0
4

ಸಾಂದರ್ಭಿಕ ಚಿತ್ರ

ಗುಬ್ಬಿ ( ತುಮಕೂರು ):

ತಾಲೂಕಿನ ಬಿಲೆಕಲ್ಲುಪಾಳ್ಯ ಗ್ರಾಮದ ರೇಣುಕಾ  (34) ಎಂಬ ಮಹಿಳೆ ಸಾರ್ವಜನಿಕ ಆಸ್ಪತ್ರೆಯಲ್ಲಿ  ಮಂಗಳವಾರ ನಡೆಸುತಿದ್ದ ಸಂತಾನ ಹರಣ  ಶಸ್ತ್ರಚಿಕಿತ್ಸೆಯನ್ನ ವೈದ್ಯರು ಅರ್ಧದಲ್ಲಿ ನಿಲ್ಲಿಸಿ. ಹೋಲಿಗೆ ಹಾಕಿದ್ದಾರೆ ಇದರಿಂದ ತೊಂದರೆಗೀಡದ ಮಹಿಳೆ ಪ್ರಾಣಪಯದಿಂದ ಪಾರಾಗಿದ್ದಾರೆ.

ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ  ಕೊಠಡಿಯಿಂದ ನೋವಿನಿಂದ ಕಿರುಚಡುವ ಶಬ್ದ ಕೇಳಿ ಬಂತು. ಕೊಠಡಿ ಹೊರಗೆ ನಿಂತಿದ್ದ ನಾವು ಒಳಗಡೆ  ಹೋಗಿ ನೋಡಿದಾಗ ರೇಣುಕಾಳ ಕೈ. ಕಾಲು. ಗಟ್ಟಿಯಾಗಿ ಹಿಡಿದುಕೊಂಡು ಶಸ್ತ್ರ ಚಿಕಿತ್ಸೆ ಮಾಡುತಿದ್ದರು ಎಂದು ಮಹಿಳೆಯ ಗಂಡ  ತಿಮ್ಮರಾಜು ಆರೋಪಿಸಿದ್ದಾರೆ

ಅರವಳಿಕೆ ಮದ್ದುನೀಡದೆ  ಶಸ್ತ್ರ ಚಿಕಿತ್ಸೆ ಮಾಡಿದ ಕಾರಣ ನೋವು ತಡೆದುಕೊಳ್ಳಲಾಗದೆ ನನ್ನ ಹೆಂಡತಿ ಕಿರುಚದಿದ್ದರೆ ನಾವು ಒಳಗೆ ಹೋಗಿ ಗಲಾಟೆ ಮಾಡಿದ ನಂತರ ಶಸ್ತ್ರ ಚಿಕಿತ್ಸೆ ನಿಲ್ಲಿಸಿ ನೋವನ್ನು ತಡೆದು ಕೊಳ್ಳಲು ಆಗುವುದಿಲ್ಲ ಎಂದು ಮೊದಲೇ ಹೇಳಬೇಕಲ್ಲವೇ ಎಂದು ನಮ್ಮ ಮೇಲೇಯೇ ವೈದ್ಯರು ಕೂಗಡಿದರು ಎಂದು ತಿಮ್ಮರಾಜು ತಿಳಿಸಿದರು.

ಮುಂಜಾಗ್ರತ  ಕ್ರಮ ಕೈಗೊಳ್ಳದೆ ವೈದ್ಯರು ನಿರ್ಲಕ್ಷ್ಯದಿಂದ  ಶಸ್ತ್ರ ಚಿಕಿತ್ಸೆ ಮಾಡಲು ಹೊರಟಿದ್ದಾರೆ. ಬೆಳಗ್ಗೆ ಚಿಕಿತ್ಸೆಗೂ ಮುನ್ನ ವೈದ್ಯ 5000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಕೊಡಲು ಆಗುವುದಿಲ್ಲ ಎಂದು ಹೇಳಿದ್ದೆ  ಇದರಿಂದ ಕೋಪಗೊಂಡು ಈ ರೀತಿ ಮಾಡಿದ್ದಾರೆ ಎಂದು ರೇಣುಕಾಳ ಪತಿ ಆರೋಪಿಸಿದ್ದಾರೆ.

‘ಅರವಳಿಕೆ ಮದ್ದು ಕೊಟ್ಟ ನಂತರವೇ ಶಸ್ತ್ರ ಚಿಕಿತ್ಸೆ ಮಾಡುತಿದ್ದೆವು. ಆದರೆ ಅರವಳಿಕೆ ಮದ್ದು ಸರಿಯಾಗಿ ಕೆಲಸ ಮಾಡಿಲ್ಲವೆಂದು ‘ಆಸ್ಪತ್ರೆಯ ವೈದ್ಯಧಿಕಾರಿ ಡಾ. ದಿವಾಕರ ಬೇಜವಾಬ್ಧಾರಿ ತನದ ಸ್ಪಷ್ಟನೆ ನೀಡಿದ್ದಾರೆ ಎಂದು ರೇಣುಕರ ಪತಿಯು  ಸಂಬಂಧಪಟ್ಟ ವೈದ್ಯರ ಬಗ್ಗೆ  ಆರೋಪಿಸಿದ್ದಾರೆ.