ಸದಾ ಸುದ್ದಿಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ .!?

0
158

ಪಂಚಾಯಿತಿ ಕಚೇರಿ ಶುರುವಾದಗಲಿಂದಲು ಶುರುವಾದಗಲಿಂದ ಒಂದಲ್ಲ ಒಂದು ವಿವಾದ ಇಲ್ಲದ  ದಿನವಿಲ್ಲ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಇ ಪಂಚಾಯತಿ ಅಲ್ಲಿಯೇ ವಿಷ ಸೇವಿಸಿದ್ದ ಪಂಚಾಯತಿ ಅಧ್ಯಕ್ಷ ಪ್ರಕರಣ ಕುಂಸಿ ಠಾಣೆ ಮೆಟ್ಟಲಿ ಎರಿ ಸುದ್ದಿ ಮಾಸುವ ಮುನ್ನವೇ

ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ  ಬಿದ್ದಿದ್ದಾರೆ. ಕಾರ್ಯದರ್ಶಿ ಕುಮಾರನಾಯ್ಕನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಮಧ್ಯಾಹ್ನ ಗ್ರಾಮ ಪಂಚಾಯಿತಿ ಕಚೇರಿಯ ಕಾರ್ಯದರ್ಶಿಯ ಕೊಠಡಿಯಲ್ಲಿ ಕುಮಾರನಾಯ್ಕ ₹3000 ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಲೋಕಾಯುಕ್ತ ದಾಳಿಯಾಗಿದೆ.

ಮುದ್ದಿನಕೊಪ್ಪ ಗ್ರಾಮ ಪಂಚಾಯತಿಯ ಶ್ರೀರಾಂಪುರ ಗ್ರಾಮದಲ್ಲಿ ವಿನೋದ ಎಂಬುವರು ತಮ್ಮ ತಾಯಿ ಹೆಸರಿನಲ್ಲಿರುವ 30×50 ಅಳತೆಯ ಸೈಟಿನಲ್ಲಿ ಮನೆ ಕಟ್ಟಲು ತೀರ್ಮಾನಿಸಿದ್ದು ಆರ್‌ಸಿಸಿ ಮನೆಗಾಗಿ ಇ-ಸ್ವತ್ತು ಮಾಡಿಸಲು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಇದರ ಈ ಸ್ವತ್ತು ಮಾಡಿಕೊಡಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರನಾಯ್ಕ ₹3000ಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ವಿನೋದ್‌ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು ಹಣ ಕೇಳಿದ್ದರ ಆಡಿಯೋವನ್ನು ಒದಗಿಸಿದ್ದರು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೊಕಾಯುಕ್ತ ಅಧೀಕ್ಷಕ ಮಂಜುನಾಥ ಚೌದರಿ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್‌, ಇನ್ಸ್‌ಪೆಕ್ಟರ್‌ಗಳಾದ ಗುರುರಾಜ್‌ ಎನ್.ಮೈಲಾರ್‌, ಕೆ.ಪಿ.ರುದ್ರೇಶ್‌, ಸಿಬ್ಬಂದಿ ಯೋಗೇಶ್‌, ಟೀಕಪ್ಪ, ಸುರೇಂದ್ರ, ಮಂಜುನಾಥ್‌, ಬಿ.ಟಿ.ಚನ್ನೇಶ್‌, ದೇವರಾಜ್‌, ಪ್ರಕಾಶ್‌ ಬಾರಿದಮರ, ಅರುಣ್‌ ಕುಮಾರ್‌, ಅಂಜಲಿ, ಚಂದ್ರಿಬಾಯಿ, ಗೋಪಿ, ಪ್ರದೀಪ್‌, ಜಯಂತ್‌ ಭಾಗವಹಿಸಿದ್ದರು.