ಶಿವಮೊಗ್ಗದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ (ರಿ) ವತಿಯಿಂದ ಬಸವ ಜಯಂತಿಯ ಅಂಗವಾಗಿ ರಾಜಬೀದಿ ಉತ್ಸವವು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ನಡೆಯಿತು. ಗಾಂಧಿ ಬಜಾರ್‌ನ ಶ್ರೀ ಬಸವೇಶ್ವರ ದೇವಸ್ಥಾನದಿಂದ
ಪ್ರಾರಂಭವಾದ ಉತ್ಸವ ಮೆರವಣಿಗೆ ಕುವೆಂಪು ರಂಗಮಂದಿರದವರೆಗೆ ಸಾಗಿತು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್, ಬಳ್ಳಕೆರೆ ಸಂತೋಷ್, ಎಸ್.ಪಿ. ದಿನೇಶ್, ರಾಜ್ಯಾಧ್ಯಕ್ಷರಾದ ಷಡಕ್ಷರಿ, ಎಚ್.ಸಿ. ಯೋಗೇಶ್, ವಿಜಯಕುಮಾರ್, ಮಹಾಸಭಾ ಅಧ್ಯಕ್ಷ ರುದ್ರಮುನಿ ಸಜ್ಜನ್, ರಾಜಶೇಖರ್, ಪಿ. ರುದ್ರೇಶ್, ಮಲ್ಲಿಕಾರ್ಜುನ ಸ್ವಾಮಿ ಉಮೇಶ್ ಮಲ್ಲಿಕಾರ್ಜುನ್ ಕಾನೂರ್ ಹಾಗೂ ಕೆ.ಆರ್. ಸೋಮನಾಥ್ ಪತ್ರಕರ್ತ ಯೋಗರಾಜ್ ಸತೀಶ್ ಮುಂಚೆಮನೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
ಮೆರವಣಿಗೆಯಲ್ಲಿ ಸಮಾಜದ ಭಾಂದವರು ಉತ್ಸಾಹದಿಂದ ಪಾಲ್ಗೊಂಡು ಬಸವಣ್ಣನ ಸಂದೇಶಗಳನ್ನು ಸಾರಿದರು. ಕುವೆಂಪು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಸವ ತತ್ವಗಳ ಪ್ರಚಾರ ಮತ್ತು ಸಾಮಾಜಿಕ ಏಕತೆಯ ಮಹತ್ವವ ಬಗ್ಗೆ ಮಾತನಾಡಲಿದ್ದಾರೆ.









