ಆರ್ಥಿಕ ಸಾಕ್ಷರತಾ ಸಪ್ತಾಹ ಎಲ್ಲಿ ! ಯಾವಾಗ..?

0
172
Oplus_131072

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಶಿವಮೊಗ್ಗ ಜಿಲ್ಲೆ ಮತ್ತು
ಕೆನರಾ ಬ್ಯಾಂಕ್ – ಲೀಡ್ ಬ್ಯಾಂಕ್ ಶಿವಮೊಗ್ಗ -ಇದರ ಸಹಯೋಗದೊಂದಿಗೆ
केनरा बैंक Canara Bank
RBI FINANCIAL LITERACY WEEK – 2025
ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ಇಂದು ಚೈತನ್ಶ ಸೌಧ ಶಿವಮೊಗ್ಗದಲ್ಲಿ ನೆರವೇರಿತು  ಕಾರ್ಯಕ್ರಮದ ಸಂಪನ್ಮೂಲವ್ಯಕ್ತಿ  ಶಂಕರಪ್ಪ, FLC ಶಿವಮೊಗ್ಗ ರವರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ || ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ | ಎಲ್ಲರೊಳಗೊಂದಾಗು -ಮಂಕುತಿಮ್ಮ|| ಎಂಬ ಕವಿಯ ನುಡಿಯೋಂದಿಗೆ ಮಹಿಳೆಯರು ನೀವು  ಧರ್ಮಸ್ಥಳ ಸಂಘದ ಸದಸ್ಯರಾದ ಮೇಲೆ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಂಡು ಮನೆಯಿಂದ ಹೊರಬಂದು ಸಭೆಯಲ್ಲಿ ಭಾಗವಹಿಸುವಂತೆ ಆಗಿದೆ  ಇತ್ತೀಚೆಗೆ ಪುರುಷರಿಗೆ ಆದಾಯ ಜಾಸ್ತಿಯಾಗಿ ಆಯಸ್ಸು ಕಮ್ಮಿಯಾಗಿದೆ ಆದರೆ ಸ್ತ್ರಿಯರಿಗೆ ಆಯಸ್ಸು ಜಾಸ್ತಿಯಾಗಿದೆ ಎಕೆಂದರೆ ಸ್ತ್ರೀಯರು ಜವಾಬ್ದಾರಿಯು ಜಾಸ್ತಿಯಾಗಿದೆ ಇಷ್ಟಪಟ್ಟು ಕಷ್ಟಪಟ್ಟು ಮನೆಯ ನಿರ್ವಹಣೆ ಜವಾಬ್ದಾರಿಯನ್ನು ಸ್ತ್ರೀಯರು ಹೋತ್ತಿದ್ದು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅದಕ್ಕೆ ಸಂಬಳ ಏನಾದರೂ ಮನೆ ಯಜಮಾನ ನೀಡುತ್ತಿದ್ದಾನೆಯೆ?
ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರು ಒಂದು ಬಜೆಟ್ ಹಾಕಿಕೊಳ್ಳಬೇಕಾಗುತ್ತದೆ ಏಕೆಂದರೆ ಅನಿರೀಕ್ಷಿತ ಖರ್ಚು ವೆಚ್ಚಗಳು ಬರಬಹುದು ಹಲವು ಸೇವಿಂಗ್ಸ್ ಮಾಡಿಕೊಂಡಿದ್ದರೆ ಆರ್ ಡಿ ಕಟ್ಟುವುದು ಮಕ್ಕಳ ವಿದ್ಯಾಭಾಸಕ್ಕೆ ಈ ಹಣಗಳನ್ನು ವ್ಯಹಿಸಬಹುದು
ನಾರಿ ಕಲಿತರೆ ಮನೆ ಸದೃಢವಾಗಿ ಬೆಳೆಸಬಹುದು ಪ್ರಧಾನಮಂತ್ರಿಯವರು 2014ರಲ್ಲಿ ಜನಧನ್ ಖಾತೆಯನ್ನು ಬ್ಯಾಂಕ್ಗಳಲ್ಲಿ ಉಚಿತವಾಗಿ ತೆರೆದರು 53 ಕೋಟಿ ಜನ ದನ್ ಖಾತೆಯನ್ನು ಉಚಿತವಾಗಿ ತೆರೆದಿದ್ದಾರೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜಿಡಿವೈ)ಯನ್ನು 2014ರ ಅಗಸ್ಟ್ 29ರಂದು ಮಾನ್ಯ ಪ್ರಧಾನ ಮಂತ್ರಿಯವರುಪ್ರಾರಂಭಿಸಿದರು
ಬ್ಯಾಂಕ್ ಖಾತೆಯನ್ನು ತೆರೆಯುವುದುರ ಮೂಲಕ ಗ್ರಾಮೀಣ ಮತ್ತು ಪ್ರದೇಶಗಳನ್ನು ಒಳಗೊಳ್ಳುವಂತೆ ಯೋಜನೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದೆ.
