ಶಿವಮೊಗ್ಗದಲ್ಲಿ ದ್ವಿಚಕ್ರ ಅಪಘಾತ: 19 ವರ್ಷದ ಶಶಾಂಕ್ ದಾರುಣ ಸಾವು.!

ಶಿವಮೊಗ್ಗ ನಗರದ ಶರಾವತಿ ನಗರದ ಪಾಂಡುರಂಗ ದೇವಾಲಯದ ಸಮೀಪ ನಿವಾಸಿಯಾದ ಶಶಾಂಕ್ (19) ಎಂಬ ಯುವಕ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟ ದುಃಖದ ಘಟನೆ ನಡೆದಿದೆ. ನಿನ್ನೆ ರಾತ್ರಿ ಸುಮಾರು 8.30ರ ಸಮಯದಲ್ಲಿ ಸಾಗರ ರಸ್ತೆಯ ಖಾಸಗಿ ಆಸ್ಪತ್ರೆಯ ಎದುರು ಈ ಘಟನೆ ಸಂಭವಿಸಿದೆ.

ಶಶಾಂಕ್ ತನ್ನ ಸ್ನೇಹಿತ ತರುಣ್ ಜೊತೆ ಸುಜುಕಿ ಹಿಸ್ಟ್ರೋಮ್ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದೆ. ಈ ವೇಳೆ ಹಿಂದೆ ಕೂತಿದ್ದ ಶೇಷಾಂಕ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಾಹನ ಚಲಾಯಿಸುತ್ತಿದ್ದ ತರುಣ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತ ಶಶಾಂಕ್ ತಮ್ಮ ತಂದೆ-ತಾಯಿಗಳ ಏಕೈಕ ಪುತ್ರನಾಗಿದ್ದು, ಈ ದುರ್ಘಟನೆಯಿಂದ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ ಸ್ಥಳೀಯರು ಹಾಗೂ ಸ್ನೇಹಿತರು ಶೋಕ ವ್ಯಕ್ತಪಡಿಸಿದ್ದಾರೆ.

Leave a Comment