ಕುಂಸಿ ಠಾಣೆ ವ್ಯಾಪ್ತಿ ಆಡಗಡಿಯಲ್ಲಿ ಮಳೆಯ ಕಾರಣದಿಂದ ಮನೆ ಗೋಡೆ ಕುಸಿತ – ವೃದ್ಧೆಯ ಮರಣ.!

0
96

ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಡಗಡಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ.

ಗ್ರಾಮದ ಶ್ರೀಮತಿ ಹೇಮಾವತಿ ಕೋಂ ನಾಗರಾಜ್ (ವಯಸ್ಸು 45), ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಿರುವವರ ವಾಸದ ಮನೆಯ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದೆ.

ಈ ದುರ್ಘಟನೆಯಲ್ಲಿ ಹೇಮಾವತಿಯ ಸಂಬಂಧಿಯಾದ ಶತಾಯುಷಿ ಸಿದ್ದಮ್ಮ (ವಯಸ್ಸು 100), ಕುಂಕೋವ ಗ್ರಾಮ, ಹೊನ್ನಾಳಿ ತಾಲೂಕು ಮೂಲದವರು ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಅವರ ಜೊತೆಯಲ್ಲಿ  ಮಗಳು ಪಲ್ಲವಿ, ಅಳಿಯ ಪರಶುರಾಮ್ ಹಾಗೂ ಮೊಮ್ಮಗ ಚೇತನ್ (ವಯಸ್ಸು 2 ವರ್ಷ) ಇವರುಗಳಿಗೂ ಸಣ್ಣಪುಟ್ಟ ಗಾಯಗಳು ಸಂಭವಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು   ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೆಕಿದೆ.