ಶಿವಮೊಗ್ಗ: ಶಿವಮೊಗ್ಗ, ಶಿರಸಿ ಹಾಗೂ ಸಾಗರದಲ್ಲಿ ನಡೆದ ಮಾರಿಕಾಂಬ ಜಾತ್ರೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅನುಕೂಲವಾಗಲು ಬೆಂಗಳೂರಿನಿಂದ ವಿಶೇಷ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ರವರಿಗೆ ರಾಜ್ಯ ಮಡಿವಾಳ ಸಂಘದ ಪ್ರಚಾರ ಸಮಿತಿ ಕಾರ್ಯಧ್ಯಕ್ಷ ಮಂಜುನಾಥ್ ಎನ್. ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗ ನಗರದ ಸುತ್ತಮುತ್ತಲಿನ ಪ್ರದೇಶಗಳಿಂದ ಹಬ್ಬಗಳಿಗೆ ಹೋಗಿಬರಲು ಅನುಕೂಲವಾಗುವಂತೆ ಬೆಂಗಳೂರಿನಿಂದ ವಿಶೇಷ ರೈಲು ಸಂಚಾರವನ್ನು ಕಲ್ಪಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದು, ಪ್ರಯಾಣಿಕರು ಸುಗಮವಾಗಿ ಪ್ರಯಾಣಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೂ ಇದೇ ರೀತಿಯ ಸಹಕಾರ ನೀಡುತ್ತೀರೆಂದು ಪ್ರಯಾಣಿಕರ ಪರವಾಗಿ ಧನ್ಯವಾದಗಳನ್ನು ಪತ್ರಿಕಾ ಪ್ರಕಟಣೆಯ ಮೂಲಕ ಸಲ್ಲಿಸಿದ್ದಾರೆ.





