ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವಕ್ಕೆ ಕೇದಾರ ಶ್ರೀಗಳಿಗೆ ‎ಭಿನ್ನವಿಸಿಕೊಳ್ಳಲಾಯಿತು.!

On: March 4, 2026 2:19 PM
Follow Us:
---Advertisement---

ಹರಿಹರ ತಾಲ್ಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ದಿನಾಂಕ 04ರಂದು ಬುಧವಾರ ಬೆಳಗ್ಗೆ ಜಗದ್ಗುರು ಪಂಚಪೀಠಾಧೀಶ್ವರರ ಮೇ 16 ಮತ್ತು 17 ರಂದು ನಡೆಯಲಿರುವ ಅಡ್ಡ ಪಲ್ಲಕ್ಕಿ ಮಹೋತ್ಸವದ ನಿಮಿತ್ತ ಪೂಜ್ಯ ಕೇದಾರಗಳಿಗೆ ಭಕ್ತಿಪೂರ್ವಕ ಭಿನ್ನವಿಸಿಕೊಳ್ಳಲಾಯಿತು.

ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಸಮಿತಿಯ ಸದಸ್ಯರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದು, ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಯಡಿಯೂರು ಮುಕ್ತಿ ಮಂದಿರ ಶ್ರೀಗಳು  ಶ್ರೀಗಳು ಮತ್ತು ಬಿಳಕಿ ಶ್ರೀಗಳು ಸ್ಥಳದಲ್ಲೇ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಮಹೋತ್ಸವವು ಭಕ್ತರ ಆತ್ಮೀಯತೆ ಮತ್ತು ಧಾರ್ಮಿಕ ಭಾವನೆಗಳನ್ನು ಮತ್ತಷ್ಟು ಬಲಪಡಿಸುವ ಕಾರ್ಯಕ್ರಮವಾಗಿದ್ದು, ಸಮಾಜದ ಎಲ್ಲ ವರ್ಗದ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೋರಲಾಯಿತು.

ಕಾರ್ಯಕ್ರಮದಲ್ಲಿ ಸನ್ಮಾನ್ಯ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ರವರು ಉಪಸ್ಥಿತರಿದ್ದು, ಮಹೋತ್ಸವದ ಮಹತ್ವವನ್ನು ವಿವರಿಸಿ ಸಮಿತಿಯ ಪ್ರಯತ್ನಗಳನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಆಯನೂರು ಮಂಜುನಾಥ್, ಡಾ. ಧನಂಜಯ ಸರ್ಜಿ, ಸಿ.ಎಸ್. ಷಡಕ್ಷರಿ, ರೇಣುಕಾಚಾಯ೯, ಬಳ್ಳೆಕೆರೆ ಸಂತೋಷ್, ಜ್ಯೋತಿ ಪ್ರಕಾಶ್, ಟಿ.ಡಿ. ಮೇಗರಾಜ್, ಎಸ್.ಪಿ. ದಿನೇಶ್, ಮಹಾಲಿಂಗಸ್ವಾಮಿ, ಪಿ. ರುದ್ರೇಶ್ ಸೇರಿದಂತೆ ವೀರಶೈವ ಸಮಾಜದ ಪ್ರಮುಖರು

ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವವು ಧಾರ್ಮಿಕ ಸಂಪ್ರದಾಯ, ಸಾಂಸ್ಕೃತಿಕ ಪರಂಪರೆ ಮತ್ತು ಭಕ್ತರ ಏಕತೆಯ ಪ್ರತೀಕವಾಗಿದೆ. ಸಮಿತಿಯ ಸದಸ್ಯರು ಮಹೋತ್ಸವವನ್ನು ಭಕ್ತಿಪೂರ್ವಕವಾಗಿ ಮತ್ತು ಶಿಸ್ತುಬದ್ಧವಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ವೀರಶೈವ ಸಮಾಜದ ಪ್ರಮುಖರು ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಸಮಿತಿ, ಸದಸ್ಯರು  ಮತ್ತು ಸಮಾಜದ ಗಣ್ಯರು ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More