ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತ್ವರಿತ ಸ್ಪಂದನೆ ಅಗತ್ಯ
ಮುದ್ದಿನಕೊಪ್ಪ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಹಲವು ದಿನದಿಂದ ನೀರು ಸರಬರಾಜು ಮಾಡಿದ್ದ ಮಾಲೀಕನಿಗೆ ಬಿಲ್ ಪಾಸ್ ಮಾಡದೆ ಗ್ರಾಮ ಪಂಚಾಯಿತಿಯಿಂದ ಕಾಲ್ಕಿತ್ತ ಪಂಚಾಯತಿ ಅಧ್ಯಕ್ಷ.
Oplus_131072
ಬರದ ಬವಣೆಯಿಂದ ತತ್ತರಿಸಿರುವ ರಾಜ್ಯವನ್ನು ಕುಡಿಯುವ ನೀರಿನ ಸಮಸ್ಯೆ ಬಾಧಿಸತೊಡಗಿದೆ. ಬೇಸಿಗೆಯ ಧಗೆಯಿಂದಾಗಿ ತಾಪಮಾನದಲ್ಲಿ ಭಾರಿ ಏರಿಕೆಯಾಗಿದೆ. ಕರಾವಳಿ, ಮಲೆನಾಡು, ಬಯಲುಸೀಮೆ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ಬಿಸಿಲಿನ ಝಳಕ್ಕೆ ನಾಗರಿಕರು ತತ್ತರಿಸಿ
ಹೋಗಿದ್ದಾರೆ. ಹಗಲಿನ ಬಹುತೇಕ ಅವಧಿಯಲ್ಲಿ ಜನ ಮನೆಗಳಿಂದ ಹೊರ ಬರಲಾಗದಂತಹ ಸ್ಥಿತಿ ಇದೆ. ಮುದ್ದಿನಕೊಪ್ಪದ ಬಹುತೇಕ ಬೋರ್ವೆಲ್ ಗಳು ಬತ್ತಿಹೋಗಿವೆ.
ಹಿಗಿರುವಾಗ ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಹಲವು ದಿನದಿಂದ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತಿಯ ಅಧ್ಯಕ್ಷರು ಸದಸ್ಯರುಗಳು ಸಮಸ್ಯೆಯ ಬಗ್ಗೆ ಚರ್ಚಿಸಿ ಟ್ಯಾಂಕರ್ ಮೂಲಕ ಗ್ರಾಮಸ್ಥರಿಗೆ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು,
ಕೆಲವು ದಿನದಿಂದ ಹೇಗೋ ಗ್ರಾಮದ ನೀರಿನ ಬವಣೆ ಸದ್ಯದ ಮಟ್ಟಿಗೆ ಸರಿ ಹೋಗಿತ್ತು ಆದರೆ ಇಂದಿನ ಮೀಟಿಂಗ್ನಲ್ಲಿ ಗ್ರಾಮಕ್ಕೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದ ಟ್ಯಾಂಕರ್ ಮಾಲೀಕರಿಗೆ ಬಿಲ್ ಪಾಸ್ ಮಾಡಲು ಅಧ್ಯಕ್ಷರು ಒಪ್ಪದೇ ಗ್ರಾಮ ಪಂಚಾಯಿತಿಯಿಂದ ಕಾಲ್ಕಿತ್ತಿದ್ದಾರೆ ಸ್ಥಳದಲ್ಲೇ ಇದ್ದ ಸದಸ್ಯರು ಹಾಗೂ ಗ್ರಾಮಸ್ಥರು ಪಂಚಾಯಿತಿಗೆ ಬೀಗ ಜಡೆದು ಪ್ರತಿಭಟಿಸುತ್ತಿದ್ದಾರೆ ಸ್ಥಳಕ್ಕೆ ತಾಲೂಕು ಪಂಚಾಯಿತಿಯ ಇಓ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ತನಕ ಪಂಚಾಯಿತಿಯ ಬೀಗ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದು ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡುತ್ತಾರಾ ಅಥವಾ ಏನು ಎಂದು ಇನ್ನಷ್ಟೇ ಮಾಹಿತಿ ಬರಬೇಕಾಗಿದೆ.
ಶಿವಮೊಗ್ಗ ತಾಲೂಕು ಪಂಚಾಯಿತಿ EO ಅವಿನಾಶ್ ಅವರಿಗೆ ಪತ್ರಿಕೆ ಫೋನ್ ಮೂಲಕ ವಿಚಾರಿಸಿದಾಗ ಪಂಚಾಯಿತಿಯಲ್ಲಿ ನೀರು ಸರಬರಾಜು ಮಾಡಿದ ಟ್ಯಾಂಕರ್ ಮಾಲೀಕರಿಗೆ ಬಿಲ್ ಪಾಸ್ ಮಾಡಲು ಪಂಚಾಯತಿಯಲ್ಲಿ ಹಣದ ಕೊರತೆ ಇಲ್ಲ ಆದರೆ ಅಧ್ಯಕ್ಷರು ಮತ್ತು ಸದಸ್ಯರ ಗೊಂದಲದಿಂದ ಹೀಗಾಗಿದೆ ಹಾಗೂ ಅಧ್ಯಕ್ಷರೇ ನಮ್ಮ ಕಚೇರಿಗೆ ಈಗ ಬರುತ್ತಿದ್ದಾರೆ ವಿಷಯದ ಬಗ್ಗೆ ಚರ್ಚಿಸುತ್ತಾರೆ ಈಗಲೇ ಬಿಲ್ ನಿರ್ವಹಣೆ ನಿರ್ಣಯ ಕೈಗೊಂಡು ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಇಓ ಅವಿನಾಶ್ ಅವರು ಪತ್ರಿಕೆಗೆ ತಿಳಿಸಿರುತ್ತಾರೆ.