ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಗಾಂಜಾ ಸೇವಿಸುವ ಅಪ್ರಾಪ್ತರಿಗೆ ಹಿಂದೂಗಳ ಟಾರ್ಗೆಟ್‌ ಮಾಡಿ ಹಲ್ಲೆ ಮಾಡುವ ನಶೆ ಅದು ಯಾವುದು.!?

On: March 5, 2026 3:59 PM
Follow Us:
---Advertisement---

ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ‌ಮಕ್ಕಳು ವಿಶೇಷವಾಗಿ ಅನ್ಯಕೋಮಿನ‌ಮಕ್ಕಳು ಗಾಂಜಾ ಸೇವಿಸಿ ದುರ್ಘಟನೆಗೆ ಕಾರಣವಾಗುತ್ತಿದ್ದಾರೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಾಲಾಪರಾಧಿಗಳ ಸಂಖ್ಯೆ ಶೇ.15 ರಷ್ಟು ಹೆಚ್ಚಾಗಿದೆ ಎಂದು ಶಾಸಕ ಚೆನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚನ್ನಿ ಗಾಂಜಾ, ಮಾದಕ ಸೇವನೆ, ಕಳ್ಳತನ ಪ್ರಕರಣಗಳು ಹೆಚ್ಚು ಬಾಲಾಪರಾಧಿಗಳಲ್ಲಿ ನಡೆಯುತ್ತಿದೆ.  ಶೇ.50 ಕ್ಕಿಂತ ಹೆಚ್ಚು sslc ಮುಗಿಸದ ಮಕ್ಕಳುಗಳು ಈ ಪ್ರಕರಣಗಳಲ್ಲಿ ಪತ್ತೆಯಾಗುತ್ತಿದ್ದಾರೆ.

ಕಲ್ಲುತೂರಾಟದಲ್ಲಿ ಪಾಲ್ಗೊಂಡಿರುವುದು ಕಂಡು ಬಂದಿದೆ  ಶಾಲೆಯಿಂದ ಹೋರ ಬಂದರೆ ಎಲ್ಲಾ ನಶೆಗಳು ಸಿಗುವ ರೀತಿ ಯಲ್ಲಿ ಶಿವಮೊಗ್ಗದಲ್ಲಿ ಇದೆ, ಅಪ್ರಾಪ್ತರ ಗುಂಪು ಸೂಳೆಬೈಲಿನಲ್ಲಿ ಸಂಕೇತ್ ನ ಕೊಲೆ ಮಾಡಿದ್ದಾರೆ. ಆತನಕೊಲೆಗೆ ಕಾರಣರಾದವರು 8 ಮತ್ತು 9 ನೇ ತರಗತಿಯಲ್ಲಿ ಪೇಲ್ ಆದ ವಿದ್ಯಾರ್ಥಿಗಳಾಗಿದ್ದಾರೆ. 

ಗಣಪತಿ ಮೆರವಣಿಗೆ, ಬೇರೆ ಬೇರೆ ಹಿಂದೂಗಳ ಕಾರ್ಯಕ್ರಮದಲ್ಲಿ ಮೇಲೆ ಎಲ್ಲೆಲ್ಲಿ ಕಲ್ಲುತುರಾಟವಾಗಿದೆ ಅಲ್ಲೆಲಾ ಅಪ್ರಪ್ತರನ್ನ ಬಳಸಿ ಮುಸ್ಲೀಂ ಕಿಡಗೇಡಿಗಳು ಕಾರ್ಯಸಾಧಿಸುತ್ತಿದ್ದಾರೆ. ರಕ್ಷಣ ಇಲಾಖೆ ಅಸಾಯಹಕತೆಯನ್ನ ತೋರುತ್ತಿದೆ. ಕಾನೂನಿನಲ್ಲಿ ಅಪ್ರಾಪ್ತರು ರಕ್ಷಣೆ ಪಡೆಯುತ್ತಿದ್ದಾರೆ.

ಗಾಂಜಾ ಸೇವಿಸುವ ಅಪ್ರಾಪ್ತರಿಗೆ ಹಿಂದೂಗಳಿಗೆ ಹಲ್ಲೆ ಮಾಡುವ ನಶೆ ಅದು ಯಾವುದು ನನಗೆ ತಿಳಿಯುತ್ತಿಲ್ಲ ಇದರ ಹಿಂದೆ ಇರುವ ದುಷ್ಟ ಶಕ್ತಿ ಬಗ್ಗೆಯು ಎನ್.ಐ.ಎ. ತನಿಖೆ ಯಾಗಬೇಕು.!

