ಶಿವಮೊಗ್ಗದಲ್ಲಿ ಮೀನುಗಾರರಿಗೆ ಸರಕಾರಿ ಸೌಲಭ್ಯ ವಿತರಣೆ – ದೋಣಿ, ದ್ವಿಚಕ್ರ ವಾಹನ, ಜೀವರಕ್ಷಕ ಜಾಕೆಟ್, ಬಲೆಗಳ ವಿತರಣೆ.!
ಶಿವಮೊಗ್ಗ ಜಿಲ್ಲಾ ಪಂಚಾಯತ್ ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನುಗಾರರ ಕಲ್ಯಾಣಕ್ಕಾಗಿ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಜಿ.ಎಸ್. ಷಡಕ್ಷರಿ, ಉಪ ನಿರ್ದೇಶಕರು ಜಿ.ಎಂ. ಶಿವಕುಮಾರ್ ಹಾಗೂ ಮೀನುಗಾರಿಕೆ ಅಧಿಕಾರಿ ರಾಘವೇಂದ್ರ ಅವರು ಉಪಸ್ಥಿತರಿದ್ದು, ಮೀನುಗಾರರಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಿದರು.
ಗಾಜನೂರು ಆಗ್ರಾಹಾರದ ಮೀನುಗಾರರಾದ ಆಕಾಶ್ ಅವರಿಗೆ ಹೋಂಡಾ ಡಿಯೋ ದ್ವಿಚಕ್ರ ವಾಹನವನ್ನು ನೀಡಲಾಯಿತು. ಇದರ ಜೊತೆಗೆ ಮೀನುಗಾರಿಕೆ ವೃತ್ತಿಗೆ ಅಗತ್ಯವಾದ ಫೈಬರ್ ದೋಣಿ, ಲೈಫ್ ಜಾಕೆಟ್‌ಗಳು ಹಾಗೂ ಮೀನು ಹಿಡಿಯುವ ಬಲೆಗಳನ್ನು ಮೀನುಗಾರರಿಗೆ ಉಚಿತವಾಗಿ ವಿತರಿಸಲಾಯಿತು.
ಈ ಸೌಲಭ್ಯಗಳು ಮೀನುಗಾರರ ಜೀವನಮಟ್ಟ ಸುಧಾರಣೆಗೆ ಹಾಗೂ ಅವರ ವೃತ್ತಿಯನ್ನು ಸುರಕ್ಷಿತವಾಗಿ ನಡೆಸಲು ಸಹಕಾರಿಯಾಗಲಿವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ನಿರ್ದೇಶಕ ಜಿ.ಎಂ. ಶಿವಕುಮಾರ್ ಅವರು, “ಸರ್ಕಾರ ಮೀನುಗಾರರ ಅಭಿವೃದ್ಧಿಗಾಗಿ ನೀಡಿರುವ ಈ ಸಲಕರಣೆಗಳನ್ನು ಸ್ವಂತ ಬಳಕೆಗೆ ಮಾತ್ರ ಉಪಯೋಗಿಸಬೇಕು.
ಯಾವುದೇ ಕಾರಣಕ್ಕೂ ಇವುಗಳನ್ನು ಮಾರಾಟ ಮಾಡಬಾರದು. ಇವು ನಿಮ್ಮ ಕುಟುಂಬದ ಬದುಕಿಗೆ ಆಧಾರವಾಗಬೇಕೇ ಹೊರತು ವ್ಯಾಪಾರಕ್ಕೆ ಬಳಸುವ ವಸ್ತುಗಳಾಗಬಾರದು” ಎಂದು ಕಿವಿಮಾತು ಹೇಳಿದರು.
ಹಿರಿಯ ಸಹಾಯಕ ನಿರ್ದೇಶಕ ಜಿ.ಎಸ್. ಷಡಕ್ಷರಿ ಅವರು ಮಾತನಾಡಿ, ಮೀನುಗಾರಿಕೆ ಇಲಾಖೆ ಮೀನುಗಾರರ ಆರ್ಥಿಕ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸರಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡರೆ ಬದುಕು ಬದಲಾವಣೆ ಸಾಧ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮವು ಮೀನುಗಾರ ಸಮುದಾಯದಲ್ಲಿ ಸಂತಸ ಹಾಗೂ ಭರವಸೆಯನ್ನು ಮೂಡಿಸಿದ್ದು, ಸರಕಾರದ ಯೋಜನೆಗಳು ಪಲನುಬವಿಗಳಿಗೆ ಪರಿಣಾಮಕಾರಿಯಾಗಿ ತಲುಪುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ.







