ಶ್ರೀ ವೀರಭದ್ರೇಶ್ವರ ಜಯಂತೋತ್ಸವಕ್ಕೆ ಕಾಶಿಪೀಠಕ್ಕೆ ಕರೆಯಲು ದಾವಣಗೆರೆಯಲ್ಲಿ ವಿಶೇಷ ಭೇಟಿ!”
ಸೆಪ್ಟೆಂಬರ್ 09, 2025 ರಂದು ನಡೆಯಲಿರುವ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಕಾರ್ಯಕ್ರಮಕ್ಕೂ ಮೊದಲು, ಪ್ರಮುಖ ಪಾವನ ಕ್ಷಣವಾಗಿ ಇಂದು ದಾವಣಗೆರೆ ನಗರದಲ್ಲಿ ಮಹತ್ವದ ಬೇಟಿ.
ವೀರಶೈವ ಲಿಂಗಾಯತ ಸಂಘಟನೆ ವೇದಿಕೆಯಿಂದ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನದೀಶ್ವರ,
ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವದ್ಪಾದರು, ಕಾಶಿಪೀಠ – ಇವರಿಗೆ ಜಗದ್ಗುರುವಿನಾಗಿ ಗೌರವಪೂರ್ವಕವಾಗಿ ವೀರಭದ್ರೇಶ್ವರ ಜಯಂತೋತ್ಸವ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.
ಈ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಸಲುವಾಗಿ, ತಾವರೆಕೆರೆ ಮಠದ ಗುರುಗಳ ಸಾನ್ನಿಧ್ಯದಲ್ಲಿ, ದಾವಣಗೆರೆ ನಗರದಲ್ಲಿ ಭಿನ್ನ ರೀತಿಯ ಸಭೆ ಆಯೋಜನೆಯಾಗಿತ್ತು.
ಸಭೆಯಲ್ಲಿ ಪ್ರಮುಖ ಮುಖಂಡರಾದ:ಶಿವರಾಜ್ ಬಿ – ಜಿಲ್ಲಾ ಅಧ್ಯಕ್ಷರು ಉಮೇಶ್ ಕೆ.ಬಿ – ಜಿಲ್ಲಾ ಉಪಾಧ್ಯಕ್ಷರುಉಮೇಶ್ ಹಿರೇಮಠ್ – ಸಮಾಜದ ಹಿರಿಯ ಮುಖಂಡರು ವಿಶ್ವನಾಥ್ ಹುಂಬಿ – ನಗರ ಉಪಾಧ್ಯಕ್ಷರು ಈ ಮಹತ್ವದ ಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.”Electric ಜಗದ್ಗುರುಗಳ ಉಪಸ್ಥಿತಿಯು ಈ ಜಯಂತೋತ್ಸವದ ಪಾವಿತ್ರ್ಯಕ್ಕೆ ವಿಶೇಷ ಭಾವ ಮೂಡಿಸಲಿದೆ. ಸಮಾಜದ ದಾರಿ ದೀಪವಾದ ಈ ಪೀಠದ ಸಂದೇಶದೊಂದಿಗೆ ಯುವ ಪೀಳಿಗೆಗೆ ಶಕ್ತಿ, ಶ್ರದ್ಧೆ ಹಾಗೂ ಶಿಸ್ತಿನ ಪಾಠ ಸಿಗಲಿದೆ” ಎಂದು ಜಿಲ್ಲಾ ಅಧ್ಯಕ್ಷರು ಅಭಿಪ್ರಾಯಪಟ್ಟರು.