ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಶಿವಮೊಗ್ಗದಲ್ಲಿ ಮತ್ತೆ ರಂಗೇರುತ್ತಿದೆ “ಕಾಂತಣ್ಣ ಕಪ್”

On: March 27, 2026 10:26 AM
Follow Us:
---Advertisement---

ಸೇವೆಯೇ ಪರಮಧರ್ಮವಾಗಿದ್ದು, ನನ್ನ ಕೈಯಲ್ಲಾದ ಸಹಕಾರ ಮಾಡುವುದನ್ನು ನಾನು ರೂಢಿಸಿಕೊಂಡು ಬಂದಿದ್ದೆನೆ ಎಂದು ಕಾಂಗ್ರೆಸ್ ಪಕ್ಷದ ನಾಯಕ, ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಹೇಳಿದರು.  ನಗರದ ಮಥುರಾ ಹೋಟೆಲ್ ನಲ್ಲಿ ಶಿವಮೊಗ್ಗದ ಎಂಬಿಸಿ ತಂಡದವತಿಯಿಂದ ಆಯೋಜಿಸಿರುವ “ಕಾಂತಣ್ಣ ಕಪ್” ಕ್ರಿಕೆಟ್ ಪಂದ್ಯಾವಳಿಯ ಆಕರ್ಷಕ ಟ್ರೋಫಿ ಹಾಗೂ ಟೀಶರ್ಟ್ ಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

 ಪ್ರತಿ ಬಾರಿ ಎಂಬಿಸಿ ತಂಡ, ನನ್ನ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದಕ್ಕೆ ಶ್ಲಾಘಿಸಿದರು.  ಕ್ರಿಕೇಟ್ ಆಗಲೀ, ಇತರೇ ಕ್ರೀಡೆಯಾಗಲೀ, ಕ್ರೀಡೆ ಎಂಬುದು ನಮಗೆ ಚೇತೋಹಾರಿಯಾಗಿದೆ.  ಕ್ರೀಡೆ ಮೂಲಕ ಎಲ್ಲರೂ ಲವಲವಿಕೆಯಿಂದ ಇರಬಹುದು.  

ಅದರಂತೆ, ಪ್ರತಿಯೊಂದು ಸಮಾಜವು ಈ ಕ್ರಿಕೆಟ್ ಪಂದ್ಯಾವಳಿ ಮೂಲಕ ಒಂದೆಡೆ ಸೇರುತ್ತಿರುವುದು, ಸಂತಸದ ವಿಚಾರವಾಗಿದೆ.  ಈ ಮೂಲಕ ಎಲ್ಲಾ ಸಮುದಾಯಗಳು ಕ್ರಿಕೆಟ್ ಮೂಲಕ ಸೇರಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಾಗಬೇಕು ಎಂದರು.  ಕಳೆದ ಬಾರಿ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ 7 ಸಮುದಾಯಗಳ 12 ತಂಡಗಳು ಪಾಲ್ಗೊಂಡಿದ್ದವು.  ಅದರಂತೆ, ಈ ಬಾರಿ 13 ಸಮುದಾಯಗಳ 19 ತಂಡ ಭಾಗವಹಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.  ಪ್ರತಿ ಸಮುದಾಯಗಳ ಯುವಕರು, ಕ್ರಿಕೆಟ್ ಮೂಲಕ ಒಂದೆಡೆ ಸೇರಿ, ತಮ್ಮ ಗೆಳೆತನ ಮತ್ತಷ್ಟು ಗಟ್ಟಿಗೊಳ್ಳುವಿಕೆಗೆ ಈ ಕಾಂತಣ್ಣ ಕಪ್ ಪಂದ್ಯಾವಳಿ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಇನ್ನು ಆಕರ್ಷಕ ಟ್ರೋಫಿಗಳು ಈ ಪಂದ್ಯಾವಳಿಗೆ ಮುಕುಟಪ್ರಾಯವಾಗಿದ್ದು, ಮುಂದಿನ ವರ್ಷ ಫಡ್ ಲೈಟ್ ಕ್ರಿಕೆಟ್ ಪಂದ್ಯಾವಳಿಗೆ ಯೋಜಿಸಲಾಗಿದೆ ಎಂದರು.  

ಈ ವೇಳೆ ಪಾಲಿಕೆ ಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಭಾವಸಾರ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ಭಾವಸಾರ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಪತ್ರಕರ್ತರಾದ ಗೋ.ವ. ಮೋಹನಕೃಷ್ಣ, ಗ್ಯಾರಂಟಿ ಯೋಜನೆ ಸದಸ್ಯರಾದ ಬಸವರಾಜ್, ಮುಖಂಡರಾದ ಲೋಕೆಶ್, ರಾಜು, ಆಯೋಜಕರಾದ ವಿನಯ್ ತಾಂದ್ಲೆ ಸೇರಿದಂತೆ ಎಂಬಿಸಿಯ ಮಂಜು ಬೇದ್ರೆ ಹಾಗೂ ತಂಡದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

“ಕಾಂತಣ್ಣ ಕಪ್” ಕ್ರಿಕೆಟ್ ಪಂದ್ಯಾವಳಿ ಗೆದ್ದ ತಂಡಕ್ಕೆ 55,555 ರೂ. ಹಾಗೂ ಆಕರ್ಷಕ ಟ್ರೋಫಿ, ರನ್ನರ್ ಅಪ್ ತಂಡಕ್ಕೆ 33,333 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.  ಅಲ್ಲದೇ ಮೂರನೇ ಬಹುಮಾನ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು.

ಅಲ್ಲದೇ, ಈ ಬಾರಿ ಲಕ್ಕಿ ಡಿಪ್ ಸಹ ಇರಲಿದ್ದು, ಪ್ರಥಮ ಬಹುಮಾನವಾಗಿ 1 ಕುರಿ, ದ್ವಿತೀಯ ಲಕ್ಕಿ ಬಹುಮಾನವಾಗಿ ಸೈಕಲ್ ಹಾಗೂ ಮೂರನೇ ಲಕ್ಕಿ ಬಹುಮಾನವಾಗಿ ಒಂದು ಕ್ರಿಕೆಟ್ ಬ್ಯಾಟ್ ನೀಡಲಾಗುತ್ತಿದೆ.

Sathish munchemane

Join WhatsApp

Join Now

 

Read More