ಮುಸ್ಲೀಂ ಸಮಾಜ ಎಚ್ಚೆತ್ತುಕೊಳ್ಳಬೇಕು. ಅಪ್ರಾಪ್ತರನ್ನ ಎತ್ತಿಕಟ್ಟಬಾರದು. ಅವರನ್ನ ಎತ್ತುಕಟ್ಟುವವರ ವಿರುದ್ಧ ಕ್ರಮವಾಗಬೇಕಿದೆ. ಸೂಳೆಬೈಲಿನಲ್ಲಿ ಹಿಂದೂಗಳ ಮನೆಯ ಮೇಲೆ ಕಲ್ಲುತೂರಿದವರ ವಿರುದ್ಧ ಯೋಚಿಸಬೇಡಿ ದೂರು ನೀಡಿದರೆ ಮತ್ತೊಂದು ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಸ್ಥಳೀಯ ಮುಸ್ಲೀಂರು ಹೇಳುತ್ತಾರೆ. 

67 ಪ್ರಕರಣ ಅಪ್ರಾಪ್ತರಿಂದ ನಡೆದಿದೆ ಅಪ್ರಾಪ್ತರ ಕೃತ್ಯಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಬೇರೆ ರೀತಿ ತನಿಖೆ ನಡೆಸಬೇಕಿದೆ. ಗೃಹ ಇಲಾಖೆ ಈ ಬಗ್ಗೆ ಚಿಂತಿಸಬೇಕಿದೆ. 2025-26 ರಲ್ಲಿ  67 ಪ್ರಕರಣಗಳು ಅಪ್ರಾಪ್ತರಿಂದ ನಡೆದ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿದೆ. 1 ಕೊಲೆ ಪ್ರಕರಣ,  ಒಂದು ಕೊಲೆಯತ್ನ,  19 ರಾಬರಿ ಪ್ರಕರಣಗಳು,  ಮೂರು ಡಕಾಯಿತಿ, ಇತರೆ 11 ಸೇರಿ ಒಟ್ಟು 67 ಪ್ರಕರಣಗಳು ಈ ಸಾಲಿನಲ್ಲೇ ಪತ್ತೆಯಾಗಿವೆ.

ಪೊಲೀಸರು ಇವರನ್ನ ಬಂಧಿಸಿದರೆ  ಇವರೆಲ್ಲಾ  ಸಲೀಸಾಗಿ ಹೊರಗೆ ಬರುತ್ತಾರೆ. ಸಾಗರದಲ್ಲಿ ಗಣಪತಿ ಮೆರವಣಿಗೆ ಮೇಲೆ ಎಂಜಲು ಉಗಿದರು. ಮಕ್ಕಳು ಉಗಿದಿದಿದ್ದಾರೆ ಎಂದು ಗೃಹಸಚಿವರು ಸಮರ್ಥಿಸಿಕೊಂಡಿದ್ದಾರೆ. ಸಂಕೇತ್ ಕೊಲೆಯಾಗಿದೆ. ಈ ಬಗ್ಗೆ ಚಿಂತಿಸಬೇಕಿದೆ ಎಂದರು. 

ಇದು ಗಂಭೀರವಾದ ಸಮಸ್ಯೆ 15-17 ವರ್ಷದ ಬಾಲಕರು ಇದ್ದಾರೆ ಇದಕ್ಕೆ ಬಿಗಿ ಕ್ರಮ ಕೈಗೊಳ್ಳಬೇಕಿದೆ ಇಲ್ಲವಾದಲ್ಲಿ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.

ಹರ್ಷನ ಪ್ರಕರಣ ಎನ್ ಐಗೆ ಕೊಡಲಾಯಿತಿ. ಅವರೆಲ್ಲಾ ಯಾರೂ ಇದುವರೆಗೂ ಹೊರಗೆ ಬರಲಿಲ್ಲ ಎಂದು ವಿವರಣೆ ನೀಡಿದರು. 

