ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಪ್ರಜ್ವಲ್ ರೇವಣ್ಣ  ಪೆನ್ ಡ್ರೈವ್ ಕೇಸ್:  ಚಾಲಕನಿಂದ  ಬಹಿರಂಗ!?

On: April 30, 2024 12:57 PM
Follow Us:
---Advertisement---

ಹಾಸನ : ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಪೆನ್‌ ಡ್ರೈವ್‌ನಿಂದ ಲೀಕ್‌ ಆದ ವಿಡಿಯೋಗಳ ಮೂಲ ಎನ್ನಲಾದ ಡ್ರೈವರ್‌ ಕಾರ್ತಿಕ್‌ ವಿಡಿಯೋ ಹೊರಬಿದ್ದಿದೆ. ರೆಕಾರ್ಡ್‌ ಮಾಡಲಾದ ವಿಡಿಯೋ ಹೇಳಿಕೆಯಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇಡೀ ಪ್ರಕರಣದಲ್ಲಿ ವಿಡಿಯೋ ಲೀಕ್‌ ಹೇಗಾಯ್ತು ಎಂಬ ವಿಚಾರಕ್ಕೆ ಸಂಬಂಧಿಸದಿಂತೆ ಕಾರ್ತಿಕ್‌ ಮಾತನಾಡಿದ್ದಾರೆ. ಯಾವುದೋ ಅಜ್ಞಾತ ಸ್ಥಳದಲ್ಲಿ ಸೆರೆ ಹಿಡಿಯಲಾದಂತಿರುವ ವಿಡಿಯೋದಲ್ಲಿ ಕಾರ್ತಿಕ್‌, ತಮಗೆ ನ್ಯಾಯ ಸಿಗುವ ಕಾರಣಕ್ಕೆ ಪೆನ್‌ ಡ್ರೈವ್‌ ವಿಡಿಯೋ ,ಫೋಟೋಗಳ ಕಾಪಿಯೊಂದನ್ನ ದೇವರಾಜ ಗೌಡರರಿಗೆ ನೀಡಿದ್ದೇನೆ. ಅವರು ವಕಾಲತ್ತು ವಹಿಸಿಕೊಂಡ ಕಾರಣಕ್ಕೆ ಅವರಿಗೆ ಕೊಟ್ಟಿದ್ದೆ ಹೊರತು ಮತ್ಯಾರಿಗೂ ಕೊಟ್ಟಿಲ್ಲ ಎಂದಿದ್ದಾರೆ. 

ತಾವು ಕೊಟ್ಟ ವಿಡಿಯೋಗಳನ್ನು ಅವರು ಹೇಗೆ ಬಳಸಿಕೊಂಡರು? ಅಥವಾ ಅದನ್ಯಾರಿಗಾದರೂ ಹಂಚಿದರೇ ಎಂಬ ವಿಚಾರಗಳು ತಮಗೆ ಗೊತ್ತಿಲ್ಲ. ಇದರಲ್ಲಿ ಕಾಂಗ್ರೆಸ್‌ ನಾಯಕರ ಪಾತ್ರಗಳಿಲ್ಲ. ಕಾಂಗ್ರೆಸ್‌ನವರು ನನಗೆ ಅನ್ಯಾಯವಾದಾಗಲೂ ನನ್ನ ನೆರವಿಗೆ ಬಂದಿಲ್ಲ. ಅವರಿಗೆ ನಾನ್ಯಾಕೆ ವಿಡಿಯೋ ಕಾಪಿ ಕೊಡಲಿ ಎಂದು ಪ್ರಶ್ನಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಎಸ್‌ಐಟಿ ಮುಂದೆ ಹಾಜರಾಗಿ ವಿವರ ನೀಡುವುದಾಗಿ ಕಾರ್ತಿಕ್‌ ತಿಳಿಸಿದ್ದು, ಆನಂತರ ಮಾಧ್ಯಮಗಳ ಎದುರು ಬಂದು ಮಾತನಾಡುತ್ತೇನೆ ಎಂದಿದ್ದಾರೆ. 

ಯಾರು ಈ ಕಾರ್ತಿಕ್?‌ 

ಸದ್ಯ ಹೊರಬಿದ್ದಿರುವ ಹಾಸನ ಪೆನ್‌ ಡ್ರೈವ್‌ ವಿಡಿಯೋ ಲಿಂಕ್‌ ಕೇಸ್‌ನಲ್ಲಿ  ಕಾರ್ತಿಕ್‌ ರಿಂದ ಎಲ್ಲಾ ದೃಶ್ಯಗಳು ಹೊರಬಿದ್ದಿರುವ ಬಗ್ಗೆ ಮಾಹಿತಿ ಹೊರಬಂದಿತ್ತು. ಪ್ರಜ್ವಲ್‌ ರೇವಣ್ಣರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌ ಕಳೆದ ವರ್ಷ ರೇವಣ್ಣರ ಕುಟುಂಬದ ಜೊತೆಗೆ ವೈಮನಸ್ಯ ಹೊಂದಿದ್ದರು. ರೇವಣ್ಣರ ಕುಟುಂಬ ತಮ್ಮ ಭೂಮಿಯನ್ನು ಕಿತ್ತುಕೊಂಡು ಟಾರ್ಚರ್‌ ಕೊಟ್ಟಿದೆ ಅಂತಾ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದ್ದರು. ಆನಂತರ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಮೆಟ್ಟಿಲೇರಲು ಮುಂದಾಗಿದ್ದರು. ಇದೇ ಹೊತ್ತಿನಲ್ಲಿ ರೇವಣ್ಣರ ಕುಟುಂಬ ಕೋರ್ಟ್‌ನಿಂದ ವಿಡಿಯೋ ಹರಿದಾಡದಂತೆ ಸ್ಟೇ ತಂದಿತ್ತು. ಈ ಎಲ್ಲಾ ವಿಚಾರ ಹಂಚಿಕೊಂಡಿರುವ ಕಾರ್ತಿಕ್‌ ಇದೀಗ ಎಸ್‌ಐಟಿ ಮುಂದೆ ಹೋಗಲು ನಿರ್ಧರಿಸಿದ್ದಾರೆ.

 

Sathish munchemane

Join WhatsApp

Join Now

 

Read More