ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಅನವರತ ತಂಡದಿಂದ ಚರ್ಚೆ ವಿತ್ ಚೆನ್ನಿ!?

On: February 9, 2024 10:59 PM
Follow Us:
---Advertisement---

ಅನವರತ ತಂಡದಿಂದ ಚರ್ಚೆ ವಿತ್ ಚೆನ್ನಿ
ವಾಣಿಜ್ಯ ಮತ್ತು ಕೈಗಾರಿಕೆಗಳ  ಮಂಡಳಿ
  ಸದಸ್ಯರೊಂದಿಗೆ ನಗರದ ಚೇಂಬರ್ ಆಫ್ ಕಾಮರ್ಸ್  ಆವರಣದಲ್ಲಿ ಚರ್ಚಾ ಕಾರ್ಯಕ್ರಮವು ಏರ್ಪಡಿಸಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಡಿ.ಎಸ್ ಅರುಣ್, ನೆರವೇರಿಸಿದರು ಶಾಸಕರೊಂದಿಗಿನ ಚರ್ಚೆಯಲ್ಲಿ ಸಭೆಯಲ್ಲಿ ಪಾಲ್ಗೊಂಡ ಹಲವರಿಂದ ಹಲವು ಪ್ರಶ್ನೆಗಳು, 

ಆಟೋ ಕಾಂಪ್ಲೆಕ್ಸ್‌ನಲ್ಲಿ ಮೂಲಭೂತ ಸೌಲಭ್ಯ
ಗಾಂಧಿ ಬಜಾರ್ ನಲ್ಲಿ ತಳ್ಳುವ ಗಾಡಿಗಳಿಂದಾಗುವ ತೊಂದರೆ, ಪುಟ್ ಪಾತ್ ಅತಿಕ್ರಮಣ, ಟ್ಯಾಕ್ಸಿ ಸ್ಟಾಂಡ್ ಅನ್ನು ಸ್ಥಳಾಂತಿರುಸುವ ಬಗ್ಗೆ, ಸಾಗರ ರಸ್ತೆಯ ಭಾರ್ಗವಿ ಪೆಟ್ರೋಲ್ ಬಂಕ್ ಹತ್ತಿರ ಪುಟ್ ಬಾತ್ ಮೇಲೆ ಹಳೆಯ ಟಾಟಾ ಸುಮೋ ಹಲವು ಹಳೆಯ ವೆಹಿಕಲ್ ಗಳನ್ನು ನಿಲ್ಲಿಸಿದ್ದು ಸಾರ್ವಜನಿಕರಿಗೆ ಓಡಾಡಲು ತೊಂದರೆಯ   ಚರ್ಚೆ, ಹಲವು ಹೋಟೆಲ್ ಹಾಗೂ ತಿಂಡಿ ಗಾಡಿಗಳಲ್ಲಿ ಟೆಸ್ಟಿಂಗ್ ಪೌಡರ್ ಹಾಗೂ ವಿಷಕಾರಿ ಕಲರ್  ಬೆರೆಸುವ ಬೆರೆಸುವುದನ್ನು ತಡೆಗಟ್ಟುವ ಬಗ್ಗೆ, ಚಿಕನ್ ಸ್ಟಾಲ್ ಗಳನ್ನು ಒಂದೇ ಕಡೆಗೆ ಸ್ಥಳಾಂತರಿಸುವ ಬಗ್ಗೆ, ಬೀದಿ ನಾಯಿ ಬೀಡಾಡಿ ದನ ಕತ್ತೆ ಕುದುರೆ ನಗರದಿಂದ ಹೊರವಲಯಕ್ಕೆ ಸ್ಥಳಾಂತರಿಸುವ ಬಗ್ಗೆ ಒಣ ಕಸ ಹಸಿ ಕಸವನ್ನು ಬೇರ್ಪಡಿಸುವ ಬಗ್ಗೆ, ಸಿಗ್ನಲ್ ಲೈಟ್ ಇಲ್ಲದಿರುವುದು ಕಂದಾಯ ವ್ಯವಸ್ಥೆಯ ಕಿರಿಕಿರಿ
ಖಾಸಗಿ ಬಸ್ ನಿಲ್ದಾಣದಲ್ಲಿ ದ್ವಿಚಕ್ರವಾಹನಗಳ ಓಡಾಟ, ರೈಲ್ವೆ ಸ್ಟೇಷನ್ ಮುಂಭಾಗ ಬಾಡಿಗೆ ಆಟೋಗಳನ್ನು ಜನರಿಗೆ ಓಡಾಡಲು ತೊಂದರೆ ಆಗುವ ರೀತಿ ನಿಲ್ಲಿಸಿಕೊಂಡಿರುವುದು,
ಇನ್ನು ಇತ್ಯಾದಿ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ಇನ್ನು ಹಲವಾರು ದೂರುಗಳನ್ನು ಶಾಸಕರ ಗಮನಕ್ಕೆ ತಂದರು, ಕೆಲವರಂತೂ ಹೇಳಿದ ವಿಷಯವನ್ನೇ ಮತ್ತೆ ಪ್ರಸ್ತಾಪಿಸಿದರು ಶಾಸಕರು ತುಂಬಾ ಸಮಾಧಾನದಿಂದ ಕೇಳಿ ಸ್ಥಳದಲ್ಲಿಯೇ ತಮ್ಮ ವಿಶ್ಲೇಷಣೆಯನ್ನು ಸಂಬಂಧಪಟ್ಟವರಿಗೆ ತಿಳಿಸಿದರು, 

ಶಿವಮೊಗ್ಗ ನಗರದ ನಾಗರೀಕರ ಸಮಸ್ಯೆ ಗಳಿಗೆ ಪ್ರಾಮಾಣಿಕ ಸ್ಪಂದಿಸಬೇಕೆನ್ನುವ ಮನೋಭಾವ
ನನ್ನದು. ಅದೇ ನಿಟ್ಟಿನಲ್ಲಿ ನಿತ್ಯವೂ ಅವಕಾಶ ಸಿಕ್ಕಾಗ ನಾಗರೀಕರ ಜತೆಗೆ ಚರ್ಚಿಸುತ್ತಾ, ನಗರದ
ವೀಕ್ಷಣೆ ಮಾಡುತ್ತಾ ಸಮಸ್ಯೆಗಳನ್ನು ಕಂಡು, ಕೇಳಿ ತಿಳಿದು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ
ವಾಗಿ ಕೆಲಸ ಮಾಡುತ್ತಿದ್ದೇನೆ, ಯಾವುದೇ ಸಮಸ್ಯೆ ಗಳಿಗೂ ಶೀಘ್ರವೇ ಪರಿಹಾರ ನೀಡಲು ಆಗದು ಆದರೆ ಮುಂದಿನ ದಿನಗಳಲ್ಲಿ  ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ, ಶಾಸಕರಾದ ಚನ್ನಬಸಪ್ಪ ಚೆನ್ನಿ ಅವರ ಮಾತು.

 

Join WhatsApp

Join Now

Join Telegram

Join Now