ಕುಂಸಿ ಪೋಲಿಸ್ ಠಾಣೆಗೆ ದೂರು ನೀಡಲು ಹೆದರುತ್ತಿರುವ ಠಾಣೆ ವ್ಯಾಪ್ತಿಯ ರೈತರು.!?

0
345

ಕುಂಸಿ ಪೋಲಿಸ್ ಠಾಣೆ ವ್ಯಾಪ್ತಿ: ಎರೆಕೊಪ್ಪ ಹೊಸುರು  ಸೇರಿದಂತೆ  ಇತರೆ ಗ್ರಾಮದಲ್ಲಿ ಕಳ್ಳರ ಹಾವಳಿ ಇತ್ತಿಚೆಗೆ ಹೆಚ್ಚಾಗಿದ್ದು, ಜನ ಕುಂಸಿ ಠಾಣೆ ಪೋಲಿಸ್ ವ್ಯವಸ್ಥೆಯ  ಬಗ್ಗೆ ಬೇಸತ್ತು ಹೋಗಿದ್ದಾರೆ.

ಎರೆಕೊಪ್ಪ ಹೊಸುರು ಕಾಶಪ್ಪ ಭೋವಿ ಅವರ ಮನೆಯ ಹಿಂದಿನ  ಕೋಟ್ಟಿಗೆ ಯಲ್ಲಿ ಕಟ್ಟಿದ ಸುಮಾರು ₹50 ಸಾವಿರ ಮೌಲ್ಯದ ಹೋರಿ ನೆನ್ನೆ ರಾತ್ರಿ 3 ಗಂಟೆ ಸುಮಾರಿಗೆ  ಕಳುವಾಗಿದೆ

ರಾತ್ರಿ ಮನೇಯ ಕೋಟ್ಟಿಗೆಯಲ್ಲಿ ಕಟ್ಟಿರುವ ಜಾನುವಾರು,  ವೈರ್,  ಪಂಪ್ಸೆಟ್‌ಗಳನ್ನು ಕದ್ದೊಯ್ಯುತ್ತಿದ್ದು, ರೈತರಿಗೆ ಹಾನಿಯುಂಟು ಮಾಡುತ್ತಿದ್ದಾರೆ. ಇದರ ಬಗ್ಗೆ ಪೋಲಿಸ್ ಠಾಣೆಗೆ  ದೂರ ನೀಡಲು ಹೋದರೆ ದೂರು ತೆಗೆದು ಕೋಂಡು ಹೋಡಕಿ ಕೋಟ್ಟ ಪ್ರಕರಣ  ತುಂಬ ವಿರಳ ಹಾಗಾಗಿ  ಕಾಶಭೋವಿ ರೈತ  ಕಂಪ್ಲೆಂಟ ನೀಡದೆ ಪೋಲಿಸರಿಗೆ ಹೀಡಿ ಶಾಪ ಹಾಕುತ್ತಾ ಮನೆಯಲ್ಲಿ ಕೂತಿದ್ದಾರೆ

ಕುಂಸಿ ಠಾಣೆ ವ್ಯಾಪ್ತಿಯ ರೈತರ ಪಂಪಸೆಟ್, ಮುದ್ದಿನಕೊಪ್ಪದ ರೈತರ ಹಸು ಹಾಗೂ ದ್ವಿಚಕ್ರ ವಾಹನ  ಆಯೂನುರಿ ನಲ್ಲಿ ಹಬ್ಬಕ್ಕೆ ಪೂಜೆ ಮಾಡಿ ನಿಲ್ಲಿಸಿದ ಟ್ರಾಕ್ಟರ್ ಸೆರಿದಂತೆ ಇತರೆ ಹೆಚ್ಚಿನ ಬೆಲೆಯ ಕೃಷಿ ಪರಿಕರ ಕಳುವು ಅತಿ ಮಾಡುತ್ತಿದ್ದಾರೆ. ಇದರಿಂದ ಅನ್ನದಾತ ಸಂಕಷ್ಟ ಅನುಭವಿಸುತ್ತಿದ್ದಾನೆ. ಕೂಡಲೆ ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಬೇಕು. ರೈತರ ಜಾನುವಾರು, ಪಂಪಸೆಟ್ ಮತ್ತಿತರ ಪರಿಕರಗಳನ್ನು ಜಪ್ತಿ ಮಾಡಿ ರೈತರಿಗೆ ಮರಳಿಸಬೇಕು ಎಂದು  ಹಲವು ರೈತರು ಆಗ್ರಹಿಸಿದ್ದಾರೆ.

  ಇನ್ನಾದರು ಕುಂಸಿ ಠಾಣೆ ಪೋಲಿಸ್ರು ರೈತನ ಮನ ವೊಲಿಸಿ ದೂರು ದಾಖಲಿಸಿ  ಪ್ರಕರಣ ವನ್ನು ಬೇದಿಸಿ ಕುಂಸಿ ಠಾಣೆ ಗೆ ಅಂಟಿರುವ ಕಪ್ಪು ಮಸಿಯ ಕಳಂಕ ಅಳಿಸಿ  ಕರ್ನಾಟಕ ಪೋಲಿಸ್ ಅಂದರೆ ಎನು ಎಂಬುದನ್ನು ಸಾರ್ವಜನಿಕರಿಗೆ ತೋರಿಸಲಿ ಎಂಬುದು ಪತ್ರಿಕೆಯ ಆಶಯವಾಗಿದೆ.