ಹತ್ತು ವರ್ಷಕ್ಕೆ ಮೆಲ್ಲಟ್ಟ ಒರ್ವ ಆಪ್ರಾಪ್ತನೂ ಕೂಡ ಯಾವುದೇ ಬ್ಯಾಂಕನಲ್ಲಿ ತನ್ನ ಖಾತೆಯನ್ನು ತೆರೆಯಬಹುದಾಗಿದೆ.
ರುಪೇ ಡೆಬಿಟ್ ಕಾರ್ಡ್ ಗ್ರಾಹಕನಿಗೆ ಯಾವುದೇ ದಂಡವಿಲ್ಲದೆ ರೂ ಒಂದು ಲಕ್ಷದ ಅಂತರ್ಗತ ಅಪಘಾತ
ಕೈ ವಿಮಾ ಸೌಲಭ್ಯವನ್ನು ಒದಗಿಸುತ್ತದೆ.
ಅಂತರ್ಗತ ಅಪಘಾತ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ ರುಪೇ ಡೆಬಿಟ್ ಕಾರ್ಡ್‌ ನ್ನು ಪ್ರತಿ 45 ದಿನಕ್ಕೊಮ್ಮೆಯಾದರೂ ಬಳಸತಕ್ಕದು.
ರೂ. 5000ದ ವರೆಗಿನ ಓವರ್ ಡ್ರಾಫ್ಟ್ ಸೌಲಭ್ಯವು ಕುಟುಂಬದ ಒಬ್ಬ ಖಾತೆದಾರನಿಗೆ ಸದರಿ ಖಾತೆಯನ್ನು ತೃಪ್ತಕರವಾಗಿ ನೋಡಿಕೊಂಡ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ.
ಪಿಎಂಎಎಸ್‌ ಬಿವೈ ಎನ್ನುವುದು ಒಂದು ಅಪಘಾತ ವಿಮಾ ಜೋಜನೆಯಾಗಿದು ಅಪಘಾತವಾಗಿ ಮರಣ ಹೊಂದಿದರೆ ಅಥವಾ ಅಂಗವೈಕಲ್ಯ ಉಂಟಾದರೆ ಈ ಯೋಜನೆಯಡಿಯಲ್ಲಿ ಖಾತೆದಾರನಿಗೆ ರೂ ಎರಡು ಲಕ್ಷದವರೆಗಿನ ವಿಮಾ ಹಣವುದೊರೆಯುತ್ತದೆ.

ಬ್ಯಾಂಕ್ ಉಳಿತಾಯ ಖಾತೆ ಹೊಂದಿರುವ 18ರಿಂದ70 ವರ್ಷದೊಳಗಿನ ಎಲ್ಲರೂ ಈ ಯೋಜೆನ ಸೇರಿಕೊಳ್ಳಲು ಅರ್ಹರಿರುತ್ತಾರೆ ಪ್ರತಿ ಸದಸ್ಯರು ವಾರ್ಷಿಕ 20 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ ಹಾಗೂ ಅದನ್ನು ಪ್ರತಿ ವರ್ಷನವೀಕರಿಸಬೇಕಾಗುತ್ತದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ.
ಪಿಎಂಜೆಜೆಬಿವೈ ಎನ್ನುವ ಬಿಮಾಯೋಜನೆಯು ಯಾವುದೆಕಾರಣಕ್ಕೆ ಸಾವು ಸಂಭವಿಸಿದರೆ ರೂ. ಎರಡು ಲಕ್ಷದ ವಿಮಾ ಮೊತ್ತವನ್ನು ನೀಡುವುದು.
ಈ ಯೋಜನೆವು ಬ್ಯಾಂಕ್ ಶಾಖೆಗಳು/ಬ್ಯಾಂಕ್ ಮಿತ್ರಗಳಲ್ಲಿ ಲಭ್ಯವಿರುತ್ತದೆ.
18 ರಿಂದ 50 ವರ್ಷದೊಳಗಿನ ಎಲ್ಲಾ ಬ್ಯಾಂಕ್ ಉಳಿತಾಯ ಖಾತೆದಾರರು ಈ ಯೋಜನೆ ಸೇರಿಕೊಳ್ಳಲು ಅರ್ಹರಿರುತ್ತಾರೆ.
