ವೀರಶೈವ ಲಿಂಗಾಯತರಿಗೆ ವೀರಶೈವ ಲಿಂಗಾಯತರೇ ಶತ್ರುಗಳು!?

0
133

 

ವೀರಶೈವ ಲಿಂಗಾಯತ ಮಹಾ ಅಧಿವೇಶನ‌ ದಾವಣಗೆರೆ

ವೀರಶೈವ ಲಿಂಗಾಯತರಿಗೆ ವೀರಶೈವ ಲಿಂಗಾಯತರೇ ಶತ್ರುಗಳು, ಸ್ವಾರ್ಥ ಬದಿಗೊತ್ತಿ ಎಲ್ಲರೂ ಒಂದಾಗಬೇಕು : 
ಶ್ರೀ ತರಳಬಾಳು ಜಗದ್ಗುರುಗಳವರು
ಜಾತಿನಿಂದನೆಗೆ ಅಟ್ರಾಸಿಟಿ ಕೇಸ್ ದಾಖಲಿಸುವಂತೆ ವ್ಯಕ್ತಿನಿಂದನೆ ನಿಗ್ರಹಕ್ಕೆ ಕಠಿಣ ಕಾನೂನು ಜಾರಿಯಾಗಬೇಕು:
ಶ್ರೀ ತರಳಬಾಳು ಜಗದ್ಗುರುಗಳವರ  ಅಭಿಮತ

ವೀರಶೈವ ಲಿಂಗಾಯತರಿಗೆ ಶತ್ರುಗಳು ಯಾರು ಎಂದರೆ ವೀರಶೈವ ಲಿಂಗಾಯತರೇ ಎಂದು ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ವೀರಶೈವ ಲಿಂಗಾಯತ ಮಹಾಸಭಾ ಅಧೀವೇಶನದಲ್ಲಿ  ಬೇಸರ ವ್ಯಕ್ತಪಡಿಸಿದರು.

 

ದಾವಣಗೆರೆ ನಗರದ ಎಂಬಿಎಂ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಮಹಾ ಅಧಿವೇಶನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವೀರಶೈವ ಸಮಾಜಕ್ಕೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು. ವೀರಶೈವ ಸಮಾಜವು ಇಂದು ಅಧಃಪತನದತ್ತ ಸಾಗಲು ವೀರಶೈವರೇ ಕಾರಣ ಎಂದು ನೋವು  ಹಂಚಿಕೊಂಡರು. ಕಳೆದ ಹತ್ತಾರು ವರ್ಷಗಳಿಂದ ಜಾತಿ ನಿಂದನೆ ಪ್ರಕರಣಗಳು ವೀರಶೈವ ಲಿಂಗಾಯತರ ಮೇಲೆ ಹೆಚ್ಚುತ್ತಿರುವ ಹಿನ್ನೆಲೆ ಗಮನಿಸಿದರೆ ವೀರಶೈವ ಲಿಂಗಾಯತರೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರ ಹಿಂದೆ ನಿಂತು ಕುಮ್ಮಕ್ಕು ನೀಡಿ ವೀರಶೈವ ಲಿಂಗಾಯತರ ಮೇಲೆ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುವಂತಹ ಅಸಹ್ಯಕರ ವರ್ತನೆಗಳು ನಡೆಯುತ್ತಿರುವುದು ವೀರಶೈವರ ದುರಂತವಾಗಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

 

ವೀರಶೈವ ಲಿಂಗಾಯತ ಸಮುದಾಯದ ಉಪಪಂಗಡಗಳಾಗಿ ಹೋದರೆ ಯಾವ ಸೌಲಭ್ಯವೂ ಸಿಗುವುದಿಲ್ಲ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಗದು. ವೀರಶೈವ ಲಿಂಗಾಯತ ಸಮುದಾಯದವರಲ್ಲಿ ಸ್ವಾರ್ಥ ಕಡಿಮೆಯಾಗಬೇಕು. ಸಮಾಜದ ಸಂಘಟನೆಗಾಗಿ ಒಂದಾಗಬೇಕು ಎಂದು ಶ್ರೀಜಗದ್ಗುರುಗಳು ಕರೆ ನೀಡಿದರು.

ಯಾವುದೇ ಒಳಪಂಗಡಗಳಾಗಲೀ, ವೀರಶೈವ ಲಿಂಗಾಯತರು ಒಂದೇ ಎಂಬ ಭಾವನೆ ಮೂಡುವಂತಾಗಬೇಕು. ತಮ್ಮಲ್ಲಿರುವ ಅಲ್ಪವಾದ ಒಳಬೇಧವನ್ನು ತ್ಯಜಿಸಿ ಅನ್ಯೋನ್ಯ ಭಾವದಿಂದ ವರ್ತಿಸಬೇಕು. ವೀರಶೈವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಕರೆ ಕೊಟ್ಟಿದ್ದಾರೆ. ನೂರು ಅಧಿವೇಶನದ ಹಿಂದೆ ಕರೆ ಕೊಡಲಾಗಿದೆ. ಆದರೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಕಾರ್ಯರೂಪಕ್ಕೆ ಬರುವ ಹಾಗೆ ಪ್ರಯತ್ನಿಸಿ ಸಮಾಜ ಸಂಘಟಿಸಿ, ಒಗ್ಗೂಡಿಸಲಿ ಎಂದು ಸಲಹೆ ನೀಡಿದರು.  ಅಖಿಲ ಭಾರತ ವೀರಶೈವ ಮಹಾಸಭಾದ  24ನೇ ಮಹಾಸಭಾ ಅಧಿವೇಶನವನ್ನು
ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಉದ್ಘಾಟಿಸಿದರು,
ಶ್ರೀಶೈಲ ಜಗದ್ಗುರುಗಳು, ಸಿರಿಗೇರಿ ಜಗದ್ಗುರುಗಳು,
ಶ್ರೀ ವಚನಾನಂದ ಸ್ವಾಮೀಜಿಗಳು, ಶ್ರೀ ಗುರು ಸಿದ್ದ ರಾಜ ಯೋಗೇಂದ್ರ ಸ್ವಾಮೀಜಿ, ಡಾಕ್ಟರ್ ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ, ಎಸ್ ರುದ್ರೆಗೌಡ್ರು ,
ಎಸ್ ಎಸ್ ಮಲ್ಲಿಕಾರ್ಜುನ್, ಶಂಕರ್ ಬಿದರಿ,
ಜಿಎಂ ಸಿದ್ದೇಶ್ವರ್, ಬಿಪಿ ಹರೀಶ್,ಡಿ.ಜಿ, ಶಾಂತನ್ ಗೌಡ, ರುದ್ರಮುನಿಸಜ್ಜನ್, ಇನ್ನು ಹಲವಾರು ವೀರಶೈವ ಮುಖಂಡರು ಹಾಜರಿದ್ದರು.