ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವಕ್ಕೆ ಶಿವಮೊಗ್ಗದಲ್ಲಿ ಮಹತ್ವದ ಪೂರ್ವಭಾವಿ ಸಭೆ
ಜನಜಾಗೃತಿ ಧರ್ಮಸಭೆ,
ಯಡಿಯೂರಪ್ಪಗೆ ಸನ್ಮಾನ, 75 ಲಕ್ಷ ರೂ. ಅಂದಾಜು ವೆಚ್ಚದ ಮಹಾ ಉತ್ಸವಕ್ಕೆ ರೂಪುರೇಷೆ
ಶಿವಮೊಗ್ಗ:
ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಸಮಿತಿ ವತಿಯಿಂದ ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಉತ್ಸವ, ಜನಜಾಗೃತಿ ಧರ್ಮಸಭೆ, ನಮ್ಮ ಸಮಾಜದ ಹೆಮ್ಮೆಯ ನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಾಜದಿಂದ ಸನ್ಮಾನ, ಹಾಗೂ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಎರಡನೇ ಪೂರ್ವಭಾವಿ ಸಭೆ ಇಂದು ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನ (RTO ರಸ್ತೆ)ದಲ್ಲಿ ಜರುಗಿತು.
ಈ ಸಭೆ ಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಸ್ವಾಮಿಗಳು (ಯಡಿಯೂರು ಮಠ), ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು (ಹಿರೇಮಠ, ಬಿಳಿಕಿ), ಶ್ರೀ ಷ.ಬ್ರ. ಡಾ. ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು (ಮಳಲಿ ಮಠ), ಶ್ರೀ ಷ.ಬ್ರ. ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು (ಪಂಚವಣ್ಣಿಗೆ ಮಠ, ತೊಗರ್ಸಿ), ಶ್ರೀ ಷ.ಬ್ರ. ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು (ಶಿಲಾಮಠ, ತಾವರೆಕೆರೆ) ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ಸಭೆಯಲ್ಲಿ ಸಂಸದರು ಶ್ರೀ ಬಿ.ವೈ. ರಾಘವೇಂದ್ರ, ಮಾಜಿ ಸಂಸದ ಶ್ರೀ ಆಯನೂರು ಮಂಜುನಾಥ್, ಶಾಸಕರು ಶ್ರೀ ಚನ್ನಬಸಪ್ಪ ಸೇರಿದಂತೆ ಸಮಾಜದ ಗಣ್ಯರು, ಮಾಜಿ ಶಾಸಕರು ಶ್ರೀ ರುದ್ರಗೌಡ್ರು, ಶ್ರೀ ಚಂದ್ರಶೇಖರಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್, ಎಸ್.ಪಿ. ದಿನೇಶ್, ಶ್ರೀ ಧನಂಜಯ್ ಸರ್ಜಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಸಭೆಯ ಉದ್ದೇಶ, ಕಾರ್ಯಕ್ರಮದ ರೂಪುರೇಷೆ ಹಾಗೂ ಖರ್ಚು-ವೆಚ್ಚಗಳ ಬಗ್ಗೆ ಸಿ.ಎಸ್. ಷಡಾಕ್ಷರಿ ಅವರು ಮಾಹಿತಿ ನೀಡಿದರು.
ಅಡ್ಡಪಲ್ಲಕ್ಕಿ ಉತ್ಸವದ ಅಂಗವಾಗಿ ಸಿದ್ಧಾಂತ ಶಿಖಾಮಣಿ ಪಾರಾಯಣ, ವಚನಗಾನ ಕಾರ್ಯಕ್ರಮ, ಶರಣರ ಸಂತೆ, 200ಕ್ಕೂ ಹೆಚ್ಚು ಮಳಿಗೆಗಳ ವ್ಯವಸ್ಥೆ, ಸೇರಿದಂತೆ ವೈಭವೋಪೇತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಒಟ್ಟು 75 ಲಕ್ಷ ರೂ. ವೆಚ್ಚದ ಅಂದಾಜು ತಯಾರಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ,
“ಸಮಾಜ ಮನೆಮನೆಗೂ ತಲುಪುವ ಕಾರ್ಯಕ್ರಮ ರೂಪಿಸಬೇಕು. ಪ್ರತಿಯೊಬ್ಬರೂ ದೇಣಿಗೆ ನೀಡಬೇಕು. ಸಂಘಟನೆ ಬಲಪಡಿಸಬೇಕು. ನಗರ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಬೇಕು. ಸಮಾಜ ಸಂಘಟಿತವಾಗದೆ ಯಾವುದೇ ಮಹತ್ವದ ಕಾರ್ಯ ಸಾಧ್ಯವಿಲ್ಲ” ಎಂದು ಕರೆ ನೀಡಿದರು.