– ಪ್ರತಿ ಸದಸ್ಯನಿಗೆ ವಾರ್ಷಿಕ ರೂ. 436 ಪ್ರೀಮಿಯಂ ಹಾಗೂ ಸೇವಾತೆರಿಗೆ ಪ್ರತ್ಯೇಕ ವಾರ್ಷಿಕ ನೆಲೆಯಲ್ಲಿ ನವೀಕರಿಸಬಹುದು.

ಶ್ರೀಮತಿ  ಶಾರದಮ್ಮ  ಆರ.ಎಮ್.ಕೆ.ಜಿ.ಬಿ ಬ್ಯಾಂಕ್ ಅವರ ನುಡಿ
ನಮ್ಮ ಬ್ಯಾಂಕ್ ನಿಂದ 1500 ಕೋಟಿ ಶ್ರೀ ಧರ್ಮಸ್ಥಳ ಸ್ವಸಾಯ ಸಂಘಕ್ಕೆ ಲೋನ್ ನೀಡಿದ್ದಾರೆ ಅಂದರೆ ನಮ್ಮ ಬ್ಯಾಂಕ ನವರು ಇರುವ ನಂಬಿಕೆಯಿಂದ ಮಹಿಳೆಯರು ಐಡ್ಲಗಿ ಮನೆಯಲ್ಲಿ ಕೂರದೆ ಇಲ್ಲಿಗೆ ಬಂದಿದಿರಿ ಎಂದರೆ
ಎಸ್‌.ಕೆ.ಡಿ.ಪಿ.ಕಾರಣ ಎನ್ನಬಹುದು ಮಹಿಳೆಯರು ನೀವು ಮಂಜುನಾಥ್ ಸ್ವಾಮಿಯ ಹತ್ತಿರ ಸಾಲ ಪಡೆದಿದ್ದೆವೆ ಎಂಬ ನಂಬಿಕೆಯಿಂದ ಅದಕ್ಕೆ ತಕ್ಕಂತೆ ನಾವು 10ಸಾವಿರದಿಂದ್ ಶುರುವಾಗಿ 25 ಲಕ್ಷ ದವರಗೆ ಸಾಲ ನೀಡುತಿದ್ದವೆ ಎಂದರೆ skadpಯ ರಿಪೆಮೆಂಟ್ ರಿಕವರಿ ಅರೀತಿ ಮಾಡಿದೆ,ನಮ್ಮಲ್ಲಿ 14%ಬಡ್ಡಿ ಇದೆ ಹಿಗೆ ಬಡ್ಡಿ ಬಂದ ಹಣವನ್ನು ನಿಮ್ಮ ಉಳಿತಾಯ ಖಾತೆಗೆ ಹಾಕುತಿದ್ದೆವೆ  ಎಂದು ಸಂಘದ ಮಹಿಳೆಯರಿಗೆ ವಿವರಿಸಿದರು.

ನಬಾರ್ಡ್ ಶಶಿದರ ನುಡಿ 1982 ರಲ್ಲಿ ನಬಾರ್ಡ್ ಶುರುವಾಯಿತು.
ಆರ್ಥಿಕ ಸಕ್ಷಾರತೆ.

SIG ಗ್ರುಪ್ ನಲ್ಲಿ 10 ಜನರು ಇರುತ್ತಾರೆ, ಪಂಚ ಸೂತ್ರ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು, ಹಾಗು ಸೈಬರ್  ಕ್ರೈಮ್ ಬಗ್ಗೆ ನಿಮ್ಮಲ್ಲಿ   ಎಷ್ಟು ಜನರ ಹತ್ತಿರ ಎ.ಟಿ.ಎಮ್. ಇದೆ ಎಂದು ಕೇಳಿದಾಗ ನೆರೆದಿದ್ದ ಎಲ್ಲಾರು ತಮ್ಮ ಕೈಯನ್ನು ಎತ್ತಿದರು ಇದರಲ್ಲಿ ತಮ್ಮ ಒಟಿಪಿ ತಮ್ಮ ಕಾರ್ಡ್ ಹಿಂದೆ ಎಷ್ಟು ಜನ ನಮೂದಿಸಿದ್ದರಿ ಎಂದು ನಗೆಯ ಚಾಟಕಿ ಹಾರಿಸಿದರು
ಹಲವು ಸೂಚನೆ
ಅನಧಿಕೃತ ಇ-ಮೇಲ್, ಎಸ್.ಎಮ್.ಎಸ್. ಮತ್ತು ಫೋನ್ ಕರೆಗಳು ರಿಜರ್ವ ಬ್ಯಾಂಕ ಹೆಸರಲ್ಲಿ ಅಥವಾ ನಿಮ್ಮದೇ ಬ್ಯಾಂಕನಿಂದ ಹಣದ ಭರವಸೆ ನೀಡಿದರೆ ಮೋಸ ಹೋಗದಿರಿ.