ಸಂಕೇತ್ ಹತ್ಯೆ ಪ್ರಕರಣ ಎನ್ಐ ಗೆ ಕೊಡಿ

ರಾಜಕೀಯಕ್ಕಾಗಿ ಮಾತನಾಡುತ್ತಿಲ್ಲ ಸಾಯುತ್ತಿರುವುದು ಹಿಂದೂ ಮಕ್ಕಳು ಸಂಕೇತ್ ಕೊಲೆ‌ಪ್ರಕರಣವನ್ನ ಎನ್ ಐಗೆ ಕೊಡಬೇಕು. ಎನ್ಐಗೆ ಕೊಟ್ಟಕಾರಣ ಟ್ರಯಲ್ ಬ್ಲಾಸ್ಟ್ ಪ್ರಕರಣದಿಂದ ಶಿವಮೊಗ್ಗ ನೆಮ್ಮದಿಯಾಗಿದೆ ಇಲ್ಲದಿದ್ದರೆ ಶಿವಮೊಗ್ಗದಲ್ಲಿ ಎಲ್ಲಿ ಎಲ್ಲಿ ಬ್ಲಾಸ್ಟ್ ಅಗುತಿತ್ತೋ ಗೊತ್ತಿಲ್ಲ ಪಿ. ಎಫ್ಐ ಬ್ಯಾನ್ ಆಗಿದೆ. ಆದರೆ ಬೇರೆ ಮುಖವಾಡದಲ್ಲಿ ಆ ಸಂಘಟನೆ ಕಾರ್ಯರೂಪದಲ್ಲಿದೆ. ಸಂಘಟನೆಯು ಬ್ಯಾನ್ ಆದರೂ ಶಿವಮೊಗ್ಗದಲ್ಲಿ ಅವರು ಗಂಟುಮೂಟೆ ಕಟ್ಟಿಲ್ಲ ಬದಲಿಗೆ ಬೇರೆ ರೀತಿಯಲ್ಲಿ ಆಕ್ಟಿವ್ ಆಗಿದ್ದಾರೆ‌. ಕಾರ್ಯಚಟುವಟಿಕೆಯನ್ನ ಮುಂದುವರೆಸಿದ್ದಾರೆ ಎಂದರು. 

ದೇಶದ ಯೋಧ ಹಾಗೂ ಶಿವಮೊಗ್ಗದ ಮಂಜುನಾಥ್ ಸತ್ತಾಗ ಎಲ್ಲಿಗೆ ಹೋಗಿದ್ದರು ಮುಸ್ಲಿಂ ಹೆಣ್ಣು ಮಕ್ಕಳು.?

ಖಮೇನಿ ಹತ್ಯೆ ಪ್ರಕರಣದಲ್ಲಿ ಹೆಣ್ಮಕ್ಕಳು ಶಿವಮೊಗ್ಗದಲ್ಲಿ  ಹೋರಾಟಕ್ಕೆ ಬಂದಿದ್ದಾರೆ. ದೇಶದ ಯೋಧ ಸತ್ತಾಗ ಎಲ್ಲಿ ಹೋಗಿದ್ದೀರಿ. ಪೆಹಲ್ಗಾಮ್ ನಲ್ಲಿ ಮಂಜುನಾಥನ ಸಾವಾಯಿತಲ್ಲ ಎಲ್ಲಿಗೆ ಹೋಗಿದ್ದೀರಿ. ಗಡಿಕಾಯುವ ಯೋಧರ ಬಗ್ಗೆ ಹೋರಾಡಲಿಲ್ಲ. ಮಂಜುನಾಥ್ ಸತ್ತಾಗ ಕಣ್ಣೀರು ಹಾಕಲಿಲ್ಲ. ಶಿವಮೊಗ್ಗವನ್ನ ಸರಿಯಾದ ದಿಕ್ಕಿಗೆ ತೆಗೆದುಕೊಂಡು ಹೋಗಲು ಸರಿಯಾದ ತನಿಖೆಯಾಗಬೇಕು.

ಇದರ ಬಗ್ಗೆ ಶಿವಮೊಗ್ಗದ ಮುಸ್ಲೀಂರು ಸರಿಯಾಗಿ ಯೋಚಿಸದಿದ್ದರೆ ಖಮೇನಿ ವಂಶಸ್ಥರೆ ನಿಮ್ಮನ್ನ ತೆಗೆಯುತ್ತಾರೆ. 

15 ಲಕ್ಷ  ಪರಿಹಾರ ನೀಡಿದ ತಕ್ಷಣ ಏನೂ ಕ್ರಮವಾಗಲ್ಲ. ಘಟನೆಯ ಪರಿಣಾಮ ಮತ್ತೆ ಉದ್ಭವಿಸಬಾರದು ಎಂದಿದ್ದರೆ ಸಮಗ್ರ ಎನ್.ಐ.ಎ. ತನಿಖೆಯಾಗಬೇಕು.  

ಇತ್ತೀಚೆಗೆ ನಡೆದ ಕೆಲವು ಘಟನೆಗಳಲ್ಲಿ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿರುವುದಾಗಿ ಆರೋಪಿಸಿದ ಅವರು,

ಈ ಬಗ್ಗೆ ಗೃಹ ಇಲಾಖೆಗೆ ದೂರು ನೀಡಿದರೆ ಅಧಿಕಾರಿಗಳನ್ನು ದೋಡ್ಡಪೇಟೆ ಪೋಲಿಸ್ ಠಾಣೆಯಿಂದ ಕೋಟೆ ಪೋಲಿಸ್ ಠಾಣೆಗೆ  ಕೋಟೆಯಿಂದ ಜಯನಗರಕ್ಕೆ ವರ್ಗಾವಣೆ ಹೀಗೆ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾವಣೆ ಮಾಡುವ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ, ದೀನದಯಾಳ್, ಮೋಹನ್ರೆಡ್ಡಿ ಮತ್ತು ಜಗದೀಶ್ ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More