ಅನೈತಿಕ ಸಂಬಂಧಕ್ಕೆ ಅಡ್ಡಿ; ಗಂಡನಿಗೆ ಮದ್ಯಪಾನ ಮಾಡಿಸಿ ಉಸಿರು ಗಟ್ಟಿಸಿ ಕೊಂದ ಪತ್ನಿ!

0
23

ರಾಯಚೂರು ತಾಲ್ಲೂಕಿನ ಸಿಂಗನೋಡಿ ತಾಂಡಾ ನಿವಾಸಿ, ಸಮಾಜ ಸೇವೆ ಮಾಡುತ್ತಾ ತಾಲ್ಲೂಕು ಪಂಚಾಯಿತಿ ಸದಸ್ಯನಾಗಿದ್ದ. ಬಡ ಬಗ್ಗರಿಗೆ ಹೆಗಲು ಕೊಟ್ಟು ನಿಲ್ಲುತ್ತಿದ್ದ ಆತ, ರಾತ್ರೋ ರಾತ್ರಿ ಹೆಣವಾಗಿ ಹೋಗಿದ್ದ. ಅಷ್ಟಕ್ಕೂ ಆತನ ಉಸಿರು ನಿಲ್ಲಿಸಿದ್ದು ಬೇರೆ ಯಾರೂ ಅಲ್ಲ, ಆತನ ಜೊತೆ ಸಪ್ತಪದಿ ತುಳಿದು ಸಂಸಾರ ನಡೆಸುತ್ತಿದ್ದ ಮುದ್ದಿನ ಮಡದಿ.

ಗಂಡನಿಗೆ ಮದ್ಯಪಾನ ಮಾಡಿಸಿ ಉಸಿರು ಗಟ್ಟಿಸಿ ಕೊಂದ  ಪತ್ನಿ

ರಾಯಚೂರು, ಮಾ.21: ತಾಲ್ಲೂಕಿನ ಸಿಂಗನೋಡಿ ತಾಂಡಾದಲ್ಲಿ ಜನಸೇವೆ ಮಾಡಿಕೊಂಡಿದ್ದ ಟಿ.ಎ.ರಾಜು ನಾಯ್ಕ್​​ ಎನ್ನುವ ವ್ಯಕ್ತಿ ಮಾರ್ಚ್​ 19 ರಂದು ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿದ್ದ. ನಿನ್ನೆ(ಮಾ.20) ಬೆಳಿಗ್ಗೆ ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ರಾಯಚೂರು(Raichur) ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸಿಂಗನೋಡಿ ಪಂಚಾಯಿತಿ ಹಾಲಿ ಸದಸ್ಯನಾಗಿದ್ದ ಟಿ.ಎ ರಾಜು ನಾಯ್ಕ್​​​ ಒಳ್ಳೆಯ ವ್ಯಕ್ತಿ. ಕಷ್ಟ ಅಂದರೆ ಕರಗಿ ಹೋಗುತ್ತಿದ್ದವ ರಾತ್ರೋ ರಾತ್ರಿ ಹೆಣವಾಗಿದ್ದಾನೆ ಎಂಬ ವಿಷಯ ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ಈ ಹಿನ್ನಲೆ ನಿನ್ನೆ ಬೆಳಿಗ್ಗೆ ಆತನ ಪತ್ನಿ ಸ್ನೇಹಾರನ್ನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರಶ್ನಿಸಿದ್ದರು. ಆದ್ರೆ, ಆಕೆ ಏನನ್ನು ಬಾಯಿ ಬಿಟ್ಟಿರಲಿಲ್ಲ. ನಂತರ ಮೃತನ ಕುಟುಂಬಸ್ಥರು ನೀಡಿದ ದೂರಿನ ಮೆರೆಗೆ ಯಾಪಲದಿನ್ನಿ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿತ್ತು.