ಈ ರಸ್ತೆಯಲ್ಲಿಯೇ ಉಸ್ತುವಾರಿ ಸಚಿವರು, ಎಂಎಲ್ಎಗಳು, ಎಂಎಲ್ಸಿಗಳು ಸಂಚರಿಸುತ್ತಾರೆ; ಅವರಿಗೆ ಕಾಣುವುದಿಲ್ಲವೇ?”
ಸರ್ಕಾರಿ ನಿರ್ಲಕ್ಷ್ಯದ ಕಹಿ ಮುಖ – ವರ್ಷಗಳಿಂದ ಬಿದ್ದೇ ಬಿದ್ದಿರುವ ಕಾಂಪೌಂಡ್ ಗೋಡೆಗೆ ಯಾರು ಹೊಣೆ?*
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಛೇರಿ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ ಸುತ್ತಲಿನ ಕಾಂಪೌಂಡ್ ಗೋಡೆ ಹಲವು ವರ್ಷಗಳ ಹಿಂದೆಯೇ ಕುಸಿದು ಬಿದ್ದಿದೆ.
ಆದರೂ ಇಷ್ಟು ಕಾಲ ಕಳೆದರೂ ಅದರ ಪುನರ್ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ತೀವ್ರ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಅಚ್ಚರಿಯ ಸಂಗತಿ ಎಂದರೆ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾ ಪಂಚಾಯತ್ಗೆ ಯಾವುದೇ ಮನವಿ ಸಲ್ಲಿಸಿಲ್ಲ ಎನ್ನುವುದು. ಸಾರ್ವಜನಿಕ ಆಸ್ತಿಯ ರಕ್ಷಣೆಯ ಹೊಣೆ ಹೊತ್ತಿರುವ ಅಧಿಕಾರಿಗಳಿಂದಲೇ ಇಂತಹ ನಿರ್ಲಕ್ಷ್ಯ ನಡೆಯುತ್ತಿರುವುದು ವಿಪರ್ಯಾಸವೇ ಸರಿ.
ಈ ಬಗ್ಗೆ ಉಪನಿರ್ದೇಶಕರಾದ ಮಂಜುನಾಥ್ (ಡಿ.ಡಿ.ಪಿ.ಐ) ಅವರನ್ನು ಪ್ರಶ್ನಿಸಿದಾಗ, “ಈ ರಸ್ತೆಯಲ್ಲಿಯೇ ಉಸ್ತುವಾರಿ ಸಚಿವರು, ಎಂಎಲ್ಎಗಳು, ಎಂಎಲ್ಸಿಗಳು ಸಂಚರಿಸುತ್ತಾರೆ; ಅವರಿಗೆ ಕಾಣುವುದಿಲ್ಲವೇ?” ಎಂಬ ಉಡಾಫೆಯ ಉತ್ತರ ನೀಡಿರುವುದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಇದು ಹೊಣೆಗಾರಿಕೆಯನ್ನು ತಳ್ಳಿಹಾಕುವ ಸ್ಪಷ್ಟ ಉದಾಹರಣೆಯಾಗಿದೆ.
ಈ ಕಾಂಪೌಂಡ್ ಗೋಡೆ ಇಲ್ಲದ ಪರಿಣಾಮವಾಗಿ ಆ ಪ್ರದೇಶ ಹಂದಿ, ಬೀದಿ ನಾಯಿಗಳ ಅಡ್ಡೆಯಾಗಿದ್ದು, ಅಲ್ಲಿಂದ ಹಾದು ಹೋಗುವ ಸಾರ್ವಜನಿಕರು ಕೂಡ ಅಲ್ಲಿ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇದರ ಪರಿಣಾಮವಾಗಿ ದುರ್ಗಂಧ ಹರಡುತ್ತಿದ್ದು, ಪರಿಸರ ಹಾಳಾಗುತ್ತಿದೆ.
ಸರ್ಕಾರಿ ಕಚೇರಿ ಸುತ್ತಮುತ್ತಲಿನ ಇಂತಹ ದುಸ್ಥಿತಿಯನ್ನು ವರ್ಷಗಳ ಕಾಲ ಗಮನಿಸದೇ ಬಿಡುವುದು ಅತ್ಯಂತ ಗಂಭೀರ ವಿಷಯ ಸಂಬಂಧಿಸಿದ ಇಲಾಖೆ ಮತ್ತು ಉಸ್ತುವಾರಿ ಸಚಿವರು, ಎಂಎಲ್ಎಗಳು, ಎಂಎಲ್ಸಿಗಳು ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ಕಾಂಪೌಂಡ್ ಗೋಡೆಯ ಪುನರ್ನಿರ್ಮಾಣ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.








