ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ಶಿವಮೊಗ್ಗದಲ್ಲಿ ಯುವ ಹಾಗೂ ಮಹಿಳಾ ಘಟಕಗಳ ಪದಗ್ರಹಣ.!

On: July 26, 2025 1:03 PM
Follow Us:
---Advertisement---

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ಶಿವಮೊಗ್ಗದಲ್ಲಿ ಯುವ ಹಾಗೂ ಮಹಿಳಾ ಘಟಕಗಳ ಪದಗ್ರಹಣ,

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ತಾಲೂಕು ಘಟಕದ ಯುವ ವಿಭಾಗ ಮತ್ತು ಮಹಿಳಾ ವಿಭಾಗಗಳ ಪದಗ್ರಹಣ ಸಮಾರಂಭ ಇಂದು ಬೆಳಿಗ್ಗೆ 9 ಗಂಟೆಗೆ ಮಾನ್ಯ ಸಂಸದ ಶ್ರೀ ಬಿ.ವೈ. ರಾಘವೇಂದ್ರ ಅವರ ವಿನೋಬನಗರ ನಿವಾಸದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಸಮಾರಂಭದ ಉದ್ಘಾಟನೆಯನ್ನು ಸ್ವತಃ ಶ್ರೀ ಬಿ.ವೈ. ರಾಘವೇಂದ್ರ ಅವರೇ ದೀಪ ಬೆಳಗಿಸಿ ನೆರವೇರಿಸಿದರು. ಸಂಘಟನೆಯ ನೂತನ ಅಧ್ಯಕ್ಷರಾದ ನವೀನ್ ವಾರದ್ ಮತ್ತು ಮಹಿಳಾ ಘಟಕದ ಅಧ್ಯಕ್ಷರಾದ ಶ್ರಿಮತಿ ಸುಜಾತಾ ಬಸವರಾಜ ಅವರಿಗೆ ಶಾಲು ಹೊದಿಸಿ, ಹಾನಗಲ್ ಕುಮಾರಸ್ವಾಮಿ ಸ್ವಾಮೀಜಿಯವರ ಫೋಟೋ ನೀಡಿ ಗೌರವಿಸಿದರು.

ಈ ಸಂದರ್ಭ ಸಂಸದರು ಮಾಡಿದ ಭಾಷಣ ಪ್ರಭಾವ ಬೀರುವಂತಿತ್ತು.
“ಮನೆ ಕೆಲಸ ಮುಗಿಸಿ ಸಮಾಜದ ಕೆಲಸಕ್ಕೆ ಕಾಲ್ ಇಡುವ ಮಹಿಳೆಯರು ನಿಜವಾದ ನಾಯಕಿಯರು,” ಎಂದು ಹೇಳಿದ್ದಾರೆ. ಕ್ರಿಯಾಶೀಲ ಮಹಿಳಾ ಘಟಕದ ಅಭಿವೃದ್ದಿಗೆ ಶ್ಲಾಘನೆ ಸಲ್ಲಿಸಿದ ಸಂಸದರು, ಇತಿಹಾಸದ ಪುಟಗಳನ್ನು ತಿರುಗಿಸಿ, “ಗುರು, ಮಠ, ಶಿಕ್ಷಣ ಈ ಮೂರು ಲಿಂಗಾಯತ ಧರ್ಮ ಅಡಿಪಾಯವನ್ನು ಹಾಕಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ಐದು ಶ್ರೀಗಳು ಒಟ್ಟಾಗಿ ವೇದಿಕೆ ಹಂಚಿಕೊಂಡಿದ್ದು ನಮ್ಮೊಳಗಿನ ಏಕತೆಯ ಪ್ರಬಲ ಉದಾಹರಣೆ,” ಎಂದು ಹೇಳಿದರು.
“ಸಮಾಜ ಎಂಬುದು ಅಲದಮರ. ಅದರ ಬುಡ ಗಟ್ಟಿ ಇದ್ದರೆ ಮಾತ್ರ ಬೇರೆಯವರಿಗೆ ನೆರಳನ್ನು ಕೋಡಲು ಸಾಧ್ಯ.! ಹಾಗೆ

