ಕೇಂದ್ರ ಬಜೆಟ್‌ನಲ್ಲಿ ಶಿವಮೊಗ್ಗ ಸಂಸದರ ಧ್ವನಿ – ಅಭಿವೃದ್ಧಿ ಬೇಡಿಕೆಗಳಿಗೆ ಒತ್ತಾಯ
ಶಿವಮೊಗ್ಗ: ಸ್ಥಳೀಯ ಸಮಸ್ಯೆಗಳನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿರುವ ಸಾತ್ವಿಕ ನುಡಿ ಪತ್ರಿಕೆಯ ವರದಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಪತ್ರಿಕೆಯ ಪೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾದ “ಬೀರೂರು–ಶಿವಮೊಗ್ಗ ರೈಲ್ವೆ ಹಳಿ ಡಬ್ಲಿಂಗ್ ಕೆಲಸ ವಿಳಂಬ – ಅಭಿವೃದ್ಧಿ ನಿರ್ಲಕ್ಷ್ಯ ಯಾಕೆ?” ಎಂಬ ಪ್ರಮುಖ ವರದಿ ಪರಿಣಾಮವಾಗಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ B. Y. Raghavendra ಅವರು 2026–27ರ ಕೇಂದ್ರ ಬಜೆಟ್ ಚರ್ಚೆಯಲ್ಲಿ ರೈಲ್ವೆ ಇಲಾಖೆಯ ಬೇಡಿಕೆಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಶಿವಮೊಗ್ಗ ಜಿಲ್ಲೆಯ ಪರವಾಗಿ ಧ್ವನಿ ಎತ್ತಿದ್ದಾರೆ.
ಸಾತ್ವಿಕ ನುಡಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡ ಸಂಸದರು, ಶಿವಮೊಗ್ಗ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಯೋಜನೆಗಳನ್ನು ತ್ವರಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಮುಖ ಬೇಡಿಕೆಗಳು
ಬೀರೂರು–ಶಿವಮೊಗ್ಗ ರೈಲ್ವೆ ದ್ವಿಪಥ ಯೋಜನೆ:
ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವೇಗದ ಹಾಗೂ ಸುಗಮ ಸಂಪರ್ಕ ಕಲ್ಪಿಸಲು ಸುಮಾರು 63 ಕಿ.ಮೀ. ಉದ್ದದ ದ್ವಿಪಥ ರೈಲ್ವೆ ಯೋಜನೆಗೆ ಶೀಘ್ರ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಸಂಸದರು ಒತ್ತಾಯಿಸಿದ್ದಾರೆ.
ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಯೋಜನೆ:
ಈ ಮಹತ್ವದ ಹೊಸ ಮಾರ್ಗದಲ್ಲಿ ಶಿಕಾರಿಪುರ–ರಾಣೆಬೆನ್ನೂರು ನಡುವಿನ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ ಕಾಮಗಾರಿಯನ್ನು ವೇಗಗೊಳಿಸುವಂತೆ ಮನವಿ ಮಾಡಿದ್ದಾರೆ.
ಕೋಟೆಗಂಗೂರು ಕೋಚಿಂಗ್ ಟರ್ಮಿನಲ್:
ಶಿವಮೊಗ್ಗವನ್ನು ಪ್ರಮುಖ ರೈಲ್ವೆ ಹಬ್ ಆಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೋಟೆಗಂಗೂರು ಕೋಚಿಂಗ್ ಟರ್ಮಿನಲ್ ಎರಡನೇ ಹಂತದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಈ ಹಂತದಲ್ಲಿ ಪಿಟ್ ಲೈನ್ ಹಾಗೂ ಕೋಚ್ ವಾಷಿಂಗ್ ಪ್ಲಾಂಟ್ ನಿರ್ಮಾಣಕ್ಕೆ ವಿಶೇಷ ಗಮನ ಹರಿಸುವಂತೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ.
ಹೊಸ ರೈಲ್ವೆ ಮಾರ್ಗಗಳಿಗೂ ಆಗ್ರಹ
ಮಲೆನಾಡು ಮತ್ತು ಕರಾವಳಿ ಭಾಗಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಂಸದರು ಹೊಸ ರೈಲ್ವೆ ಮಾರ್ಗಗಳ ಅನುಷ್ಠಾನಕ್ಕೂ ಒತ್ತಾಯಿಸಿದ್ದಾರೆ.
ತಾಳಗುಪ್ಪ – ಹೊನ್ನಾವರ
ಶಿವಮೊಗ್ಗ – ತೀರ್ಥಹಳ್ಳಿ – ಶೃಂಗೇರಿ – ಮಂಗಳೂರು
ಶಿವಮೊಗ್ಗ – ಚಿಕ್ಕಮಗಳೂರು ಈ ಮಾರ್ಗಗಳು ಅನುಷ್ಠಾನವಾದರೆ ಮಲೆನಾಡು ಪ್ರದೇಶದ ಸಾರಿಗೆ ವ್ಯವಸ್ಥೆ, ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಮಹತ್ವದ ಉತ್ತೇಜನ ಸಿಗಲಿದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಸಕವಾಗಿ ಬೆಳಕಿಗೆ ತರುವಲ್ಲಿ ಸಾತ್ವಿಕ ನುಡಿ ಪತ್ರಿಕೆಯ ಪಾತ್ರ ಮಹತ್ವದ್ದಾಗಿದೆ. ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪರಿಣಾಮವಾಗಿ ವಿಷಯ ಲೋಕಸಭೆಯ ಮಟ್ಟದಲ್ಲಿ ಪ್ರಸ್ತಾಪವಾಗಿರುವುದು ಜಿಲ್ಲೆಯ ಜನತೆಗೆ ಆಶಾದಾಯಕ ಬೆಳವಣಿಗೆಯಾಗಿದೆ.
ಮಲೆನಾಡಿನ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳು ಕೇಂದ್ರ ಸರ್ಕಾರದ ಗಮನ ಸೆಳೆದಿರುವುದು ಜಿಲ್ಲೆಯ ಅಭಿವೃದ್ಧಿಗೆ ಹೊಸ ನಿರೀಕ್ಷೆ ಮೂಡಿಸಿದೆ.






