ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

🛕 ಧರ್ಮಸ್ಥಳದಿಂದ ಹಾರ್ನಳ್ಳಿ ಚೌಕಿ ಮಠಕ್ಕೆ ₹10 ಲಕ್ಷ ಅನುದಾನ ಹಸ್ತಾಂತರ.!

On: July 17, 2025 1:24 PM
Follow Us:
---Advertisement---

ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ದೃಷ್ಟಿಕೋನ ಸ್ಪಷ್ಟ

ಹಾರ್ನಳ್ಳಿ (ಶಿವಮೊಗ್ಗ ತಾಲ್ಲೂಕು)ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾರ್ನಳ್ಳಿ ಗ್ರಾಮದ ಚೌಕಿ ಮಠದ ಅಭಿವೃದ್ಧಿಗೆ ₹10 ಲಕ್ಷ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಮಂಜೂರುಮಾಡಿದ್ದು, ಈ ದಿನದಂದು ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಅವರು ಮಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ನೀಲಕಂಠ ಸ್ವಾಮಿಗಳ ಸಮ್ಮುಖದಲ್ಲಿ ಕಮಿಟಿಯ ಸದಸ್ಯರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಶ್ರೀ ಕ್ಷೇತ್ರದಿಂದ ಇಂದಿನವರೆಗೆ 15 ಸಾವಿರಕ್ಕೂ ಅಧಿಕ ದೇವಸ್ಥಾನ ಹಾಗೂ ಮಠ ಮಂದಿರಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಸ್ವಸಹಾಯ ಸಂಘಗಳ ಮೂಲಕ ವ್ಯಕ್ತಿ ಮತ್ತು ಕುಟುಂಬ ಅಭಿವೃದ್ಧಿಗೆ ಮಾತ್ರವಲ್ಲ, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುತ್ತಿದೆ,” ಎಂದು ಹೇಳಿದರು.

ತಾಲೂಕಿನ ಯೋಜನಾಧಿಕಾರಿಗಳಾದ ಉಲ್ಲಾಸ್ ಮೆಸ್ತ್ ಅವರು “ಯೋಜನೆಯು ದೇವಸ್ಥಾನಗಳು, ಶಿಕ್ಷಣ, ವಿದ್ಯಾರ್ಥಿ ವೇತನ, ಶಿಕ್ಷಕರ ಕೊರತೆ ನಿವಾರಣೆ, ಮಾಸಾಶನ, ವಾತ್ಸಲ್ಯ ಮನೆ ನಿರ್ಮಾಣ, ನಿರ್ಗತಿಕರಿಗೆ ಸಹಾಯ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದೆ” ಎಂಬುದಾಗಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಸುರೇಶ್ ಶೆಟ್ಟಿಗಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಹಾರ್ನಳ್ಳಿ ಒಕ್ಕೂಟದ ಅಧ್ಯಕ್ಷರಾದ ಭಾಗ್ಯ, ಮಠದ ಕಮಿಟಿಯ ಸದಸ್ಯರುಗಳಾದ ಸುರೇಶ್ ಹಾಗೂ ಇತರರು, ಸೇವಾ ಪ್ರತಿನಿಧಿಗಳಾದ ಕವಿತಾ ಮತ್ತು ಆಶಾ, ಸಂಘದ ಸದಸ್ಯರು ಉಪಸ್ಥಿತರಿದ್ದರು.

 

 

Join WhatsApp

Join Now

Join Telegram

Join Now