ಅನಧಿಕೃತ ಇಮೇಲ್, ಲಾಟರಿ ಗೆದ್ದಿರುವ ಬಗ್ಗೆ ಅಥವಾ ಯಾವುದಾದರೂ ಸಣ್ಣ ಕೊಡುಗೆಯನ್ನು ನಮ್ಮ ದೇಶ ಅಥವಾ ವಿದೇಶದವರು ಆರ್.ಬಿ.ಐ. ಹೆಸರಿನಲ್ಲಿ ವ್ಯವಹರಿಸಿದರೆ ನಂಬಬೇಡಿ-ಇವು ಮೊಸದಾಟಗಳು.
ಯಾವುದೇ ಸಂಸ್ಥೆಯಿಂದ ದೊಡ್ಡ ಮೊತ್ತದ ಹಣದಾಸೆಗಾಗಿ ಮೊದಲೆ ಹಣಸಂದಾಯವಾಗಲಿ (ಕಮೀಶನ್, ವರ್ಗಾವಣೆ ಶುಲ್ಕ) ನೀಡಬೇಡಿ. ಹಾಗೆ ಮಾಡಿದರೆ ಮೋಸ ಹೋಗುತ್ತೀರಿ
ಆರ್.ಬಿ.ಐ. ಯಾವುದೇ ವ್ಯಕ್ತಿಯೊಂದಿಗೆ ಖಾತೆ ತೆಗೆಯುವುದಾಗಲಿ, ಕರೆಂಟ್ ಅಕೌಂಟಾಗಲಿ, ಮುದ್ದತಿ ಠೇವನ್ನು ಮಾಡುವುದಿಲ್ಲಾ. ಡೆಬಿಟ್ ಕ್ರೇಡಿಟ್ ಕಾರ್ಡನ್ನು ನೀಡುವುದಿಲ್ಲಾ.
ನಿಮ್ಮ ಬ್ಯಾಂಕ ಅಕೌಂಟ, ಕ್ರೇಡಿಟ್ ಡೆಬಿಟ್ ಕಾರ್ಡ ಮಾಹಿತಿಯನ್ನು ಎಸ್.ಎಂ.ಎಸ್. ಇಮೇಲ್ ಅಥವಾ ಫೋನ್ ಮೂಲಕವಾಗಲಿ ಯಾರಿಗೂ ನೀಡಬೇಡಿ. ಆರ್.ಬಿ.ಐ. ಅಥವಾ ನಿಮ್ಮ ಬ್ಯಾಂಕ್ ಇಂತಹ ಮಾಹಿತಿಯನ್ನು ಕೇಳುವುದಿಲ್ಲ.
ನಿಮ್ಮ ಖಾತೆ ವಿವರ, ಇಂಟರ್‌ನೆಟ್ ಬ್ಯಾಂಕ ಯುಜರ್ ಐಡಿ, ಪಾಸ್‌ವರ್ಡ, ಡೆಬಿಟ್ ಕ್ರೇಡಿಟ್ ಕಾರ್ಡ ಸಂಖ್ಯೆಯನ್ನು CVV, ATM, Pin, OTP ಯನ್ನು ಬೇರೆಯವರಿಗೆ ನೀಡಬೇಡಿ.
ಲಾಟರಿ ಕೊಡುಗೆ, ದೊಡ್ಡ ಮೊತ್ತದ ಹಣದ ಭರವಸೆಗಳನ್ನು ದೇಶೀಯವಾಗಲಿ, ವಿದೇಶಿಯವಾಗಲಿ ನೀಡಿದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ 1930 ಕಾಲ್ ಮಾಡಿ ದೂರು ನೀಡಿ ಎಂದು ಸೈಬರ್ ಕ್ರೈಮ್ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಈ ಸಮಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನ ಸದಸ್ಯರು, ಅಧಿಕಾರಿಗಳಾದ ಉಮೇಶ್,ಹೊನ್ನಪ್ಪ,ಚಂದ್ರಶೇಖರ,ಕಾಂತೇಶ್,ಗೀತಾ,ಮುರಳಿಧರ್ ಶೆಟ್ಟಿ, ರೂಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.