ಮಾಜಿ ಶಾಸಕ ರುದ್ರಗೌಡ್ರು ಮಾತನಾಡಿ,
“1993ರಲ್ಲಿ ಶಿವಮೊಗ್ಗದಲ್ಲಿ ಸಮಾಜದ ಮೂಲಕ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಚರ್ಚೆ ನಡೆದಿತ್ತು. ಇಂತಹ ಶಾಶ್ವತ ಸಾಮಾಜಿಕ ನಿರ್ಣಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜ್ಯೋತಿಪ್ರಕಾಶ್ ಮಾತನಾಡಿ,
“ಕಾರ್ಯಕ್ರಮ ದಿನಾಂಕವನ್ನು ಫೆಬ್ರವರಿ 22, 2026 ಭಾನುವಾರದಿಂದ ಸೋಮವಾರಕ್ಕೆ ಸ್ಥಳಾಂತರಿಸುವುದು ಸೂಕ್ತ” ಎಂದು ಸಲಹೆ ನೀಡಿದರು.
ಶಾಸಕ ಚನ್ನಬಸಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ,
“ಇಂತಹ ಮಹತ್ವದ ಅಡ್ಡ ಪಲ್ಲಕ್ಕಿ ಉತ್ಸವವನ್ನು ಎಲ್ಲರೂ ಒಟ್ಟಾಗಿ ಸಂಘಟಿತರಾಗಿ ಯಶಸ್ವಿಗೊಳಿಸೋಣ. ಶಿವಮೊಗ್ಗದಲ್ಲಿ ಈ ಮಟ್ಟದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯ” ಎಂದರು.
ಸಮಿತಿಯ ಪ್ರಮುಖ ಹುದ್ದೆಗಳು:
ಗೌರವ ಅಧ್ಯಕ್ಷರು: ಶ್ರೀ ರುದ್ರಗೌಡ್ರು
ಕಾರ್ಯಾಧ್ಯಕ್ಷರು: ಶ್ರೀ ಮಂಜುನಾಥ್
ಅಧ್ಯಕ್ಷರು: ಶ್ರೀ ಬಿ.ವೈ. ರಾಘವೇಂದ್ರ
ಉಪಾಧ್ಯಕ್ಷರು: ಬಿ.ವೈ. ವಿಜಯೇಂದ್ರ, ಸಂಗಮೇಶ ದನಂಜಯ ಸರ್ಜಿ, ಟಿ.ವಿ. ಈಶ್ವರಯ್ಯ, ವಿರೂಪಾಕ್ಷಪ್ಪ
ಪ್ರಧಾನ ಕಾರ್ಯದರ್ಶಿ: ಸಿ.ಎಸ್. ಷಡಾಕ್ಷರಿ
ಖಜಾಂಚಿ: ಎಸ್.ಪಿ. ದಿನೇಶ್ ಸಂಘಟನಾ ಕಾರ್ಯದರ್ಶಿಗಳಾಗಿ ಪುರಲೆ ಮಲ್ಲಿಕಾರ್ಜುನ, ಗಾಡಿಕೊಪ್ಪ ಕುಮಾರ್, ಮತ್ತು ಮಲ್ಲಿಕಾರ್ಜುನ ಸ್ವಾಮಿ.
(ಇನ್ನೂ ಹಲವರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ)







