ಗಾಜನೂರಿನ ಹೊಸಹಳ್ಳಿ ಗ್ರಾಮ ಪಂಚಾಯತ್ ವೀರಾಪುರ ಕೆರೆಯ ಒಡಲಿಗೆ ಕನ್ನ ಹಾಕಿದ ಕಳ್ಳರು, ಸರ್ಕಾರದ ಇಲಾಖೆಯ ಮಾನದಂಡ ಪ್ರಕಾರ ಅನುಮತಿ ಇಲ್ಲದೆ ಅಕ್ರಮವಾಗಿ ಮಣ್ಣು ಸಾಗಣೆ, ಹೂಳು ತೆಗೆಯುವ ನೆಪದಲ್ಲಿ ಖಾಸಗಿ ಸಂಸ್ಥೆಗೆ ಮಾರಾಟ
ಕೆರೆಗಳಲ್ಲಿ ಮಣ್ಣು ತೆಗೆಯಲು ಇರುವ ನಿಯಮಗಳು: ಕಂದಾಯ ಇಲಾಖೆ ನಿಯಮಗಳ ಪ್ರಕಾರ, ಕೆರೆಗಳಲ್ಲಿ 4 ಅಡಿಗಿಂತಲೂ ಹೆಚ್ಚು ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ. ಸರ್ಕಾರದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಎನೋತೆಗೆದು ಕೋಂಡಿರುವುದು ನೇಪಮಾತ್ರಕ್ಕೆ ಎಂಬುವಂತಗಿದೆ ಜೆಸಿಬಿಯಂತಹ ಭಾರಿ ಯಂತ್ರಗಳನ್ನು ಕೆರೆಗಳಿಗೆ ಇಳಿಸಿ ಮಣ್ಣು ತೆಗೆಯುವಂತಿಲ್ಲ. ಇಷ್ಟೆಲ್ಲಾ ನಿಯಮಗಳಿದ್ದರೂ
ಗ್ರಾಮ ಪಂಚಾಯತಿ ಪಿ.ಡಿ.ಓ ಮತ್ತು ಕೆಲ ಗ್ರಾಮ ಪಂಚಾಯತಿ ಸದಸ್ಯರ 4 ಲಕ್ಷದ ಕಮುಟು ವಾಸನೆ ಇ ಎಲ್ಲಾರ ಬಾಯಿ ಮುಚ್ಚಿಸಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ
ತಮ್ಮ ಉರಿನ ಕೆರೆ ಸಂರಕ್ಷಣೆ ಮಾಡಲು ಗ್ರಾಮಸ್ಥರು ಕೆರೆ ಒಡಲನ್ನು ಬಗೆಯುತ್ತಿರುವರನ್ನು ಪ್ರಶ್ನಿಸಿದಾಗ ಜಿಲ್ಲಾಧಿಕಾರಿಯೇ ಅನುಮತಿ ನೀಡಿದ್ದಾರೆ ಎನ್ನುತ್ತಾರಂತ್ತೆ, ಪಂಚಾಯತಿ ಪಿ.ಡಿ.ಓ. ಅವರಿಗೆ ಮಾನದಂಡ ಉಲ್ಲಂಘನೆ ಬಗ್ಗೆ ಮಾಹಿತಿ ನೀಡಿದರೆ ಕ್ಯಾರೆ ಎನ್ನುತಿಲ್ಲವಂತೆ ಬೆಸತ್ತು ಪತ್ರಿಕೆಗೆ ಸಾಕ್ಷಿ ಸಮೇತ ಮಾಹಿತಿ ಒದಗಿಸಿದ್ದಾರೆ.
ಅಮಾಯಕರ ಪ್ರಾಣಕ್ಕೆ ಬೆಲೆಯಿಲ್ಲವೇ:
ಜಿಲ್ಲೆಯ ಹಲವು ಕೆರೆಗಳಲ್ಲಿ ಎತ್ತು ಮತ್ತು ಹಸುಗಳ ಮೈ ತೊಳೆಯಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರಮುಖ ಕಾರಣ, ಅಕ್ರಮವಾಗಿ ಮಣ್ಣು ತೆಗೆಯುವಾಗ ನಿರ್ಮಾಣವಾಗುವ ಗುಂಡಿಗಳು. ಕೆರೆಯಲ್ಲಿ ಗುಂಡಿಗಳಿರುವುದು ತಿಳಿಯದೆ ಅಮಾಯಕರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಘಟನೆಯ ನಂತರವೂ ತಾಲ್ಲೂಕು ಆಡಳಿತ ಎಚ್ಚೆತ್ತಿಲ್ಲದಿರುವುದು ಬೇಸರದ ಸಂಗತಿ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾನದಂಡ ಪ್ರಕಾರ ಮೂರು ಅಡಿ ಅಳದಷ್ಟು ಮಾತ್ರ ಮಣ್ಣು ತೆಗೆಯ ಬೇಕು, ಕೆರೆ ಕೋಡಿಯಿಂದ 14,15, ಮಿಟರ್ ನಂತರ ಸ್ಲೋಪ್ ನೀಡಿ ಮಣ್ಣು ತೇಗೆಯ ಬೇಕು ಎಂಬ ನಿಯಮವಿದ್ದುರು ಇದನ್ನು ಗಾಳಿಗೆ ತೂರಿ ಮಣ್ಣಿನ ಕಳ್ಳರು 10 ಆಡಿಗಳ ಅಳವಾದ ಗುಂಡಿಗಳನ್ನ ತೋಡಿ ಮಣ್ಣು ತೆಗೆಯುತ್ತಿದ್ದಾರೆ, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ಗುಂಡಿಗಳು ಈಜಲು ಬರುವ ಯುವಕರ ಬಲಿ ತೆಗೆದು ಕೊಳ್ಳುತ್ತಿದೆ, ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.