ನಮ್ಮ್ ಸಮಾಜದ  ಉಪ ಪಂಗಡದ ಹೆಸರಿನಲ್ಲಿ ವಿಂಗಡಿಸದೇ ಎಲ್ಲರೂ ಒಂದಾಗಿ ಮುಂದೆ ಸಾಗೋಣ,” ಎಂಬಂತಹ ಪ್ರೇರಣಾದಾಯಕ ಮಾತುಗಳು ಸಭಿಕರಲ್ಲಿ ಚೈತನ್ಯ ತುಂಬಿದವು.
ಕಾರ್ಯಕ್ರಮದಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ಯುವ ಘಟಕದ ನೂತನ ಪದಾಧಿಕಾರಿಗಳು, ಮಹಿಳಾ ಘಟಕದ ಸಮಿತಿ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಜಿ.ಎಂ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮತ್ತಷ್ಟು ಭಾರವನ್ನೂ ತಂದಿತು.
ಈ ಶಿಸ್ತಿನ ಕಾರ್ಯಕ್ರಮವು ಕೇವಲ ಪದಗ್ರಹಣವಲ್ಲ, ಬದಲಾವಣೆಯ ನೂರೊಂದನೇ ಹೆಜ್ಜೆ ಎಂಬಂತೆ ಕಾಣಿಸಿತು. ಹೊಸ ನಾಯಕರಿಗೆ ಹುಮ್ಮಸ್ಸು ನೀಡಿದ ಈ ವೇದಿಕೆ, ಸಮರ್ಥ ಮಹಿಳಾ ನಾಯಕರಿಗೆ ಭವಿಷ್ಯದ ದಾರಿ ಬಿಚ್ಚಿದಂತಾಯಿತು.
ಶಿವಮೊಗ್ಗದಲ್ಲಿ ನಡೆದ ಈ ಕಾರ್ಯಕ್ರಮ ಸಾಂಘಿಕ ಶಕ್ತಿ, ಯುವ ನಿರ್ವಹಣಾ ಸಾಮರ್ಥ್ಯ ಮತ್ತು ಲಿಂಗಾಯತ ಸಮಾಜದ ಒಳಜವಬ್ದಾರಿ ಬಿಂಬಿಸಿದ ಒಂದು ಬೃಹತ್ ಸಾಂಸ್ಕೃತಿಕ ರಾಜಕೀಯ ಸನ್ನಿವೇಶವಾಗಿದೆ.

ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ತಾಲೂಕು ಘಟಕದ ಯುವ ವಿಭಾಗ ಮತ್ತು ಮಹಿಳಾ ವಿಭಾಗಗಳ ಪದಗ್ರಹಣ ಸಮಾರಂಭ ಇಂದು ಬೆಳಿಗ್ಗೆ 9 ಗಂಟೆಗೆ ಮಾನ್ಯ ಸಂಸದ ಶ್ರೀ ಬಿ.ವೈ. ರಾಘವೇಂದ್ರ ಅವರ ವಿನೋಬನಗರ ನಿವಾಸದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸಮಾರಂಭದ ಉದ್ಘಾಟನೆಯನ್ನು ಸ್ವತಃ ಶ್ರೀ ಬಿ.ವೈ. ರಾಘವೇಂದ್ರ ಅವರೇ ದೀಪ ಬೆಳಗಿಸಿ ನೆರವೇರಿಸಿದರು. ಸಂಘಟನೆಯ ನೂತನ ಅಧ್ಯಕ್ಷರಾದ ನವೀನ್ ವಾರದ್ ಮತ್ತು ಮಹಿಳಾ ಘಟಕದ ಅಧ್ಯಕ್ಷರಾದ ಶ್ರಿಮತಿ ಸುಜಾತಾ ಬಸವರಾಜ ಅವರಿಗೆ ಶಾಲು ಹೊದಿಸಿ, ಹಾನಗಲ್ ಕುಮಾರಸ್ವಾಮಿ ಸ್ವಾಮೀಜಿಯವರ ಫೋಟೋ ನೀಡಿ ಗೌರವಿಸಿದರು.

ಈ ಸಂದರ್ಭ ಸಂಸದರು ಮಾಡಿದ ಭಾಷಣ ಪ್ರಭಾವ ಬೀರುವಂತಿತ್ತು.

