ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಬಡವರ ಪರ ಹುಟ್ಟು ಹೋರಾಟಗಾರ ಭಗವಾನ್ ನಿಧನ.!

On: March 9, 2026 9:24 AM
Follow Us:
---Advertisement---

ಶಿವಮೊಗ್ಗ: ಬಡವರ ಪರ ಧ್ವನಿ ಎತ್ತುತ್ತಿದ್ದ ಹೋರಾಟಗಾರ ಹಾಗೂ ಸಮಾಜ ಸೇವಕರಾದ ಶಿವಮೊಗ್ಗದ ಭಗವಾನ್ (53) ಅವರು ವಿನೋಬನಗರದ ಮೆದಾರಕೆರೆ ಬಳಿಯ ತಮ್ಮ ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ. ಅವರ ನಿಧನದ ಸುದ್ದಿ ತಿಳಿದ ಕೂಡಲೇ ಸ್ನೇಹಿತರು, ಹೋರಾಟಗಾರರು ಹಾಗೂ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.

ಭಗವಾನ್ ಅವರು ಯುವಕಾಲದಲ್ಲೇ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡು ಬಡವರು, ಶೋಷಿತರು ಹಾಗೂ ಅನ್ಯಾಯಕ್ಕೊಳಗಾದವರ ಪರವಾಗಿ ಸದಾ ನಿಲ್ಲುತ್ತಿದ್ದರು. ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಆರಂಭಿಸಿದ ಅವರು ನಂತರ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿಯೂ ಕಾರ್ಯನಿರ್ವಹಿಸಿದ್ದರು. ಅದೇ ಸಮಯದಲ್ಲಿ ದಲಿತ ಸಂಘರ್ಷ ಸಮಿತಿಯಲ್ಲೂ ಮುಂಚೂಣಿ ನಾಯಕರಾಗಿ ಸಕ್ರಿಯವಾಗಿ ಕೆಲಸ ಮಾಡಿ, ಬಡವರಿಗೆ ನ್ಯಾಯ ದೊರಕಿಸಲು ಅನೇಕ ಹೋರಾಟಗಳನ್ನು ನಡೆಸಿದ್ದರು.

ಸಮಾಜದ ದುರ್ಬಲ ವರ್ಗಗಳಿಗೆ ನೆರವಾಗುವುದೇ ತಮ್ಮ ಜೀವನದ ಧ್ಯೇಯವೆಂದು ಭಾವಿಸಿದ್ದ ಭಗವಾನ್ ಅವರು ಹಲವಾರು ಸಾಮಾಜಿಕ ಚಳುವಳಿಗಳ ಮೂಲಕ ಜನಮನ ಗೆದ್ದಿದ್ದರು. ಅವರ ಸೇವೆಯನ್ನು ಸ್ಮರಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಬೊಮ್ಮನಕಟ್ಟೆ ಪ್ರದೇಶದಲ್ಲಿ ನಿರ್ಮಿಸಿದ ಲೇಔಟ್‌ಗೆ “ಭಗವಾನ್ ನಗರ” ಎಂದು ನಾಮಕರಣ ಮಾಡಿದ್ದು ವಿಶೇಷವಾಗಿದೆ. ಅಲ್ಲಿ ಅನೇಕ ಕಡುಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು.

ಭಗವಾನ್ ಅವರ ಅಗಲಿಕೆಯಿಂದ ಬಡವರ ಪರ ಸದಾ ಹೋರಾಡುತ್ತಿದ್ದ ಒಬ್ಬ ಧೈರ್ಯಶಾಲಿ ಹೋರಾಟಗಾರನನ್ನು ಶಿವಮೊಗ್ಗ ನಗರ ಕಳೆದುಕೊಂಡಿದೆ ಎಂದು ಹಲವರು ಕಂಬನಿ ಮಿಡಿದಿದ್ದಾರೆ. ಅವರ ಹೋರಾಟಗಳು ಮತ್ತು ಸೇವಾ ಮನೋಭಾವ ಜನರ ನೆನಪಿನಲ್ಲಿ ಸದಾ ಉಳಿಯಲಿವೆ.

Sathish munchemane

Join WhatsApp

Join Now

 

Read More