗ್ಗೆ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ನೀಡಿರುವ ಹೇಳಿಕೆ ಅಕ್ಷಮ್ಯವಾಗಿದೆ. ಅಮಾನವೀಯತೆಯ ಅತಿರೇಖವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಶಾಸಕ ಎಸ್.ರುದ್ರೇಗೌಡ ಟೀಕಿಸಿದ್ದಾರೆ.

ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಅಧಿಕಾರದಲ್ಲಿದ್ದಾಗ ಹಾಗೂ ರಾಜಕಾರಣದಲ್ಲಿ ಆರೋ-ಪ್ರತ್ಯಾರೋಪಗಳು ಸಹಜ.

ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಹಾಗೂ ನಗರಾಭಿವೃದ್ದಿ ಸಚಿವರ ಮೇಲೆ ಗುರುತರವಾದ ಆರೋಪ ಕೇಳಬಂದಿದೆ. ಇದಕ್ಕೆ ಸಮಂಜಸವಾದ ಉತ್ತರವನ್ನು ನೀಡಬೇಕೆ ಹೊರತು. ಓರ್ವ ಮಾಜಿ ಮುಖ್ಯಮಂತ್ರಿಯ ಪತ್ನಿಯ ಸಾವನ್ನೇ ತನ್ನ ಟೀಕೆಗೆ ಬಳಸಿಕೊಂಡಿರುವುದು ಮನುಷ್ಯತ್ವ ಇಲ್ಲದ ಸುಸಂಸ್ಕೃತ ಹೀನ ರಾಜಕಾರಣಿಯ ಹೇಳಿಕೆಯಾಗಿದೆ ಎಂದು ಖಂಡಿಸಿದ್ದಾರೆ.
ಭೈರತಿ ಸುರೇಶ್‌ರವರೇ ನಗರಾಭಿವೃದ್ದಿಯಂತಹ ಬೃಹತ್ ಖಾತೆಯನ್ನು ಹೊಂದಿರುವ ನೀರು ಅದನ್ನು ನಿಭಾಯಿಸುವಲ್ಲಿ ಮತ್ತು ಪ್ರಗತಿ ಸಾಧಿಸುವಲ್ಲಿ ಸಂಪೂರ್ಣ ಅಸಮರ್ಥರಾಗಿದ್ದೀರಿ.

ನಿಮ್ಮ ಉತ್ತಮ ಕಾರ್ಯ ವೈಖರಿಯ ಮುಖಾಂತರ ರಾಜಕಾರಣದಲ್ಲಿ ಬೆಳೆಯಬಹುದೇ ಹೊರತು ಈ ರೀತಿ ಕ್ಷುಲ್ಲಕ ಹೇಳಿಕೆ ನೀಡುವ ಮೂಲಕ ನಾಯಕರ ಮನವೊಲಿಸಿ ಬೆಳೆಯಬಹುದು ಎಂದು ಕೊಂಡಿದ್ದರೆ ಅದು ನಿಮ್ಮ ಮೂರ್ಖತನದ ಪರಮಾವಧಿಯ ಪ್ರತೀಕವಾಗಿದೆ ಎಂದಿದ್ದಾರೆ. ಕೂಡಲೇ ನಿಮ್ಮ ಹೇಳಿಕೆಯನ್ನು ವಾಪಾಸ್ ಪಡೆದು ಯಡಿಯೂರಪ್ಪ ಮತ್ತು ಅವರ ಕುಟುಂಬದ ಕ್ಷಮೆಯನ್ನು ಕೇಳಬೇಕೆಂದು ಆಗ್ರಹ ಪೂರಕವಾಗಿ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

Join WhatsApp

Join Now

Join Telegram

Join Now