ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ಸ್ಪೂರ್ತಿ- ಬಿ ಲೋಕೇಶ್.

On: October 26, 2026 10:27 AM
Follow Us:
---Advertisement---

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಜಯಂತೋತ್ಸವವನ್ನು ನಮ್ಮೂರ ಬಳಗದ ವತಿಯಿಂದ ಅಲ್ಲಮಪ್ರಭು ಮೈದಾನ, ಫ್ರೀಡಂ ಪಾರ್ಕ್ ನಲ್ಲಿ ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ , ಸಿಹಿ ವಿತರಿಸಿ ಆಚರಿಸಲಾಯಿತು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಮ್ಮೂರ ಬಳಗ ಸಂಚಾಲಕರಾದ ಬಿ ಲೋಕೇಶ್ ರವರು ದಾರಿತಪ್ಪಿದ ಮನಸ್ಸಿಗೆ ಜ್ಞಾನದ ಬೆಳಕು ನೀಡಿ, ಅಕ್ಷರಶಕ್ತಿಯ ಮೂಲಕ ಜಗತ್ತಿಗೆ ಮಹಾನ್ ಆದರ್ಶಗಳನ್ನು ಸಾರುವ ‘ರಾಮಾಯಣ’ ಮಹಾಕಾವ್ಯವನ್ನು ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯಂದು ಭಕ್ತಿಪೂರ್ವಕ ಗೌರವ ನಮನ ಸಲ್ಲಿಸುತ್ತಾ ಸತ್ಯ, ಧರ್ಮ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾದ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಂದೇಶಗಳು ಸದಾ ನಮಗೆ ಸ್ಫೂರ್ತಿಯಾಗಿರಲಿ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜ್ಞಾನಸಮೃದ್ಧ, ಸಮಾನತೆಯ ಸಮಾಜ ನಿರ್ಮಿಸೋಣ ಎಂದರು

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ .ರಂಗನಾಥ್, ಗೌರವ ಸಂಚಾಲಕರಾದ ಸಿ ರವಿ ,ಸಿ. ಹೆಚ್ .ಮಾಲ್ತೇಶ್ ಸಂಚಾಲಕರುಗಳಾದ ಹೆಚ್. ಪಿ. ಗಿರೀಶ್ ಸುಬ್ರಮಣಿ,, ಕೇಬಲ್ ಲೋಕೇಶ್, ಭವಾನಿ ರಾವ್, ದೇವದಾಸ್, ಶಿವು, ತೇಜು, ವಿಜಯ್,ಸಂತೋಷ್ ಗುರುಪುರ, ಗಿರೀಶ್ ನಾಯಕ ಹಾಗೂ ನಾಗರಿಕ ಬಂಧುಗಳು ಇದ್ದರು

Sathish munchemane

Join WhatsApp

Join Now

 

Read More

Leave a Comment