ಬೆಂಗಳೂರಲ್ಲಿ ನೀರು ಪೋಲು ಮಾಡಿದವರಿಗೆ ದಂಡ ವಿಧಿಸಿದ ಜಲಮಂಡಳಿ: 1 ಲಕ್ಷಕ್ಕೂ ಹೆಚ್ಚು ವಸೂಲಿ

0
27

 

 

 

 

ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹಿನ್ನೆಲೆ ಕುಡಿಯುವ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿದವರಿಗೆ ಮತ್ತು ಪೋಲು ಮಾಡಿದವರಿಗೆ ದಂಡ ವಿಧಿಸುವುದಾಗಿ ಜಲಮಂಡಳಿ ಈಗಾಗಲೇ ಎಚ್ಚರಿಕೆ ನೀಡಲಾಗಿತ್ತು. ಅದೇ ರೀತಿಯಾಗಿ ನೀರು ವ್ಯರ್ಥ ಮಾಡಿದ್ರೆ 5 ಸಾವಿರ ರೂ. ದಂಡ ನಿಗದಿ ಮಾಡಲಾಗಿತ್ತು. ಇದೀಗ ನಗರದಲ್ಲಿ ಈವರೆಗೆ ಬರೋಬ್ಬರಿ 1 ಲಕ್ಷದ 10 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.

 

 

 

ಬೆಂಗಳೂರು, ಮಾರ್ಚ್​ 24: ನಗರದಲ್ಲಿ ಕುಡಿಯುವ ನೀರಿಗಾಗಿ (water) ಹಾಹಾಕಾರ ಹಿನ್ನೆಲೆ ಕುಡಿಯುವ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿದವರಿಗೆ ಮತ್ತು ಪೋಲು ಮಾಡಿದವರಿಗೆ ದಂಡ ವಿಧಿಸುವುದಾಗಿ ಜಲಮಂಡಳಿ ಈಗಾಗಲೇ ಎಚ್ಚರಿಕೆ ನೀಡಲಾಗಿತ್ತು. ಅದೇ ರೀತಿಯಾಗಿ ನೀರು ವ್ಯರ್ಥ ಮಾಡಿದ್ರೆ 5 ಸಾವಿರ ರೂ. ದಂಡ ನಿಗದಿ ಮಾಡಲಾಗಿತ್ತು. ಇದೀಗ ನಗರದಲ್ಲಿ ಈವರೆಗೆ ಬರೋಬ್ಬರಿ 1 ಲಕ್ಷದ 10 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಬೋರ್​ವೆಲ್, ನಲ್ಲಿ ನೀರು ವಾಹನ ತೊಳೆಯಲು, ರಸ್ತೆಗೆ ಸುರಿದವರು, ಗಿಡಗಳಿಗೆ ಕುಡಿಯುವ ನೀರು ಬಳಸಿದವರಿಗೂ ದಂಡ ವಿಧಿಸಲಾಗಿದೆ. ಜಲಮಂಡಳಿ ಅಧಿಕಾರಿಗಳಿಂದ ವಿವಿಧ ವಲಯಗಳಲ್ಲಿ ದಂಡ ಸಂಗ್ರಹ ಮಾಡಲಾಗಿದೆ. ದಂಡ ಪ್ರಯೋಗದ ಮೂಲಕ ಜಲಮಂಡಳಿಯಿಂದ ನೀರಿನ ಮಿತಬಳಕೆ ಪಾಠ ಮಾಡಲಾಗಿದೆ.