ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಕೆನ್ನಾಲಗಿಗೆ ಆಹುತಿಯಾದ ಶ್ರೀಗಂಧ–ಮಾವು: ನಿರ್ಲಕ್ಷ್ಯದ ಬೆಂಕಿಗೆ ರೈತರ ಬದುಕು ಬಲಿ.!?

On: February 13, 2026 9:08 AM
Follow Us:
---Advertisement---

ಹಾರನಹಳ್ಳಿ–ವಾಲಕೇಶಪುರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಮೆಕಾನಿಕ್ ಶ್ರೀನಿವಾಸ ಅವರ ತೋಟದಲ್ಲಿ ಪಸಲಿಗೆ ಬಂದಿದ್ದ ಅಮೂಲ್ಯ ಶ್ರೀಗಂಧದ ಗಿಡಗಳು, ಫಲಭಾರದಿಂದ ನಿಂತಿದ್ದ ಮಾವು ಮರಗಳು, ಹಾಗೂ ನೀರಾವರಿಗಾಗಿ ಅಳವಡಿಸಿದ್ದ ಡ್ರಿಪ್ ಪೈಪ್ ವ್ಯವಸ್ಥೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ವರ್ಷಗಳ ಕಾಲ ರೈತರು ಕಷ್ಟಪಟ್ಟು ಸಾಕಿದ ಈ ಮರಗಳು, ಬೇಸಿಗೆಯ ಒಣಗಿದ ವಾತಾವರಣದಲ್ಲಿ ತಮ್ಮದಲ್ಲದ ತಪ್ಪಿಗೆ ಬಲಿಯಾಗಿ, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಯಾರೋದೋ ನಿರ್ಲಕ್ಷ್ಯದಿಂದ ಎಸೆಯಲ್ಪಟ್ಟ ಬೀಡಿ–ಸಿಗರೇಟಿನ ಕಿಡಿ, ಕೆಲವೇ ನಿಮಿಷಗಳಲ್ಲಿ ಬೆಳೆದ ಬೆಳೆಗಳನ್ನು ಬೆಂಕಿಯ ಕೆನ್ನಾಲಗಿಗೆ ಆಹುತಿಮಾಡುತ್ತದೆ.

ಹೊಲಗಳಲ್ಲಿ ಮೆಕ್ಕೆಜೋಳದ ದಂಟುಗಳನ್ನು ಸುಡುವಾಗ, ಗಾಳಿಯಲ್ಲಿ ಹಾರಿ ಹೋಗುವ ಬೆಂಕಿಯ ಕಿಡಿಗಳು ಕಿಲೋಮೀಟರ್ ದೂರದ ತೋಟಗಳಿಗೂ ಬೆಂಕಿ ಹತ್ತುವ ಭೀತಿಯನ್ನು ಹೆಚ್ಚಿಸುತ್ತಿವೆ.

ಬೆಂಕಿ ಹಾಕಿ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳದ ದಂಟು ಸುಡುವುದರಿಂದ, ಮಣ್ಣಿನ ಮೇಲ್ದರದಲ್ಲಿರುವ ಪೋಷಕಾಂಶ ನಾಶವಾಗುತ್ತದೆ, ಪರಿಸರಕ್ಕೆ ತೀವ್ರ ಹಾನಿ ಉಂಟಾಗುತ್ತದೆ,ಹೊಗೆಯಿಂದ ರೈತರ ಶ್ವಾಸಕೋಶ ಆರೋಗ್ಯಕ್ಕೂ ದೀರ್ಘಕಾಲೀನ ಅಪಾಯ ಉಂಟಾಗುತ್ತದೆ.ಇಂತಹ ವಿಚಾರಗಳನ್ನು ತೋಟಗಾರಿಕೆ ಅಧಿಕಾರಿಗಳು ರೈತರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಬೇಕು.

ಆದರೆ ವಾಸ್ತವದಲ್ಲಿ –ಎತ್ತಚ್ಚುಕೊಳ್ಳದ ತೋಟಗಾರಿಕೆ ಅಧಿಕಾರಿಗಳು.!

ವರ್ಷಕ್ಕೊಮ್ಮೆ ಪುಷ್ಪ ಪ್ರದರ್ಶನ ಮಾಡಿ “ಇದೇ ಸಾಧನೆ” ಎನ್ನುವಂತಾಗಿದೆ.

ಈ ಪ್ರದರ್ಶನಗಳಿಂದ ರೈತರಿಗೆ ಯಾವ ರೀತಿಯ ನೈಜ ಅನುಕೂಲವಾಗಿದೆ?

ಯಾವ ರೈತನ ಬದುಕು ಸುಧಾರಿಸಿದೆ?

ಒಂದು ಅಭಿವೃದ್ಧಿಪಡಿಸಿದ ತೆಂಗಿನ ಗಿಡ 3 ವರ್ಷಕ್ಕೆ ಕಾಯಿ ಕೊಡುತ್ತದೆ ಎನ್ನುವುದಾದರೆ, ಅದನ್ನು ರೈತನ ಜಮೀನಿನಲ್ಲಿ ನೆಟ್ಟು, ಪ್ರಾತ್ಯಕ್ಷಿಕೆ ಮೂಲಕ ತೋರಿಸಲಿ.

ಪ್ರದರ್ಶನಗಳ ಹೆಸರಿನಲ್ಲಿ ಸರ್ಕಾರದ ಹಣ ಪೋಲು ಮಾಡುವ ಬದಲು, ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು,

ಬೆಂಕಿ ನಿಯಂತ್ರಣ ಅರಿವು, ಕೃಷಿ ಸುರಕ್ಷತಾ ಶಿಕ್ಷಣ, ಪರಿಸರ ಸಂರಕ್ಷಣಾ ಕಾರ್ಯಚಟುವಟಿಕೆಗಳು ನಡೆಯಬೇಕು.

ರೈತ ಬಾಂಧವರೆ – ಮನವಿ

ಬೆಂಕಿ ಹಾಕುವ ಮುನ್ನ ಯೋಚಿಸಿ.ನಿಮ್ಮ ಒಂದು ಕ್ಷಣದ ನಿರ್ಲಕ್ಷ್ಯಮತ್ತೊಬ್ಬ ರೈತನ ಅಡಿಕೆ ತೋಟ, ಮಾವು,ಶ್ರೀಗಂಧದಂತಹ ಅಮೂಲ್ಯ ಬೆಳೆಗಳನ್ನು ನಾಶಮಾಡಬಹುದು.

ರೈತ ಬಾಂಧವರೆ, ಜಾಗರೂಕರಾಗಿ. ಜವಾಬ್ದಾರಿಯಿಂದ ನಡೆದು.ರೈತರ ಬದುಕನ್ನು ಉಳಿಸೋಣ. ಪರಿಸರವನ್ನು ಕಾಪಾಡೋಣ.ನಮ್ಮ ನಾಡಿನ ಕೃಷಿಯನ್ನು ರಕ್ಷಿಸೋಣ.

Sathish munchemane

Join WhatsApp

Join Now

 

Read More