“ಮನೆ ಕೆಲಸ ಮುಗಿಸಿ ಸಮಾಜದ ಕೆಲಸಕ್ಕೆ ಕಾಲ್ ಇಡುವ ಮಹಿಳೆಯರು ನಿಜವಾದ ನಾಯಕಿಯರು,” ಎಂದು ಹೇಳಿದ್ದಾರೆ. ಕ್ರಿಯಾಶೀಲ ಮಹಿಳಾ ಘಟಕದ ಅಭಿವೃದ್ದಿಗೆ ಶ್ಲಾಘನೆ ಸಲ್ಲಿಸಿದ ಸಂಸದರು, ಇತಿಹಾಸದ ಪುಟಗಳನ್ನು ತಿರುಗಿಸಿ, “ಗುರು, ಮಠ, ಶಿಕ್ಷಣ ಈ ಮೂರು ಲಿಂಗಾಯತ ಧರ್ಮ ಅಡಿಪಾಯವನ್ನು ಹಾಕಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ಐದು ಶ್ರೀಗಳು ಒಟ್ಟಾಗಿ ವೇದಿಕೆ ಹಂಚಿಕೊಂಡಿದ್ದು ನಮ್ಮೊಳಗಿನ ಏಕತೆಯ ಪ್ರಬಲ ಉದಾಹರಣೆ,” ಎಂದು ಹೇಳಿದರು.

“ಸಮಾಜ ಎಂಬುದು ಅಲದಮರ. ಅದರ ಬುಡ ಗಟ್ಟಿ ಇದ್ದರೆ ಮಾತ್ರ ಬೇರೆಯವರಿಗೆ ನೆರಳನ್ನು ಕೋಡಲು ಸಾಧ್ಯ.! ಹಾಗೆ

ನಮ್ಮ್ ಸಮಾಜದ  ಉಪ ಪಂಗಡದ ಹೆಸರಿನಲ್ಲಿ ವಿಂಗಡಿಸದೇ ಎಲ್ಲರೂ ಒಂದಾಗಿ ಮುಂದೆ ಸಾಗೋಣ,” ಎಂಬಂತಹ ಪ್ರೇರಣಾದಾಯಕ ಮಾತುಗಳು ಸಭಿಕರಲ್ಲಿ ಚೈತನ್ಯ ತುಂಬಿದವು.

ಕಾರ್ಯಕ್ರಮದಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ಯುವ ಘಟಕದ ನೂತನ ಪದಾಧಿಕಾರಿಗಳು, ಮಹಿಳಾ ಘಟಕದ ಸಮಿತಿ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಜಿ.ಎಂ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮತ್ತಷ್ಟು ಭಾರವನ್ನೂ ತಂದಿತು.

ಈ ಶಿಸ್ತಿನ ಕಾರ್ಯಕ್ರಮವು ಕೇವಲ ಪದಗ್ರಹಣವಲ್ಲ, ಬದಲಾವಣೆಯ ನೂರೊಂದನೇ ಹೆಜ್ಜೆ ಎಂಬಂತೆ ಕಾಣಿಸಿತು. ಹೊಸ ನಾಯಕರಿಗೆ ಹುಮ್ಮಸ್ಸು ನೀಡಿದ ಈ ವೇದಿಕೆ, ಸಮರ್ಥ ಮಹಿಳಾ ನಾಯಕರಿಗೆ ಭವಿಷ್ಯದ ದಾರಿ ಬಿಚ್ಚಿದಂತಾಯಿತು.

ಶಿವಮೊಗ್ಗದಲ್ಲಿ ನಡೆದ ಈ ಕಾರ್ಯಕ್ರಮ ಸಾಂಘಿಕ ಶಕ್ತಿ, ಯುವ ನಿರ್ವಹಣಾ ಸಾಮರ್ಥ್ಯ ಮತ್ತು ಲಿಂಗಾಯತ ಸಮಾಜದ ಒಳಜವಬ್ದಾರಿ ಬಿಂಬಿಸಿದ ಒಂದು ಬೃಹತ್ ಸಾಂಸ್ಕೃತಿಕ ರಾಜಕೀಯ ಸನ್ನಿವೇಶವಾಗಿದೆ.

Join WhatsApp

Join Now

Join Telegram

Join Now