ಹೊಳೆಹೊನ್ನೂರು ಸಮೀಪದ ಹೊಳಲೂರಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಇಂದು ಕರಡಿ ಸೆರೆಯಾಗಿದೆ. ಕೆಲವು ದಿನಗಳ ಹಿಂದೆ ಹೊಳಲೂರು ಸುತ್ತಮುತ್ತ ಕರಡಿಗಳ ಗುಂಪು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹೊಳಲೂರಿನ ಮಾಬುಲೇಶ ಎಂಬುವರ ತೋಟದಲ್ಲಿ ಎರಡು ದಿನಗಳ ಹಿಂದೆ ಬೋನು ಇಡಲಾಗಿತ್ತು. ಈ ಮೂಲಕ 15 ದಿನಗಳ ಅವಧಿಯಲ್ಲಿ ಎರಡು ಕರಡಿಗಳು ಸೆರೆಯಾಗಿವೆ. ಹೊಸಕೆರೆ ಸಮೀಪ ಸೇರಿ ಹೊಟ್ಟೆಗುಡ್ಡ, ಶಿವಮೊಗ್ಗ-ಹರಿಹರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕರಡಿಗಳು ಸಂಚರಿಸುತ್ತಿವೆ.