ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಪತ್ರಿಕಾ ಪ್ರಕಟಣೆಗೋಂದು ಅನಾಮಿಕ ಪತ್ರದ ಸಾರಾಂಶವೇ ಕುತೂಹಲ.!

On: August 5, 2025 12:38 PM
Follow Us:
---Advertisement---

ಇಷ್ಟಪಟ್ಟು ಕಲಿಸಲು ಬಂದಿರುವೆವು//ಅತಿಯಾಗಿ ಕಷ್ಟ ಕೊಡಬೇಡಿ//ಯಾಕಾದರೂ ಈ ವೃತ್ತಿಗೆ ಬಂದೆವೋ…ಎಂದೆನಿಸಬೇಡಿ //ಬಿಟ್ಟುಬಿಡಿ ನಮ್ಮಷ್ಟಕ್ಕೆ ನಮ್ಮನು //ಮನಸಿಟ್ಟು ಪಾಠ ಮಾಡಲು//ಕಲಿತ ಜ್ಞಾನವನು ಮಕ್ಕಳಿಗೆ ಧಾರೆಯೆರೆಯಲು

ಏನೋ ಮಾಡಲು ಕರೆಯಿಸಿ//ನಮ್ಮಿಂದ ಏನೇನೋ ಮಾಡಿಸುತ್ತಿರುವಿರಿ//ಶಿಕ್ಷಕ ಎಂಬ ಪದದರ್ಥ ವಿರೂಪಗೊಳ್ಳುತ್ತಿದೆ//ಅಟೆಂಡ‌ರ್ ಎಂಬ ಪದ ಕೇಳಿ ಬರುತ್ತಿದೆ//ದಿನದಿನಕೂ ಕ್ಷಣಕ್ಷಣಕೂ ಬರುವ ಸುತ್ತೋಲೆಗಳ ಹಾವಳಿ//

ಅನುಷ್ಠಾನಕ್ಕೆ ತರುವ ವೇಳೆಗೆ
ತರಗತಿಯ ಪಾಠಗಳು ದಿವಾಳಿ//
ತುರ್ತು ಮಾಹಿತಿ ಎಂಬ ಪದ ಕೇಳಿ ಕೇಳಿ//
ಶಿಕ್ಷಕರ ಮೈಮನಗಳಲ್ಲಿ ಚಳಿಚಳಿ//
ಬಿಟ್ಟು ಬಿಡಿ ನಮ್ಮಷ್ಟಕ್ಕೆ ನಮ್ಮನು
ಮಕ್ಕಳಿಗೆ ಪಾಠ ಮಾಡಲು //
ನಾವು ಮಕ್ಕಳೊಂದಿಗೆ ಕಲಿಯುತ್ತ
ಕಲಿಸಲು ಕಲಿಯಲು//

Join WhatsApp

Join Now

Join Telegram

Join Now