ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

‎ಬರ್ಮಪ್ಪನಗರ ತಟಾಕಿ ಮಠ ಜಮೀನು ವಿವಾದಕ್ಕೆ ತಿರುವು: ನಿವಾಸಿಗಳಿಗೆ ಪರ್ಯಾಯ ವಸತಿ ಅಗುತ್ತಾ.! ‎

On: March 25, 2026 4:46 PM
Follow Us:
---Advertisement---

ಶಿವಮೊಗ್ಗ ನಗರದ ಮಧ್ಯಭಾಗದಲ್ಲಿರುವ ಬರ್ಮಪ್ಪನಗರದ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ತಟಾಕಿ ಮಠಕ್ಕೆ ಸೇರಿದ ಸುಮಾರು 2 ಎಕರೆಗೂ ಅಧಿಕ ಜಮೀನಿನ ವಿವಾದ ಇತ್ತೀಚೆಗೆ ಮಹತ್ವದ ತಿರುವು ಪಡೆದಿದೆ.

ಈ ವಿಚಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ, ಇತ್ತೀಚಿನ ನ್ಯಾಯಾಲಯ ತೀರ್ಪು ಮಠದ ಪರವಾಗಿ ಬಂದಿರುವುದು ಗಮನಾರ್ಹವಾಗಿದೆ.

ಈ ಹಿನ್ನೆಲೆಯಲ್ಲಿ, ಬರ್ಮಪ್ಪನಗರದಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಕುಟುಂಬಗಳ ಪರಿಸ್ಥಿತಿ ಕುರಿತು ಚಿಂತನೆ ನಡೆಸಲಾಗಿದೆ. ಅವರಿಗೆ ಪರ್ಯಾಯ ವಸತಿ ಕಲ್ಪಿಸಬೇಕೆಂಬ ಉದ್ದೇಶದಿಂದ ಇಂದು ಬೆಳಗ್ಗೆ ಮಾನ್ಯ ಶಾಸಕ ಎಸ್. ಎನ್. ಚನ್ನಬಸಪ್ಪ ಅವರ ನೇತೃತ್ವದಲ್ಲಿ ವಸತಿ ಸಚಿವ ಬಿ. ಜಡ್. ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಸ್. ಎಸ್. ಜ್ಯೋತಿಪ್ರಕಾಶ್, ಸಹ ಕಾರ್ಯದರ್ಶಿ ಬಳ್ಳೆಕೆರೆ ಸಂತೋಷ ಹಾಗೂ ಇತರ ನಿರ್ದೇಶಕರುಗಳು ಭಾಗವಹಿಸಿ, ಮಠದ ಜಮೀನು ವಿಚಾರ ಹಾಗೂ ಅಲ್ಲಿನ ನಿವಾಸಿಗಳಿಗೆ ನ್ಯಾಯಯುತ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.

ಈ ಭೇಟಿಯಿಂದ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುವ ನಿರೀಕ್ಷೆ ವ್ಯಕ್ತವಾಗಿದ್ದು, ಸ್ಥಳೀಯ ನಿವಾಸಿಗಳಿಗೂ ನೂತನ ವಸತಿ ವ್ಯವಸ್ಥೆ ಕಲ್ಪಿಸುವತ್ತ ಸರ್ಕಾರದ ಗಮನ ಸೆಳೆಯಲಾಗಿದೆ.

Sathish munchemane

Join WhatsApp

Join Now

 

Read More